ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರು ಸಾವಿರಾರು ಗಣ್ಯರು (Anant Ambani Wedding), ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಅಂಬಾನಿಯವರ ವಿವಾಹ ಸಮಾರಂಭವನ್ನು ಮೆಗಾಲೊಡಾನ್ ಕ್ರಿಯೇಟಿವ್ ಟೆಕ್ ಕಂಪನಿ ಮುಖ್ಯಸ್ಥ “ಎಐ” (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) (AI imagines Anant Ambani) ಶಾಹಿದ್ ಎಸ್‌ಕೆ ವಿನ್ಯಾಸಗೊಳಿಸಿದ್ದಾರೆ.
ಶಾಹಿದ್ ಎಸ್‌ಕೆ ಲಿಂಕ್ಡ್ ಇನ್ ಖಾತೆಯಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. Photo Credit- ಶಾಹಿದ್ ಎಸ್‌ಕೆ ಐ
ವಧು ರಾಧಿಕಾ ಮರ್ಚೆಂಟ್ ಅವರನ್ನು ರೆಡಿ ಮಾಡಿಕೊಂಡು ನೀತಾ ಅಂಬಾನಿ ಎಲ್ಲರ ಮುಂದೆ ಕರೆದುಕೊಂಡು ಬರುವ ದೃಶ್ಯ ಎಐನಲ್ಲಿ ಈ ರೀತಿಯಾಗಿ ಮೂಡಿ ಬಂದಿದೆ.
ಇದನ್ನೂ ಓದಿ: Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?
ಈ ಪೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋಟೊ ನೋಡಿದ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ಕೆಲವು ಫೋಟೊಗಳಲ್ಲಿ ದೇವಸ್ಥಾನದಲ್ಲಿ ಅನಂತ್ ಮತ್ತು ರಾಧಿಕಾ ಪರಸ್ಪರವಾಗಿ ಹಾರ ಬದಲಿಸಿಕೊಳ್ಳುವ ರೊಮ್ಯಾಂಟಿಕ್ ಸನ್ನಿವೇಶ ಎಐನಲ್ಲಿ ಇದೆ. ಇದೀಗ ಈ ಎಲ್ಲ ಫೋಟೊಗಳು ಭಾರಿ ವೈರಲ್ ಆಗುತ್ತಿವೆ.