ಬೆಂಗಳೂರು: ಐಶ್ವರ್ಯಾ ರೈ (Aishwarya Rai) ಅವರ ತಂದೆ ಕೃಷ್ಣರಾಜ್ ರೈ ಅವರು 2017ರ ಮಾರ್ಚ್ 18 ರಂದು ನಿಧನರಾಗಿದ್ದರು. ಅಂದಿನಿಂದ ಪ್ರತಿ ವರ್ಷ, ನಟಿ ತಂದೆಯ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡು ಫೋಟೊ ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಅವುಗಳಲ್ಲಿ ಒಂದು ಆರಾಧ್ಯ ಬಚ್ಚನ್ ಚಿಕ್ಕವಳಿದ್ದಾಗ ಅಜ್ಜನಿಗೆ ಚುಂಬಿಸುತ್ತಿರುವ ಹಳೆಯ ಫೋಟೊ, ಇನ್ನೊಂದು ತಂದೆ ಕೃಷ್ಣರಾಜ್ ರೈ ಅವರ ಫೋಟೊ ಫ್ರೇಮ್ ಮುಂದೆ ಐಶ್ವರ್ಯಾ ರೈ ಮಗಳು ಆರಾಧ್ಯ ಮತ್ತು ತಾಯಿ ವೃಂದಾ ರೈ ಜತೆಗೆ ಸೆಲ್ಫಿ ತೆಗೆದುಕೊಂಡ ಫೋಟೊ ಪೋಸ್ಟ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ಫೋಟೊ ಜತೆಗೆ, “ಅಪ್ಪ ನಿಮ್ಮನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ. ನನ್ನ ಪ್ರೀತಿಯ ಡ್ಯಾಡಿ-ಅಜ್ಜ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ.” ಎಂದು ಬರೆದುಕೊಂಡಿದ್ದಾರೆ.
ನಾವು ತುಂಬ ಮಿಸ್ ಮಾಡಿಕೊಳ್ಳುತ್ತೇವೆ ಅಪ್ಪ
ಐಶ್ವರ್ಯಾ ರೈ ಅವರು ಈ ಹಿಂದೆ ತಂದೆಯ ಜನುಮದಿನ ಪೋಸ್ಟ್ ಜತೆಗೆ ʻʻಅಪ್ಪ ನಿಮ್ಮನ್ನು ಎಂದಿಗೂ ಪ್ರೀತಿಸುತ್ತೇನೆ, ಪ್ರೀತಿಯ ಮುದ್ದು ಅಪ್ಪ-ಅಜ್ಜಾ ಹುಟ್ಟುಹಬ್ಬದ ಶುಭಾಶಯಗಳು. ಸ್ಮರಣಾರ್ಥ ಪ್ರಾರ್ಥನೆಗಳು. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆʼʼಎಂದು ಐಶ್ವರ್ಯಾ ರೈ ಶೀರ್ಷಿಕೆ ನೀಡಿದ್ದರು. ಸ್ಮೈಲ್ ಟ್ರೈನ್‌ನ ಗ್ಲೋಬಲ್ ಗುಡ್‌ವಿಲ್ ರಾಯಭಾರಿಯಾಗಿ, ಐಶ್ವರ್ಯಾ ಅವರು 2009ರಿಂದ ಸಂಸ್ಥೆಯನ್ನು ಬೆಂಬಲಿಸುತ್ತಿದ್ದಾರೆ.
ಇದನ್ನೂ ಓದಿ: Aishwarya Rai: ಆರಾಧ್ಯಳನ್ನು ಹೊಗಳಿದ ಬೆನ್ನಲ್ಲೆ ಐಶ್ವರ್ಯಾ ರೈ ಮೆಚ್ಚಿದ ನೆಟ್ಟಿಗರು!
ಐಶ್ವರ್ಯಾ ಕುಟುಂಬದಲ್ಲಿ ಬಿರುಕು?
ಈ ಹಿಂದೆ ಅಮಿತಾಭ್ ಬಚ್ಚನ್ ತಮ್ಮ 81ನೇ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಮಧ್ಯರಾತ್ರಿಯೇ ಸಂಭ್ರಮಾಚರಣೆಯಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಭಾಗಿಯಾಗಿ ವಿಶಸ್ ಕೂಡ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಜಯಾ ಬಚ್ಚನ್, ಆರಾಧ್ಯಾ ಬಚ್ಚನ್ ಮತ್ತು ಅಗಸ್ತ್ಯ ನಂದಾ ಅಮಿತಾಭ್ ಅವರ ಜತೆ ಇರುವ ಫೋಟೊ ಕೂಡ ಶೇರ್ ಮಾಡಿಕೊಂಡಿದ್ದರು. ಇದೇ ಫೋಟೊವನ್ನು ಅಕ್ಟೋಬರ್ 12ರಂದು ಐಶ್ವರ್ಯಾ ರೈ ಫೋಟೊ ಹಂಚಿಕೊಂಡಿದ್ದರು ಆದರೆ ಅತ್ತೆ ಜಯಾ ಬಚ್ಚನ್, ನವ್ಯಾ ನವೇಲಿ ನಂದಾ ಅವರನ್ನು ಹೊರಗಿಟ್ಟು, ಅಮಿತಾಭ್ ಬಚ್ಚನ್ ಜತೆ ಆರಾಧ್ಯಾ ಬಚ್ಚನ್ ಮಾತ್ರ ಕಾಣುವಂತೆ ಕ್ರಾಪ್ ಮಾಡಿ ಫೋಟೊ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಐಶ್ವರ್ಯಾ ರೈ ಬಚ್ಚನ್ ಕುಟಂಬದಲ್ಲಿ ಏನೋ ಕಿರಿಕ್ ಇದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ಇದರಿಂದ ನಟಿ ಸಾಕಷ್ಟು ಚರ್ಚೆಯಲ್ಲಿದ್ದರು.