ಬೆಂಗಳೂರು: ಐಶ್ವರ್ಯಾ ರೈ (Aishwarya Rai ) ಬಚ್ಚನ್ ಅವರು ಪತಿ ಅಭಿಷೇಕ್ ಬಚ್ಚನ್‌ಗೆ ಡಿವೋರ್ಸ್ ಕೊಟ್ಟಿದ್ದಾರೆ ಎಂಬ ವಿಚಾರದ ಬಗ್ಗೆ ಸುದ್ದಿಯಲ್ಲಿದ್ದಾರೆ. ಸದ್ಯ ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಐಶ್ವರ್ಯಾ ಅವರು ಅನಂತ್ ಮತ್ತು ರಾಧಿಕಾ ಅವರ ಮದುವೆಯಲ್ಲಿ ಮಗಳ ಜತೆ ಭಾಗಿಯಾಗಿದ್ದಕ್ಕೆ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಅವರು ನ್ಯೂಯಾರ್ಕ್‌ನಿಂದ ಹಿಂದಿರುಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕೂಡ ಅಭಿಷೇಕ್ ಇರಲಿಲ್ಲ. ಹೀಗಾಗಿ ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಸತ್ಯ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ವೀಡಿಯೊದಲ್ಲಿ, ಐಶ್ವರ್ಯಾ ಅವರು ಸಂಪೂರ್ಣವಾಗಿ ಕಪ್ಪು ಬಟ್ಟೆಯಲ್ಲಿ ಕಂಡಿದ್ದಾರೆ. ಆರಾಧ್ಯ ಕೂಡ ತಾಯಿಯ ಜತೆಗೆ ಇದ್ದರು. ಲ್ಯಾವೆಂಡರ್-ಹ್ಯೂಡ್ ಸ್ವೆಟ್‌ಶರ್ಟ್ ಧರಿಸಿದ್ದರು. ಈ ಮುಂಚೆಯೆ ಐಶ್ವರ್ಯಾ ಅವರು ವಕೇಶನ್ ಸಲುವಾಗಿ ನ್ಯೂಯಾರ್ಕ್‌ಗೆ ತೆರಳಿದ್ದರು ಎಂದು ವರದಿಯಾಗಿತ್ತು. ಇದೀಗ ಅಮ್ಮ ಮಗಳು ಮಾತ್ರ ವಕೇಶನ್ ಎಂಜಾಯ್ ಮಾಡಿರುವಂತೆ ಕಂಡಿದೆ. ಅಭಿಷೇಕ್ ಜತೆ ಅಮ್ಮ ಮಗಳು ಹೋಗಿಲ್ಲ ಎಂದು ಈ ವಿಡಿಯೊ ಮೂಲಕ ಕಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ (Anant Ambani Wedding) ಮಹಾರಾಷ್ಟ್ರದ ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದಿತ್ತು. ಐಶ್ವರ್ಯಾ ರೈ ಮಾತ್ರ ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಹಾಗೂ ಇತರರು ಒಟ್ಟಾಗಿ ಮದುವೆಗೆ ಆಗಮಿಸಿದ್ದರು. ಆದರೆ, ಈ ವೇಳೆ ಐಶ್ವರ್ಯಾ ಇರಲಿಲ್ಲ. ಮದುವೆಗೆ ಹಾಜರಾಗುತ್ತಿಲ್ಲವೇನೋ ಎಂದು ಕೆಲವರು ಭಾವಿಸಿದ್ದರು. ಬಳಿಕ ಅವರು ಮದುವೆಗೆ ಹಾಜರಿ ಹಾಕಿದ್ದರು. ಇನ್ನು ಆ ಬಳಿಕ ಐಶ್ವರ್ಯಾ ರೈ ಅವರು ಮಗಳ ಜತೆ ಪೋಸ್ ಕೊಟ್ಟಿದ್ದರು. ಐಶ್ವರ್ಯಾ ರೈಗೆ ಬಚ್ಚನ್ ಕುಟುಂಬದ ಜತೆ ಕಿರಿಕ್ ಮಾಡಿಕೊಂಡಿರುವುದು ನಿಜ ಎಂದು ಅನೇಕರು ಮಾತನಾಡಿಕೊಂಡಿದ್ದರು. ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್-ಜಯಾ ಬಚ್ಚನ್ ದಂಪತಿ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಚರ್ಚೆ ಮೊದಲಿನಿಂದಲೂ ಇತ್ತು.