ಬೆಂಗಳೂರು: ಐಶ್ವರ್ಯಾ ರೈ (Aishwarya Rai ) ಬಚ್ಚನ್ ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವವಾದ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ (Cannes 2024) ಎರಡನೇ ಬಾರಿ ಮಿಂಚಿದ್ದಾರೆ. ಸ್ಕ್ರೀನಿಂಗ್ ಆಫ್ ಕೈಂಡ್ಸ್ ಆಫ್ ಕೈಂಡನೆಸ್ ಪ್ರದರ್ಶನಕ್ಕೆ ಹಾಜರಾಗುವ ಮೊದಲು ನಟಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಐಶ್ವರ್ಯಾ ರೈ ಅವರು ಎರಡನೇ ಬಾರಿ ಬೆಳ್ಳಿ ಮತ್ತು ನೀಲಿ ಮಿಶ್ರಿತ ಗೌನ್ ಧರಿಸಿದ್ದರು. ಫಲ್ಗುಣಿ ಮತ್ತು ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಸ್ಕರ್ಟ್ ಇದಾಗಿತ್ತು. ಆದರೆ ಈ ಸ್ಕರ್ಟ್ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ.
ಫಲ್ಗುಣಿ ಮತ್ತು ಶೇನ್ ಪೀಕಾಕ್ ಅವರು ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ಅವರ “ಮೆಗಾಲೋಪೊಲಿಸ್” ನ ಪ್ರಥಮ ಪ್ರದರ್ಶನಕ್ಕಾಗಿ ಉಡುಪನ್ನು ವಿನ್ಯಾಸಗೊಳಿಸಿದರು. ಆದರೆ ಈ ಗೌನ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬರು ʻʻಈ ಗೌನ್‌ನಲ್ಲಿ ತುಂಬ ಚೆಂದ ಕಾಣುತ್ತೀರಿ. ಆದರೆ ಇದು ಕಾನ್ ಉತ್ಸವಕ್ಕೆ ಸರಿ ಹೊಂದುವಂತಿಲ್ಲʼʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಬರ್ತ್‌ಡೇ ಪಾರ್ಟಿ ಇಂದ ಪ್ರಭಾವಿತರಾದರೇ? ನಿಮ್ಮ ಸ್ಟೈಲಿಶ್‌ರನ್ನು ಮೊದಲು ಕೆಲಸದಿಂದ ಕಿತ್ತು ಹಾಕಿʼʼ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Aishwarya Rai : ಐಶ್ವರ್ಯಾ ರೈಯಂತ ಕಣ್ಣು ಬೇಕೇ? ಮೀನು ತಿನ್ನಿ; ಮಹಾರಾಷ್ಟ್ರದ ಸಚಿವನ ವಿವಾದಾತ್ಮಕ ಹೇಳಿಕೆ
ಪ್ರತಿ ವರ್ಷದಂತೆ ಈ ವರ್ಷವೂ ನಟಿ ಐಶ್ವರ್ಯಾ ರೈ ರೆಡ್ ಕಾರ್ಪೆಟ್ ಮೇಲೆ ನಡೆದಿದ್ದಾರೆ. ಐಶ್ವರ್ಯಾ ಫಲ್ಗುಣಿ ಶೇನ್ ಪೀಕಾಕ್ ಗೌನ್ (Falguni Shane Peacock creation) ಧರಿಸಿದ್ದರು. ವಿಶೇಷ ಏನೆಂದರೆ, ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಅವರು ರೆಡ್ ಕಾರ್ಪೆಟ್‌ನಲ್ಲಿ (Cannes Red Carpet) ನಡೆದು ಬಂದಿದ್ದಾರೆ.
2002ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಅವರು ಕೆಂಪು ಕಾರ್ಪೆಟ್‌ನಲ್ಲಿ ಭಾರೀ ಚಿನ್ನದ ಆಭರಣಗಳೊಂದಿಗೆ ನೀತಾ ಲುಲ್ಲಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಆ ವರ್ಷ ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಉಪಸ್ಥಿತರಿದ್ದರು. ಅಂದಿನಿಂದ, ನಟಿ ಬಹುತೇಕ ಪ್ರತಿ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ . ಲೋರಿಯಲ್ ಪ್ಯಾರಿಸ್‌ನ ಬ್ರ್ಯಾಂಡ್ ಅಂಬಾಸಿಡರ್‌ಗಳಲ್ಲಿ ಒಬ್ಬರಾಗಿ ಅವರು ಮತ್ತೊಮ್ಮೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ: Aishwarya Rai: ಅತ್ತೆ, ನಾದಿನಿ ಕ್ರಾಪ್ ಮಾಡಿ ಫೋಟೊ ಹಂಚಿಕೊಂಡ ಐಶ್ವರ್ಯಾ ರೈ; ಕುಟುಂಬದಲ್ಲಿ ಬಿರುಕು?
ಐಶ್ವರ್ಯಾ ಜತೆಗೆ, ನಟರಾದ ಅದಿತಿ ರಾವ್ ಹೈದರಿ, ಶೋಬಿತಾ ಧೂಲಿಪಾಲ ಮತ್ತು ಕಿಯಾರಾ ಆಡ್ವಾಣಿ ಕೂಡ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಊರ್ವಶಿ ರೌಟೇಲಾ ಅವರು ಈಗಾಗಲೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಗುಲಾಬಿ ಬಣ್ಣದ ಉಡುಪಿನಿಂದ ಕಂಗೊಳಿಸಿದ್ದಾರೆ. ಪೋಸ್ ಕೂಡ ಕೊಟ್ಟಿದ್ದಾರೆ. 2024, ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ.