Site icon Vistara News

Aishwarya Rai:   ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಮುಗಿದ ಬಳಿಕ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

Aishwarya Rai undergo surgery post her return from Cannes Film Festival

ಬೆಂಗಳೂರು: ಐಶ್ವರ್ಯಾ ರೈ ಬಚ್ಚನ್ (Aishwarya Rai) ಅವರು 77ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ (77th Cannes Film Festival) ಎರಡು ಶೇಡ್‌ನಲ್ಲಿ ಕಂಡಿದ್ದಾರೆ. ಕೈಗೆ ಬ್ಯಾಂಡೇಜ್‌ ಸುತ್ತಿಕೊಂಡಿದ್ದರೂ ನಟಿ ಸಖತ್‌ ಆಗಿಯೇ ಪೋಸ್‌ ಕೊಟ್ಟರು. ಈಗ ಸಿಕ್ಕಿರುವ ಮಾಹಿತಿ ಏನೆಂದರೆ, ಭಾರತಕ್ಕೆ ವಾಪಸ್​ ಆಗುತ್ತಿದ್ದಂತೆಯೇ ಐಶ್ವರ್ಯಾ ರೈ (Aishwarya Rai) ಅವರ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಅಂತೆ.

ಮೂಲಗಳ ಪ್ರಕಾರ ಕೆಲವೇ ದಿನಗಳ ಹಿಂದೆ ಐಶ್ವರ್ಯಾ ರೈ ಬಚ್ಚನ್​ ಅವರ ಮಣಿಕಟ್ಟಿಗೆ ಪೆಟ್ಟಾಗಿತ್ತು. ನೋವು ಇದ್ದಿದ್ದರಿಂದ ಈ ಬಾರಿ ಕಾನ್​ ಫಿಲ್ಮ್​ ಫೆಸ್ಟಿವಲ್​ಗೆ ತೆರಳುವುದು ಬೇಡ ಎಂದು ಆಪ್ತರು ಸಲಹೆ ಕೂಡ ನೀಡಿದ್ದರು. ಆದರೆ ಅದಕ್ಕೆ ಐಶ್ವರ್ಯಾ ರೈ ಒಪ್ಪಲಿಲ್ಲ. ಈ ಬಾರಿ ನಟಿ ಕೈಗೆ ಬ್ಯಾಂಡೇಜ್​ ಹಾಕಿಸಿಕೊಂಡೇ ಅವರು ರೆಡ್​ ಕಾರ್ಪೆಟ್​ನಲ್ಲಿ ಪೋಸ್​ ನೀಡಿದರು. ಮುಂದಿನ ವಾರ ನಟಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಮಗಳು ಆರಾಧ್ಯ ಬಚ್ಚನ್ ಜತೆ ಈ ಬಾರಿ ಐಶ್ವರ್ಯಾ ರೈ ಚಲನಚಿತ್ರೋತ್ಸವಕ್ಕೆ ಹೋಗಿದ್ದರು.

ಮೊದಲ ದಿನ ಐಶ್ವರ್ಯಾ ಫಲ್ಗುಣಿ ಶೇನ್ ಪೀಕಾಕ್ ಗೌನ್ (Falguni Shane Peacock creation ) ಧರಿಸಿದ್ದರು. ವಿಶೇಷ ಏನೆಂದರೆ, ಕೈಗೆ ಬ್ಯಾಂಡೇಜ್​ ಸುತ್ತಿಕೊಂಡೇ ಅವರು ರೆಡ್​ ಕಾರ್ಪೆಟ್​ನಲ್ಲಿ (Cannes Red Carpet) ನಡೆದು ಬಂದಿದ್ದರು. ಐಶ್ವರ್ಯಾ ರೈ ಅವರು ಎರಡನೇ ಬಾರಿ ಬೆಳ್ಳಿ ಮತ್ತು ನೀಲಿ ಮಿಶ್ರಿತ ಗೌನ್ ಧರಿಸಿದ್ದರು. ಫಲ್ಗುಣಿ ಮತ್ತು ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಸ್ಕರ್ಟ್ ಇದಾಗಿತ್ತು. ‌ ಆದರೆ ಈ ಸ್ಕರ್ಟ್‌ ಬಗ್ಗೆ ಅನೇಕರು ಟೀಕೆ ಮಾಡಿದ್ದರು. ಫಲ್ಗುಣಿ ಮತ್ತು ಶೇನ್ ಪೀಕಾಕ್ ಅವರು ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ಅವರ “ಮೆಗಾಲೋಪೊಲಿಸ್” ನ ಪ್ರಥಮ ಪ್ರದರ್ಶನಕ್ಕಾಗಿ ಉಡುಪನ್ನು ವಿನ್ಯಾಸಗೊಳಿಸಿದ್ದರು. ಆದರೆ ಈ ಗೌನ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಬ್ಬರು ʻʻಈ ಗೌನ್‌ನಲ್ಲಿ ತುಂಬ ಚೆಂದ ಕಾಣುತ್ತೀರಿ. ಆದರೆ ಇದು ಕಾನ್‌ ಉತ್ಸವಕ್ಕೆ ಸರಿ ಹೊಂದುವಂತಿಲ್ಲʼʼ ಎಂದು ಕಮೆಂಟ್‌ ಮಾಡಿದ್ದರು. ಇನ್ನೊಬ್ಬರು ʻʻಬರ್ತ್‌ಡೇ ಪಾರ್ಟಿ ಇಂದ ಪ್ರಭಾವಿತರಾದರೇ? ನಿಮ್ಮ ಸ್ಟೈಲಿಶ್‌ರನ್ನು ಮೊದಲು ಕೆಲಸದಿಂದ ಕಿತ್ತು ಹಾಕಿʼʼ ಎಂದು ಕಮೆಂಟ್‌ ಮಾಡಿದ್ದರು.

ಇದನ್ನೂ ಓದಿ: Aishwarya Rai : ಐಶ್ವರ್ಯಾ ರೈ ಸ್ಟೈಲಿಶ್‌ರನ್ನು ವಜಾ ಮಾಡಿ ಎಂದ ನೆಟ್ಟಿಗರು! ಯಾಕಿಷ್ಟು ಆಕ್ರೋಶ?

2002ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಅವರು ಕೆಂಪು ಕಾರ್ಪೆಟ್‌ನಲ್ಲಿ ಭಾರೀ ಚಿನ್ನದ ಆಭರಣಗಳೊಂದಿಗೆ ನೀತಾ ಲುಲ್ಲಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಆ ವರ್ಷ ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಉಪಸ್ಥಿತರಿದ್ದರು. ಅಂದಿನಿಂದ, ನಟಿ ಬಹುತೇಕ ಪ್ರತಿ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ . ಲೋರಿಯಲ್ ಪ್ಯಾರಿಸ್‌ನ ಬ್ರ್ಯಾಂಡ್‌ ಅಂಬಾಸಿಡರ್‌ಗಳಲ್ಲಿ ಒಬ್ಬರಾಗಿ ಅವರು ಮತ್ತೊಮ್ಮೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ.

Exit mobile version