ಬೆಂಗಳೂರು: ಅಜಯ್ ದೇವಗನ್ (Ajay Devgan) ಅಭಿನಯದ ‘ಮೈದಾನ್‘ ಸಿನಿಮಾ (Maidaan Movie) ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಮೊದಲ ದಿನವೇ 7 ಕೋಟಿ ರೂ. ಕಲೆಕ್ಷನ್ ಕಂಡಿದೆ. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ಆಕ್ಷನ್ ಚಿತ್ರ ʻಬಡೇ ಮಿಯಾ ಚೋಟೆ ಮಿಯಾʼ (bade miyan chote miyan) ಸಿನಿಮಾ ಕೂಡ ಒಳ್ಳೆಯ ಕಲೆಕ್ಷನ್ ಮಾಡಿದೆ. ʻಮೈದಾನ್ʼ ಸಿನಿಮಾಗೆ ಹೋಲಿಸಿದರೆ, ಮೊದಲ ದಿನದಲ್ಲಿ 15 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ ʻಬಡೇ ಮಿಯಾ ಚೋಟೆ ಮಿಯಾʼ ಸಿನಿಮಾ.
ನಟ ಅಜಯ್ ದೇವಗನ್ (Ajay Devgn) ಅವರು “ಮೈದಾನ್ʼ ಸಿನಿಮಾದಲ್ಲಿ ಫುಟ್ಬಾಲ್ ಕೋಚ್ ಆಗಿ ಬಣ್ಣ ಹಚ್ಚಿದ್ದಾರೆ. ಬೋನಿ ಕಪೂರ್ ಅವರ ‘ಮೈದಾನ್’ ಸಿನಿಮಾವು ಫುಟ್ಬಾಲ್ ಮೂಲಕ ಭಾರತಕ್ಕೆ ಹೆಮ್ಮೆ ತಂದ ಸೈಯದ್ ಅಬ್ದುಲ್ ರಹೀಮ್ ಅವರ ಜೀವನದ ಸುತ್ತ ಸುತ್ತುವ ಕತೆಯಾಗಿದೆ. ಮೈದಾನ್ ಸಿನಿಮಾ ಈದ್ ಸಂದರ್ಭದಲ್ಲಿ ಏಪ್ರಿಲ್ 11 ರಂದು ವಿಶ್ಯಾದ್ಯಂತ ಬಿಡುಗಡೆಯಾಗಿತ್ತು.
ಏಪ್ರಿಲ್ 10ರ ಪ್ರೀಮಿಯರ್ ದಿನದಂದು ಮೈದಾನ್ ಸಿನಿಮಾ ಭಾರತದಲ್ಲಿ ಸುಮಾರು 2.6 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಏಪ್ರಿಲ್ 11ರಂದು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 4.50 ಕೋಟಿ ರೂ. ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ, ‘ಮೈದಾನ’ ಭಾರತದಲ್ಲಿ 7.10 ಕೋಟಿ ನಿವ್ವಳ ಕಲೆಕ್ಷನ್ ಮಾಡಿದೆ. ಏಪ್ರಿಲ್ 11ರಂದು, ಸಿನಿಮಾ ಒಟ್ಟಾರೆ ಶೇಕಡಾ 14.56ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ.
Dil EK, Samaj EK, Soch EK! Witness the untold true story of S.A. Rahim and his #TeamIndia, aajao #Maidaan mein, in Cinemas 10th April! 🇮🇳🏆#MaidaanFinalTrailer Out Now! ⚽#MaidaanInIMAX#MaidaanOnEid#MaidaanOnApril10#AajaoMaidaanMein#PriyamaniRaj @raogajraj @BoneyKapoor… pic.twitter.com/knOJGPJ9Wo
— Ajay Devgn (@ajaydevgn) April 2, 2024
ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ ‘ಮೈದಾನ್’ ಚಿತ್ರದಲ್ಲಿ ಪ್ರಿಯಾಮಣಿ, ಗಜರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಮಿತ್ ಶರ್ಮಾ ಅವರು ‘ಮೈದಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋಸ್, ಬೋನಿ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Ajay Devgn: ಟಬು ಜತೆಗೆ ಸಿನಿಮಾ ಮಾಡುತ್ತೀರಲ್ಲ ಯಾಕೆ? ಅಜಯ್ ದೇವಗನ್ ಉತ್ತರವೇನು?
ಬಡೆ ಮಿಯಾ ಚೋಟೆ ಮಿಯಾ
ಇನ್ನು ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ‘ಬಡೆ ಮಿಯಾ ಚೋಟೆ ಮಿಯಾ ‘ಬಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ.
‘ಬಡೆ ಮಿಯಾ ಚೋಟೆ ಮಿಯಾ ‘ ಬಾಕ್ಸ್ ಆಫೀಸ್‌ನಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 15.50 ಕೋಟಿ ನಿವ್ವಳ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದಲ್ಲಿ ಏಪ್ರಿಲ್ 11ರಂದು ಒಟ್ಟಾರೆ ಶೇಕಡಾ 30.35ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಸಂಜೆ ಮತ್ತು ರಾತ್ರಿ ಪ್ರದರ್ಶನಗಳು ಸುಮಾರು ಶೇಕಡಾ 33 ಪ್ರತಿಶತದಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದರೆ, ಬೆಳಗಿನ ಮತ್ತು ಮಧ್ಯಾಹ್ನದ ಪ್ರದರ್ಶನಗಳು ಶೇಕಡಾ 19 ಮತ್ತು ಶೇಕಡಾ 34 ರಷ್ಟು ಆಕ್ಯುಪೆನ್ಸಿ ಹೊಂದಿದ್ದವು ಎನ್ನಲಾಗಿದೆ.
ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್‌ಗೆ ದೊಡ್ಡ ಬಜೆಟ್ ನಲ್ಲಿ’ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರ ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಝಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.
ವಶು ಭಗ್ನಾನಿ ಮತ್ತು ಪೂಜಾ ಎಂಟರ್‌ಟೇನ್‌ಮೆಂಟ್ AAZ ಫಿಲಮ್ಸ್ ಸಹಯೋಗದಡಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.