ಬೆಂಗಳೂರು: ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವ ಸಮಾರಂಭದಲ್ಲಿ ಆಲಿಯಾ ಭಟ್ ಮಗಳು ರಾಹಾ ಕಪೂರ್ ಹೈಲೈಟ್ ಆಗಿದ್ದಾಳೆ. ಅನಂತ್ ಅಂಬಾನಿ ಜತೆ ರಾಹಾ ಮಾಡಿದ ಪುಟ್ಟ ಸಂವಾದದ ವಿಡಿಯೊ ವೈರಲ್ ಆಗಿದೆ. ಜಾಮ್‌ನಗರದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಎಲ್ಲರ ಕಣ್ಣುಗಳು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಪುತ್ರಿ ರಾಹಾ ಕಪೂರ್ (Alia Bhatt) ಮೇಲೆ ಇದ್ದವು. ಶನಿವಾರ ನಡೆದ ಈವೆಂಟ್‌ನಲ್ಲಿ ಆಲಿಯಾ ಅವರು ರಾಹಾಳನ್ನು ಅನಂತ್ ಅಂಬಾನಿ ಅವರಿಗೆ ಭೇಟಿ ಮಾಡಿಸಿರುವ ವಿಡಿಯೊ ವೈರಲ್ ಆಗಿದೆ.
ವೀಡಿಯೊದಲ್ಲಿ, ಆಲಿಯಾ ಅವರು ರಾಹಾಳನ್ನು ಎತ್ತಿಕೊಂಡಿದ್ದಾರೆ. ಇಬ್ಬರೂ ಕಂದು ಮತ್ತು ಬಿಳಿ ಹೂವಿನ ಪ್ರಿಂಟೆಡ್ ಬಟ್ಟೆಯನ್ನು ಧರಿಸಿದ್ದರು. ಅನಂತ್ ಅಂಬಾನಿ ಅವರನ್ನು ದೂರದಿಂದ ನೋಡುತ್ತಿದ್ದಂತೆ, ಆಲಿಯಾ ಅವರು ಅವರನ್ನು ಸ್ವಾಗತಿಸಲು ಬರುತ್ತಾರೆ. ಆಲಿಯಾ ಕೂಡ ಅನಂತ್ ಅವರಿಗೆ ಪ್ರತಿಕ್ರಿಯಿಸುವಂತೆ ರಾಹಾಳಿಗೆ ಒತ್ತಾಯಿಸುತ್ತಾರೆ. ಆದರೆ ರಾಹಾ ಮಾತ್ರ ಮಾತೇ ಆಡುವುದಿಲ್ಲ. ಈ ಕ್ಯೂಟ್ ವಿಡಿಯೊಗೆ ನೆಟ್ಟಿಗರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಭಿಮಾನಿಯೊಬ್ಬರು, “ತುಂಬಾ ಮುದ್ದಾಗಿದ್ದಾಳೆ, ರಾಹಾ!” ಎಂದು ಕಮೆಂಟ್ ಮಾಡಿದ್ದಾರೆ. ಅನಂತ್ ಅಂಬಾನಿ ಮಕ್ಕಳೊಂದಿಗೆ ತುಂಬಾ ಸೌಮ್ಯ ಮತ್ತು ಸ್ವೀಟ್ ಆಗಿರುತ್ತಾರೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Deepika Padukone: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್: ಸಖತ್ ಸ್ಟೆಪ್ಸ್ ಹಾಕಿದ ಪ್ರೆಗ್ನೆಂಟ್ ನಟಿ!
ಅಂಬಾನಿ ಕುಟುಂಬದ ಕಿರಿಯ ಸದಸ್ಯ ಅನಂತ್ ಅಂಬಾನಿ ಹಾಗೂ ಭಾರತೀಯ ಉದ್ಯಮಿ ವೀರೆನ್ ಮರ್ಚೆಂಟ್ ಮಗಳು ರಾಧಿಕಾ ಮರ್ಚೆಂಟ್ ಮದುವೆ ದಿನಾಂಕ ಫಿಕ್ಸ್ ಆಗಿದೆ. ಇದರಲ್ಲಿ ಭಾಗವಹಿಸುವ ಅತಿಥಿಗಳ ಪಟ್ಟಿಯಿಂದ ಹಿಡಿದು ಉಡುಗೊರೆಗಳು ಮತ್ತು ಆಹಾರದವರೆಗೆ ಎಲ್ಲವೂ ಕೋಟ್ಯಂತರ ವೆಚ್ಚದ ವ್ಯವಹಾರವಾಗಲಿದೆ. ಕಳೆದ ವರ್ಷ ಜನವರಿಯಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಸಾಂಪ್ರದಾಯಿಕ ಗೋಲ್ ಧನಾ ಕಾರ್ಯಕ್ರಮವಾಗಿ ನಡೆದಿತ್ತು. ಮದುವೆ ಜುಲೈ 12ರಂದು ನಡೆಯಲಿದೆ.