Site icon Vistara News

Heeramandi Trailer: ʻಹೀರಾಮಂಡಿʼ ಟ್ರೈಲರ್‌ ಕಂಡು ರಶ್ಮಿಕಾ, ಆಲಿಯಾ, ವಿಕ್ಕಿ ಕೌಶಲ್‌ ಫಿದಾ!

Heeramandi Trailer

ಬೆಂಗಳೂರು: ಸಂಜಯ್ ಲೀಲಾ ಬನ್ಸಾಲಿಯವರ ( Sanjay Leela Bhansali) ಹದಿನಾಲ್ಕು ವರ್ಷಗಳ ಕನಸಿನ ಕೂಸಾಗಿರುವ ನೆಟ್‌ಫ್ಲಿಕ್ಸ್ ಸೀರೀಸ್ ʻಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಚಿತ್ರದ (Hiramandi: The Diamond Bazaar) ಬಹು ನಿರೀಕ್ಷಿತ ಟ್ರೈಲರ್‌ ಏಪ್ರಿಲ್‌ 10ರಂದು ಬಿಡುಗಡೆಯಾಗಿದೆ. ‘ದೇವದಾಸ್​’, ‘ಬಾಜಿರಾವ್​ ಮಸ್ತಾನಿ’, ‘ಪದ್ಮಾವತ್​’, ಮುಂತಾದ ಸಿನಿಮಾಗಳನ್ನು ನೀಡಿರುವ ಸಂಜಯ್ ಅವರು ಈಗ ಒಟಿಟಿ ಜಗತ್ತಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಟ್ರೈಲರ್‌ ಬಿಡುಗಡೆಯಾದ ನಂತರ ರಶ್ಮಿಕಾ, ಆಲಿಯಾ, ವಿಕ್ಕಿ ಕೌಶಲ್‌ (Alia Bhatt And Vicky Kaushal) ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಹೊರಹಾಕಿದ್ದಾರೆ.

ಆಲಿಯಾ ಭಟ್‌ ನಟನೆಯ ʻಗಂಗೂಬಾಯಿ ಕಾಠಿಯಾವಾಡಿʼ ಸಿನಿಮಾಗೆ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಇತ್ತು. ಆಲಿಯಾ ಈ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ ನಟಿಗೆ ಈ ʻಹೀರಾಮಂಡಿʼ ಚಿತ್ರದ ಟ್ರೈಲರ್‌ ಇಷ್ಟವಾಗಿದೆ. ಆಲಿಯಾ ಭಟ್ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಟ್ರೈಲರ್‌ ಹಂಚಿಕೊಂಡು ʻಜಸ್ಟ್ ಮ್ಯಾಜಿಕ್” ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ವಿಕ್ಕಿ ಕೌಶಲ್ ಕೂಡ ʻಬೆರಗುಗೊಳಿಸುವಂತಿದೆ ಟ್ರೈಲರ್‌ʼಎಂದು ಬರೆದುಕೊಂಡಿದ್ದಾರೆ.  ನಟಿ ರಶ್ಮಿಕಾ ಮಂದಣ್ಣ ಅವರು ಈ ವೆಬ್​ ಸಿರೀಸ್​ನಲ್ಲಿನ ಮಹಿಳಾ ಕಲಾವಿದರ ಪ್ರತಿಭೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅನೇಕ ನಟಿಯರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ನೆಟ್​ಫ್ಲಿಕ್ಸ್​ ಮೂಲಕ ಮೇ 1ರಂದು ಈ ವೆಬ್​ ಸಿರೀಸ್​ ವೀಕ್ಷಣೆಗೆ ಲಭ್ಯವಾಗಲಿದೆ.

ಇದನ್ನೂ ಓದಿ: Heeramandi first song : ಮಿಸ್ ವರ್ಲ್ಡ್ ಫಿನಾಲೆಯಲ್ಲಿ ʻಹೀರಾಮಂಡಿʼ ಚಿತ್ರದ ಮೊದಲ ಸಾಂಗ್‌ ಔಟ್‌!

ಮಿಸ್ ವರ್ಲ್ಡ್ ಫಿನಾಲೆಯಲ್ಲಿ ʻಹೀರಾಮಂಡಿʼ ಚಿತ್ರದ ಮೊದಲ ಸಾಂಗ್‌ ಔಟ್‌

‘ಹೀರಾಮಂಡಿ: ದಿ ಡೈಮಂಡ್ ಬಜಾರ್’ನ ಮೊದಲ ಹಾಡು ‘ಸಕಲ್ ಬನ್’ (Sakal Ban) ಮಿಸ್ ವರ್ಲ್ಡ್ 2024 ರ ಫಿನಾಲೆಯಲ್ಲಿ ಲಾಂಚ್‌ ಆಗಿತ್ತು. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಸೇರಿದಂತೆ ಅನೇಕರು ಈ ಹಾಡಿಗೆ ರ್‍ಯಾಂಪ್‌ ವಾಕ್‌ ಮಾಡಿದ್ದರು.

ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳೆಂದರೆ ಅಲ್ಲೊಂದು ಅದ್ಭುತ ಮಾಯಾಲೋಕವನ್ನೇ ನಾವು ನಿರೀಕ್ಷಿಸಬಹುದು. “ಹೀರಾಮಂಡಿ” ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೇಶ್ಯೆಯರ ಜೀವನದಲ್ಲಿ ಪ್ರೀತಿ ಮತ್ತು ದ್ರೋಹದ ವಿಷಯಗಳನ್ನು ಅನ್ವೇಷಿಸುತ್ತದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ, ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಮುಂತಾದವರು ‘ಹೀರಾಮಂಡಿ’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ.

ʻಲವ್ ಆ್ಯಂಡ್ ವಾರ್ʼ

ಸಂಜಯ್ ಲೀಲಾ ಬನ್ಸಾಲಿ ಅವರು ಮುಂದಿನ ಸಿನಿಮಾ ʻಲವ್ ಆ್ಯಂಡ್ ವಾರ್ʼ ಅನ್ನು ಈಗಾಗಲೇ ಘೋಷಿಸಿದ್ದಾರೆ. ಇದರಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ನಟಿಸಲಿದ್ದಾರೆ.  ಈ ಸಿನಿಮಾ ಹಿಂದಿಯ ಹಿಟ್‌ ಸಿನಿಮಾವಾದ ʻಸಂಗಮ್ʼ ಕಥೆಯಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ. 1964ರ ಈ ʻಸಂಗಮ್‌ʼ ( film Sangam) ಚಲನಚಿತ್ರದಲ್ಲಿ ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ನಟಿಸಿದ್ದರು. 

ಈ ‘ಲವ್ ಆ್ಯಂಡ್ ವಾರ್’ ಸಿನಿಮಾ ʻಸಂಗಮ್‌ʼ ರಿಮೇಕ್‌ ಎಂದು ಬಹಳ ಹಿಂದೆಯೇ ವರದಿಯಾಗಿತ್ತು. ಆರಂಭದಲ್ಲಿ, ಧರ್ಮ ಪ್ರೊಡಕ್ಷನ್ಸ್ ಈ ಸಿನಿಮಾ ಮಾಡಲು ಯೋಜಿಸಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮಾಡಲು ಆಗಲಿಲ್ಲ. ಬನ್ಸಾಲಿಯವರ ‘ಲವ್ ಆ್ಯಂಡ್ ವಾರ್’ ಸಿನಿಮಾ ಒಂದು ತ್ರಿಕೋನ ಪ್ರೇಮ ಕಥೆಯಾಗಿದೆ ಎಂದು ವರದಿಯಾಗಿದೆ. ಮಾತ್ರವಲ್ಲ 1964ರ ಚಲನಚಿತ್ರ ʻಸಂಗಮ್‌ʼ ಸಿನಿಮಾದಿಂದ ಸ್ಫೂರ್ತಿ ಪಡೆದ ‘ಲವ್ ಆ್ಯಂಡ್ ವಾರ್’ ಆಧುನಿಕ ಕಾಲದ ಚಿತ್ರಕಥೆ ಹೊಂದಿರಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kannada New Movie: ಬೆಚ್ಚಿ ಬೀಳಿಸಲು ಬರುತ್ತಿದ್ದಾನೆ ʼರಿಪ್ಪನ್ ಸ್ವಾಮಿʼ; ಸಿನಿಮಾದ ರಕ್ತಸಿಕ್ತ ಫಸ್ಟ್‌ ಲುಕ್ ಪೋಸ್ಟರ್ ರಿಲೀಸ್‌

ಈ ಚಿತ್ರಕ್ಕಾಗಿ ರಣಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ʻಸಂಗಮ್ʼ ಪಾತ್ರ ನಿಭಾಯಿಸಲಿದ್ದಾರಂತೆ. ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ವಿಷಯ ಧೃಢ ಪಟ್ಟಿಲ್ಲದಿದ್ದರೂ 2024ರ ದ್ವಿತೀಯಾರ್ಧದಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

Exit mobile version