Site icon Vistara News

Alia Bhatt Deep Fake: ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ ವೈರಲ್‌! ಅಸಲಿ ಮುಖ ಯಾರದ್ದು?

Alia Bhatt Deep Fake Wamiqa Gabbi face replaced

ಬೆಂಗಳೂರು: ಭಾರತೀಯರಲ್ಲಿ (indian’s) ಶೇ. 75ರಷ್ಟು ಮಂದಿ ಡೀಪ್‌ಫೇಕ್‌ (Deep Fakes) ಪಿಡುಗಿಗೆ ಒಳಗಾಗಿದ್ದು, ಶೇಕಡಾ 22ರಷ್ಟು ಮಂದಿಗೆ ಮಾತ್ರ ಇದು ಗಮನಕ್ಕೆ ಬಂದಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಡೀಪ್‌ಫೇಕ್‌ಗೆ ಹೆಚ್ಚಾಗಿ ನಟಿಯರು ಒಳಗಾಗುತ್ತಿದ್ದಾರೆ. ಇದೀಗ ಮತ್ತೆ ಆ ಸಾಲಿಗೆ ಆಲಿಯಾ ಭಟ್‌ (Alia Bhatt Deep Fake) ಸೇರಿದ್ದಾರೆ. ನಟಿ ವಾಮಿಕಾ ಗಬ್ಬಿ (Wamiqa Gabbi) ವಾರದ ಹಿಂದೆ ಇನ್‌ಸ್ಟಾದಲ್ಲಿ ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದರು. ಕೆಂಪು ಸೀರೆಯಲ್ಲಿ ನಟಿ ಹಾಟ್‌ ಆಗಿ ಕಂಡಿದ್ದರು. ಇದೀಗ ಈ ವಿಡಿಯೊಗೆ ಡಿಜಿಟಲ್ ಮ್ಯಾನ್ಯುಪಲೇಷನ್ ಟೆಕ್ನಾಲಜಿ ಬಳಸಿ ವಾಮಿಖಾ ಅವರ ಮುಖಕ್ಕೆ ಆಲಿಯಾ ಮುಖವನ್ನು ಅಂಟಿಸಲಾಗಿದೆ ಎಂದು ವರದಿಯಾಗಿದೆ. ಇದೀಗ ಆಲಿಯಾ ಅವರ ಈ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿದ್ದು ಅನೇಕರು ಈ ಬಗ್ಗೆ ಖಂಡಿಸಿದ್ದಾರೆ.

ಈ ವಿಡಿಯೊದಲ್ಲಿ ಆಲಿಯಾ ಅವರನ್ನು ನೋಡಿದಂತೇ ಆಗುತ್ತಿದೆ. ಡೀಪ್‌ಫೇಕ್ ವೀಡಿಯೊವನ್ನು ಅನ್‌ಫಿಕ್ಸ್‌ ಫೇಸ್‌ ಎಂಬ ಖಾತೆ ಶೇರ್‌ ಮಾಡಿಕೊಂಡಿದೆ. ವಿಡಿಯೊದ ಜತೆಗೆ, “ಆಲಿಯಾಭಟ್ ಆಫ್-ಸ್ಕ್ರೀನ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಡೀಪ್‌ಫೇಕ್ ವಿಡಿಯೊದಲ್ಲಿ, ಆಲಿಯಾ ಕೆಂಪು ಸೀರೆಯನ್ನು ಧರಿಸಿ ಕೂದಲು ಹೆಣೆದು ನೆಲದ ಮೇಲೆ ಕುಳಿತಿದ್ದಾರೆ. ಈ ಹಿಂದೆ, ಆಮೀರ್ ಖಾನ್ ಕೂಡ ಈ ಡೀಪ್‌ಫೇಕ್‌ಗಳಿಗೆ ಒಳಗಾಗಿದ್ದರು. ಅಲ್ಲಿ ನಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುವಂತಹ ವೀಡಿಯೊ ವೈರಲ್ ಆಗಿತ್ತು. ಇದಾದ ಬಳಿಕ ಆಮೀರ್‌ ಸೈಬರ್ ಕ್ರೈಮ್ ಸೆಲ್‌ಗೆ ದೂರು ಸಲ್ಲಿಸಿದ್ದರು.

ಶೇ. 57ರಷ್ಟು ಸೆಲೆಬ್ರಿಟಿಗಳು

ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೊ ಚಿತ್ರ ಅಥವಾ ಆಡಿಯೊವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ.

ಇದನ್ನೂ ಓದಿ: Chaithra J Achar: ʼಕನ್ನಡದ ಆಲಿಯಾ ಭಟ್‌ʼ ಚೈತ್ರಾ ಆಚಾರ್ – ಕಿಶನ್ ಬಿಳಗಲಿ ಶೃಂಗಾರ ನೃತ್ಯಕ್ಕೆ ಮನಸೋತ ಫ್ಯಾನ್ಸ್‌!

ವೈರಲ್‌ ವಿಡಿಯೊ

ಆಲಿಯಾ ಭಟ್ ಕೊನೆಯದಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ ‘ಜಿಗ್ರಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version