ಬೆಂಗಳೂರು: ಆಲಿಯಾ ಭಟ್ ಅವರ ಹೊಸ ಡೀಪ್‌ಫೇಕ್ ವೀಡಿಯೊ (Deepfake Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ಆಲಿಯಾ ಫ್ಯಾನ್ಸ್ ಆಘಾತಕ್ಕೊಳಗಾಗಿದ್ದಾರೆ. “Sameeksha Avtr ಎಂಬ ಬಳಕೆದಾರರಿಂದ ಸಾಕಷ್ಟು ವಿಡಿಯೊಗಳು ಪೋಸ್ಟ್ ಆಗಿವೆ. ಡೀಪ್‌ಫೇಕ್ ಕ್ಲಿಪ್ ವೈರಲ್ ಆದ ಕೂಡಲೇ, ಆಲಿಯಾ ಭಟ್ ಅವರ ಅಭಿಮಾನಿಗಳು “ವಿಡಿಯೊ ನೋಡಿದ ಕೂಡಲೇ ನಾನು ಆಲಿಯಾ ಎಂದು ಭಾವಿಸಿದೆ. ಆದರೆ ಮತ್ತೆ ಎಚ್ಚರಿಕೆಯಿಂದ ನೋಡಿದ ಕೂಡಲೇ ಆಲಿಯಾ ಅಲ್ಲ ಎಂದು ತಿಳಿಯಿತು” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.
ಇನ್ನೂ ಕೆಲವರು “AI ತುಂಬಾ ಅಪಾಯಕಾರಿ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಆಲಿಯಾ ಅವರ ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಮೇ ತಿಂಗಳಲ್ಲಿ, ಆಲಿಯಾ ಅವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇತ್ತೀಚೆಗೆ, ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟರು ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ. ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೊ ಚಿತ್ರ ಅಥವಾ ಆಡಿಯೊವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ.
ಇದನ್ನೂ ಓದಿ: OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್ ಸಿರೀಸ್‌ಗಳಿವು
ಈ ವರ್ಷದ ಆರಂಭದಲ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಅವರು ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ 27-ಸೆಕೆಂಡ್ ವಿಡಿಯೊ ಕ್ಲಿಪ್ ತಯಾರಿಸಿಲಾಗಿತ್ತು. ಇದು ನಕಲಿ ವಿಡಿಯೊ ಎಂದು ವಕ್ತಾರರು ಹೇಳಿಕೆ ನೀಡಿದ್ದರು ವಿಡಿಯೊ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ. ‘ವೋಟ್ ಫಾರ್ ನ್ಯಾಯ್, ವೋಟ್ ಫಾರ್ ಕಾಂಗ್ರೆಸ್’ ಎಂಬುದು ಇತ್ತು. ಬಳಿಕ ಆಮೀರ್ ಈ ಬಗ್ಗೆ ಕೇಸ್ ಕೂಡ ದಾಖಲಿಸಿದ್ದರು.
ಇದಕ್ಕೂ ಮೊದಲು, ರಣವೀರ್ ಸಿಂಗ್ ಅವರ ಡೀಪ್‌ಫೇಕ್ ವೀಡಿಯೊ ಕೂಡ ವೈರಲ್ ಆಗಿದ್ದು, ಇದರಲ್ಲಿ ನಟ ಸರ್ಕಾರವನ್ನು ಟೀಕಿಸಿರುವಂತೆ ವೈರಲ್ ಆಗಿತ್ತು.