Site icon Vistara News

Yash Raj Films: ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ ನಟಿಸುತ್ತಿದ್ದಾರೆ ಆಲಿಯಾ ಭಟ್‌!

Alia Bhatt is joining YRF Spy Universe

ಯಶ್ ರಾಜ್ ಫಿಲ್ಮ್ಸ್ (Yash Raj Films) ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ಟೈಗರ್ 3’, ‘ಪಠಾಣ್’ ಹಾಗೂ ‘ವಾರ್’ಹೀಗೆ ಹಲವಾರು ಹಿಟ್‌ ಸಿನಿಮಾಗಳನ್ನು ನೀಡಿದೆ. ಇದೀಗ ಈ ಸ್ಪೈ ಯೂನಿವರ್ಸ್‌ಗೆ ಆಲಿಯಾ ಭಟ್ ಅವರು ಭಾಗವಾಗಲಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಮಾತನಾಡಿ ʻ ಆಲಿಯಾ ಭಟ್ ಸ್ಪೈ ಯೂನಿವರ್ಸ್‌ ಭಾಗವಾಗಿದ್ದಾರೆ. ಈ ವರ್ಷದ ಅಂತ್ಯಕ್ಕೆ ಚಿತ್ರದ ಶೆಡ್ಯೂಲ್‌ ಶುರುವಾಗಲಿದೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಶರ್ವರಿ ವಾಘ್ ಜತೆ ಆಲಿಯಾ ಭಟ್ ಜೋಡಿಯಾಗಲಿದ್ದಾರೆ. ಆಕ್ಷನ್ ಎಂಟರ್ಟೈನರ್ ನಲ್ಲಿ ಸೂಪರ್-ಏಜೆಂಟ್‌ಗಳಾಗಿ ನಟಿಸುತ್ತಾರೆ. ಯೂನಿವರ್ಸ್ ಅಡಿಯಲ್ಲಿ ನಾವು ಹಲವು ಸಿನಿಮಾ ಮಾಡುತ್ತಿದ್ದೇವೆ. ಆದರೆ, ಎಲ್ಲವನ್ನೂ ಇಲ್ಲಿ ಹಂಚಿಕೊಳ್ಳಲಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗ ಮಾತನಾಡುತ್ತೇವೆʼʼ ಎಂದು ಹೇಳಿಕೊಂಡಿದ್ದಾರೆ.

YRF ಸ್ಪೈ ಯೂನಿವರ್ಸ್ ಸಲ್ಮಾನ್ ಖಾನ್ ಅವರ ‘ಏಕ್ ಥಾ ಟೈಗರ್’ (2012), ನಂತರ ‘ಟೈಗರ್ ಜಿಂದಾ ಹೈ’ (2017), ಮತ್ತು ‘ವಾರ್’ (2019), ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸುವುದರೊಂದಿಗೆ ಪ್ರಾರಂಭವಾಯಿತು. ಆಲಿಯಾ ಭಟ್ ಅವರ ಸಿನಿಮಾ ‘ಯಶ್ ರಾಜ್ ಫಿಲ್ಮ್ಸ್’ನ ಸ್ಪೈ ಯೂನಿವರ್ಸ್​ನ ಆರನೇ ಚಿತ್ರ ಆಗಲಿದೆ.ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ನಟನೆಯ ‘ವಾರ್ 2’ ಕೆಲಸಗಳು ನಡೆಯುತ್ತಿವೆ. ‘ಪಠಾಣ್ 2’ ಸಿನಿಮಾ ಕೂಡ ಬರಲಿದೆ.

ಇದನ್ನೂ ಓದಿ: Alia Bhatt: ಅನಂತ್ ಅಂಬಾನಿ ಮದುವೆ: ಎಲ್ಲರ ಕಣ್ಣು ಆಲಿಯಾ ಭಟ್ ಮಗಳ ಮ್ಯಾಲೆ!

ವಾರ್‌ 2

ಯಶ್‌ರಾಜ್‌ ಫಿಲ್ಮ್ಸ್‌ ಸ್ಪೈ ಯೂನಿವರ್ಸ್‌ (War 2: ) ಅಭಿಮಾನಿಗಳು ಆದಿತ್ಯ ಚೋಪ್ರಾ ರಚಿಸಿದ ಫ್ರಾಂಚೈಸ್‌ನ ಕೆಲವು ಪ್ರಮುಖ ಸ್ಪೈಸ್‌ಗಳನ್ನು ವಾರ್ 2ನಲ್ಲಿ ಒಟ್ಟಿಗೆ ನೋಡಬಹುದು. ವರದಿಯ ಪ್ರಕಾರ, ಅಯಾನ್ ಮುಖರ್ಜಿ ಅವರು ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅವರನ್ನು ವಾರ್‌ 2 ಮೂಲಕ ಒಟ್ಟಿಗೆ ಕರೆತರಲಿದ್ದಾರೆ. ವಾರ್ 2ನಲ್ಲಿ ಜ್ಯೂನಿಯರ್‌ ಎನ್‌ಟಿಆರ್‌, ಕಿಯಾರಾ ಆಡ್ವಾಣಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಹೃತಿಕ್ ಪ್ರಮುಖ ಪಾತ್ರದಲ್ಲಿದ್ದಾರೆ ಎಂದೂ ವರದಿಯಾಗಿದೆ

.ಅಯಾನ್ ಅವರ ನಿರ್ದೇಶನವು YRF ಸ್ಪೈ ಯೂನಿವರ್ಸ್‌ನಲ್ಲಿ ಮೂರು ಮೆಗಾಸ್ಟಾರ್‌ಗಳನ್ನು ಒಟ್ಟಿಗೆ ತರುವ ಮೊದಲ ಚಿತ್ರವಾಗಿದೆʼʼಎನ್ನಲಾಗಿದೆ. ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಅಂತಿಮ ಸ್ಕ್ರಿಪ್ಟ್ ಇನ್ನೂ ತಯಾರಾಗಿಲ್ಲ. ವಾರ್ 2ನಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಪಾತ್ರವು ಕೆಲವು ನೆಗೆಟಿವ್‌ ಶೇಡ್‌ ಹೊಂದಿರಲಿದೆʼʼ ಎನ್ನಲಾಗಿದೆ.

Exit mobile version