ಬೆಂಗಳೂರು: ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ನಂತರ ಅಮಿತಾಭ್ ಬಚ್ಚನ್ (Amitabh Bachchan) ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ ಎಂಬ ವರದಿ ವೈರಲ್ ಆಗಿತ್ತು. ಆದರೆ ಈ ಮಾಹಿತಿ ಸುಳ್ಳು ಎನ್ನಲಾಗಿದೆ. ಥಾಣೆಯ ದಾದೋಜಿ ಕೊಂಡದೇವ್ ಸ್ಟೇಡಿಯಂನಿಂದ ನಟ ನಿರ್ಗಮಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನ (ಐಎಸ್‌ಪಿಎಲ್) ಅಂತಿಮ ಪಂದ್ಯ ಶುಕ್ರವಾರ (ಮಾ.15) ರಾತ್ರಿ ಮಝಿ ಮುಂಬೈ ಮತ್ತು ಟೈಗರ್ಸ್ ಆಫ್ ಕೋಲ್ಕತ್ತಾ ನಡುವೆ ನಡೆಯಿತು. ಈ ಪಂದ್ಯವನ್ನು ನಟ ವೀಕ್ಷಿಸಿದ್ದು, ಇದೀಗ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ನಟನಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗಿಲ್ಲ. ನಟನ ಕಾಲಿನ ರಕ್ತನಾಳದ ಸಮಸ್ಯೆ ಉಂಟಾಗಿತ್ತು. ಇದಕ್ಕಾಗಿ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅಮಿತಾಭ್ ಶುಕ್ರವಾರ ಸಂಜೆಯೇ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಇದೀಗ ವಿಡಿಯೊವೊಂದರಲ್ಲಿ ಅಮಿತಾಭ್ ಅವರು ಪಂದ್ಯ ವೀಕ್ಷಿಸಿ ನಿರ್ಗಮಿಸುತ್ತಿರುವಾಗ ಪಾಪರಾಜಿಗಳಿಗೆ ಕೈ ಸನ್ನೆ ಮಾಡಿದರು. ಬಳಿಕ ಅಲ್ಲಿ ನೆರೆದಿದ್ದವರು ಅವರ ಹೆಲ್ತ್ ಬಗ್ಗೆ ಕೇಳಿದ್ದಾರೆ. ಆಗ ಅಮಿತಾಭ್ ಅವರು ʻʻಫೇಕ್ ನ್ಯೂಸ್ʼʼಎಂದು ಹೇಳಿ ಹೊರಟರು. ಅಮಿತಾಭ್ ಪುತ್ರ-ನಟ ಅಭಿಷೇಕ್ ಬಚ್ಚನ್ ಅವರೊಂದಿಗೆ ಪಂದ್ಯಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ: Amitabh Bachchan: ಆಸ್ಪತ್ರೆಗೆ ದಾಖಲಾದ ಅಮಿತಾಭ್ ಬಚ್ಚನ್: ಆಂಜಿಯೋಪ್ಲಾಸ್ಟಿ ಮಾಡಿದ ವೈದ್ಯರು
ಆಗಿದ್ದೇನು?
ಅಮಿತಾಭ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿತ್ತು. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ (Angioplasty) ಮಾಡಲಾಗಿತ್ತು ಎಂದು ವರದಿಯಾಗಿತ್ತು. ಆಸ್ಪತ್ರೆಗೆ ದಾಖಲಾದ ವಿಷಯ ಹೊರಬೀಳುವುದಕ್ಕೂ ಒಂದು ಗಂಟೆ ಮೊದಲು ಅಮಿತಾಭ್ ಮಾಡಿದ ಎಕ್ಸ್ ಪೋಸ್ಟ್ ಗಮನ ಸೆಳೆದಿತ್ತು. ‘ಎಂದೆಂದಿಗೂ ಚಿರಋಣಿ’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದರು.
ʻಕಲ್ಕಿ 2898 ಎಡಿʼ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ʻಬಿಗ್ ಬಿʼ!
ಅಮಿತಾಭ್ ಬಚ್ಚನ್ ಅವರು ತಮ್ಮ ಮುಂಬರುವ ಚಿತ್ರ, ʻಕಲ್ಕಿ 2898 ಎಡಿʼ (Kalki 2898 AD) ಬಗ್ಗೆ ಬಿಗ್ ಅಪ್‌ಡೇಟ್ ಬಗ್ಗೆ ನಿನ್ನೆಯಷ್ಟೇ ಹಂಚಿಕೊಂಡಿದ್ದರು. ʻʻನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಮೇ 9ರಂದು ಸಿನಿಮಾ ಬಿಡುಗಡೆಯಾಗಲಿದೆʼʼ ಎಂದು ಬರೆದುಕೊಂಡಿದ್ದರು. ಭೂತ ಮತ್ತು ಭವಿಷ್ಯದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಹಾಶಿವ ರಾತ್ರಿ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಸಿನಿಮಾದಲ್ಲಿ ಪ್ರಭಾಸ್ ಭೈರವನಾಗಿ ಮಿಂಚಲಿದ್ದಾರೆ.