ಬೆಂಗಳೂರು: ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಮತ್ತು ಅವರ ಪತ್ನಿ ಜಯಾ ಬಚ್ಚನ್ ಒಟ್ಟಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ನಟ ಇತ್ತೀಚೆಗೆ ಸೆಟ್‌ನಿಂದ ಹೊರಬಂದಾಗ ಜಯಾಗಾಗಿ ಛತ್ರಿ ಹಿಡಿದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಮಾನ್ಸೂನ್ ಅವಧಿಯಲ್ಲಿ ಹಾನಿಗೊಳಗಾದವರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದೀಗ ಜಯಾ ಬಚ್ಚನ್ ಈ ಫೋಟೊದಿಂದಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಫೋಟೊದಲ್ಲಿ ಜಯಾ ಬಚ್ಚನ್ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ.
ಬಿಗ್ ಬಿ ಅವರು ತಮ್ಮ ಪತ್ನಿ ಜಯಾ ಅವರೊಂದಿಗೆ ರೊಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಹೀಗೆ ಬರೆದಿದ್ದಾರೆ ʻʻಪ್ರತಿದಿನ ಮಳೆ ಬೀಳುತ್ತಿದೆ..ಕೆಲಸದ ಸ್ಥಳದಲ್ಲಿಯೂ ಸಹ ಎಂದು ಈ ಫೋಟೋಕ್ಕೆ ಅಮಿತಾಬ್ ಬಚ್ಚನ್ʼʼ ಶೀರ್ಷಿಕೆ ಹಾಕಿದ್ದಾರೆ.
ಈ ಫೋಟೋದಲ್ಲಿ ಜಯಾ ಬಚ್ಚನ್ ಅವರ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ.
ನೆಟ್ಟಿಗರಿಗೆ ಅಮಿತಾಭ್ ಬಚ್ಚನ್ ಹೊಗಳಿದ್ದಾರೆ. ʻಮೇಡಂಗೆ ಮೂಡ್ ಆಫ್ ಆಗಿದ್ದು ಯಾಕೆʼ ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. ಝೀರೋದಿಂದ ಹೀರೋವರೆಗೆ ಎಲ್ಲ ಪುರುಷರ ಸ್ಥಿತಿಯೂ ಇದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
Amitabh Bachchan: ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದ ಅಮಿತಾಭ್; ʻಬಿಗ್ ಬಿʼ ಕೊಂಡಾಡಿದ ರಾಮ್ ಗೋಪಾಲ್ ವರ್ಮಾ!ಇದನ್ನೂ ಓದಿ:
ಇತ್ತೀಚೆಗೆ ಅಮಿತಾಭ್ ನಟನೆಯ ಕಲ್ಕಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.