Site icon Vistara News

Amitabh Bachchan: 30 ಅಡಿ ಎತ್ತರದ ಬಂಡೆಯಿಂದ ಜಿಗಿದ ಅಮಿತಾಭ್‌: ನಿಜವಾದ ‘ಆ್ಯಕ್ಷನ್ ಹೀರೊʼ ನೀವೆ ಎಂದ ಫ್ಯಾನ್ಸ್‌!

Amitabh Bachchan jumping from 30-foot for a film

ಬೆಂಗಳೂರು: ಅಮಿತಾಭ್‌ ಬಚ್ಚನ್ (Amitabh Bachchan) ಅವರು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಹೆಸರುವಾಸಿಯಾದ ಸೂಪರ್‌ಸ್ಟಾರ್‌. ತಮ್ಮ ವೃತ್ತಿಜೀವನದಲ್ಲಿ ಇದುವರೆಗೂ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಅಮಿತಾಭ್‌ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹಳೆಯ ನೆನಪುಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟ ತಮ್ಮ ಕಾಲದಲ್ಲಿ ನಟರುಗಳು ಆ್ಯಕ್ಷನ್‌ ಸೀಕ್ವೆನ್ಸ್ ಮಾಡುವಾಗ ಸುರಕ್ಷಣೆ ಇಲ್ಲದೇ ನಟಿಸಬೇಕಿತ್ತು ಎಂದು 1979ರ ಸಿನಿಮಾ ‘ಮಿಸ್ಟರ್ ನಟ್ವರ್‌ಲಾಲ್’ ( ‘Mr Natwarlal’ ) ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ. ಸುಮಾರು 30 ಅಡಿ ಎತ್ತರದ ಬಂಡೆಯಿಂದ (30-foot cliff) ಜಿಗಿದ ಚಿತ್ರವನ್ನು ಹಂಚಿಕೊಂಡಿದ್ದಾರೆ.

30 ಅಡಿ ಎತ್ತರದ ಬಂಡೆಯಿಂದ ಜಿಗಿಯುತ್ತಿರುವ ಫೋಟೊ ಹಂಚಿಕೊಂಡ ಅಮಿತಾಭ್‌ ಹೀಗೆ ಬರೆದಿದ್ದಾರೆ, “.. 30 ಅಡಿ ಎತ್ತರದ ಬಂಡೆಯಿಂದ ಆ್ಯಕ್ಷನ್ ಸೀಕ್ವೆನ್ಸ್‌ಗಾಗಿ ಟೇಕ್ ಆಫ್! ಯಾವುದೇ ಮುಖ ಬದಲಾವಣೆಯಿಲ್ಲ, ಯಾವುದೇ ಹಾರ್ನೆಸ್‌ ಇಲ್ಲ, ವಿಎಫ್‌ಎಕ್ಸ್ ಇಲ್ಲದೇ ಲ್ಯಾಂಡಿಂಗ್‌! ಆ ದಿನಗಳನ್ನು ನೆನೆಸಿಕೊಂಡರೆ ನೀವೆಲ್ಲ ಅದೃಷ್ಟವಂತರುʼʼ.

ಆ್ಯಕ್ಷನ್ ಹೀರೊ

ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ಅಮಿತಾಭ್‌ ಬಚ್ಚನ್ (Amitabh Bachchan) ಬಗ್ಗೆ ಅವರ ಫ್ಯಾನ್ಸ್‌ “ಸರ್, ನೀವು ಈ ಶತಮಾನದ ಶ್ರೇಷ್ಠ ನಟ. ನಿಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ನಟನಾ ಶೈಲಿಯಿಂದ ಇಡೀ ದೇಶ ಮತ್ತು ಜಗತ್ತಿಗೆ ಒಂದು ಗೌರವʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಅದಕ್ಕಾಗಿಯೇ ನಾವು ನಿಮ್ಮನ್ನು ನಿಜವಾದ ‘ಆ್ಯಕ್ಷನ್ ಹೀರೊ’ ಎಂದು ಕರೆದಿದ್ದೇವೆ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻಮೈ ಲೆಜೆಂಡ್” ಎಂದು ಬರೆದಿದ್ದಾರೆ.

ಇದನ್ನೂ ಓದಿ: Amitabh Bachchan: ಆಸ್ಪತ್ರೆಗೆ ದಾಖಲಾದ ಅಮಿತಾಭ್‌ ಬಚ್ಚನ್: ಆಂಜಿಯೋಪ್ಲಾಸ್ಟಿ ಮಾಡಿದ ವೈದ್ಯರು

ಅಮಿತಾಭ್ ಬಚ್ಚನ್ ಅವರು ‘ಜಂಜೀರ್'(Zanjeer), ‘ದೀವಾರ್'(‘Deewar’), ‘ಡಾನ್'(Don), ‘ಲಾವರಿಸ್’ (‘Laawaris), ‘ಕಾಲಿಯಾ’ ಮತ್ತು ‘ತ್ರಿಶೂಲ್’ ನಂತಹ ಸೂಪರ್‌ ಹಿಟ್‌ ಆ್ಯಕ್ಷನ್ ಚಿತ್ರಗಳನ್ನು ನೀಡಿದವರು. 1973ರ ‘ಜಂಜೀರ್’ ಚಿತ್ರದ ನಂತರ ಅವರು ‘ಆ್ಯಂಗ್ರಿ ಯಂಗ್ ಮ್ಯಾನ್’ ಎಂಬ ಹೆಸರನ್ನು ಪಡೆದರು. 1982ರಲ್ಲಿ, ‘ಕೂಲಿ’ ಚಿತ್ರೀಕರಣದ ಸಮಯದಲ್ಲಿ ಬಚ್ಚನ್ ಆಕ್ಷನ್‌ ದೃಶ್ಯದ ಶೂಟಿಂಗ್‌ ಗಂಭೀರವಾಗಿ ಗಾಯಗೊಂಡಿದ್ದರು. ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿಯೇ ಇದ್ದರು. ಜೀವನ್ಮರಣ ಹೋರಾಡಿ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಕಲ್ಕಿ 2898 AD

ಸಿನಿಮಾ ವಿಚಾರಕ್ಕೆ ಬಂದರೆ ಅಮಿತಾಭ್‌ ಬಚ್ಚನ್ (Amitabh Bachchan) ಶೀಘ್ರದಲ್ಲೇ ಕಲ್ಕಿ 2898 ADನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Aamir Khan: ಅಮಿತಾಭ್‌ ಬಚ್ಚನ್ ರಿಹರ್ಸಲ್‌ ಕಂಡು ನಾನು ಮೂಕಸ್ಮಿತನಾದೆ: ಆಮೀರ್ ಖಾನ್

ವಿಶೇಷ ಎಂದರೆ ಘಟಾನುಘಟಿಗಳಾದ ಕಮಲ್‌ ಹಾಸನ್‌ (Kamal Haasan) ಮತ್ತು ಅಮಿತಾಭ್‌ ಬಚ್ಚನ್‌ (Amitabh Bachchan) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಪೂರ್ತಿಯಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಆರಂಭದಲ್ಲಿ ಚಿತ್ರ ಮೇಯಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಸದ್ಯ ಎಲ್ಲ ಕೆಲಸ ಮುಗಿಯದ ಕಾರಣ ಸಿನಿಮಾ ಜುಲೈಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

Exit mobile version