Site icon Vistara News

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Amitabh Bachchan vanity van ambition was to pee by Vidhu Vinod Chopra

ಬೆಂಗಳೂರು: ಬಾಲಿವುಡ್‌ ಫೇಮಸ್‌ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಅಮಿತಾಭ್‌ ಬಚ್ಚನ್‌ (Amitabh Bachchan) ಅವರೊಂದಿಗಿನ ಅವರ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಹೃಷಿಕೇಶ್ ಮುಖರ್ಜಿಯವರ ಶಿಫಾರಸು ಮೇರೆಗೆ ಅಮಿತಾಭ್‌ ಅವರನ್ನು ಮೊದಲ ಬಾರಿ ಭೇಟಿ ಮಾಡಿದರು. ಆ ಬಳಿಕ ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು.

ಕೆಲ್ಲಾಗ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಲ್ಲಿ ನಡೆದ ಚಾಟ್‌ನಲ್ಲಿ ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ. ವಿಧು ವಿನೋದ್ ಚೋಪ್ರಾ ಮಾತನಾಡಿ, “ಅಮಿತಾಭ್‌ ಅವರೊಂದಿಗೆ ಚಲನಚಿತ್ರ ಮಾಡುವುದು ಅವರ ವೈಯಕ್ತಿಕ ವಾಶ್‌ರೂಮ್‌ನಲ್ಲಿ ಮೂತ್ರ ವಿಸರ್ಜಿಸುವಷ್ಟು ಮುಖ್ಯವಾಗಿರಲಿಲ್ಲ” ಎಂದು ನಗುತ್ತ ಹೇಳಿದರು. “ನಾನು ಅಮಿತಾಭ್‌ ಅವರನ್ನು ಮೊದಲು ಅವರ ವ್ಯಾನಿಟಿ ವ್ಯಾನ್‌ನಲ್ಲಿ ಭೇಟಿಯಾದೆ. ಆ ಸಮಯದಲ್ಲಿ, ಅಮಿತಾಭ್‌ ಬಚ್ಚನ್ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಶೌಚಾಲಯವಿದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಮೊದಲ ಬಾರಿಯ ಭೇಟಿಯಲ್ಲಿಯೇ ನಾನು ತುಂಬಾ ಅಸಭ್ಯವಾಗಿ ವರ್ತಿಸಿದೆ. ಅಮಿತಾಭ್‌ಗೆ ನಾನು ಹೀಗೆ ಹೇಳಿದೆ. ನನ್ನ ಹೆಸರು ತುಂಬಾ ಪ್ರಭಾವಶಾಲಿಯಾಗಿಲ್ಲದಿರಬಹುದು, ಆದರೆ ನನ್ನ ಚಿತ್ರ….ಇದೆʼʼಎಂದು ಹೇಳಿದಾಗ ಸ್ವಲ್ಪ ನನ್ನನ್ನು ದಿಟ್ಟಿಸಿ ನೋಡಿ ಕೊನೆಗೆ ಸಿನಿಮಾ ಮಾಡಲು ಒಪ್ಪಿದರು ಎಂದರು.

ಇದನ್ನೂ ಓದಿ: Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

ಮಾತು ಮುಂದುವರಿಸಿ ʻʻಅಮಿತಾಭ್‌, ಹೃಷಿ ಮತ್ತು ನಟಿ ರೇಖಾ ಎಲ್ಲರೂ ಈಗ ಕೆಲಸದಲ್ಲಿ ನಿರತರಾಗಿದ್ದಾರೆ. ಆಗಾಗ ಅವರ ಮಧ್ಯೆ ಕೆಲವು ವಾದಗಳು ನಡೆಯುತ್ತಿತ್ತು. ನಾನು ನನ್ನ ಸಿನಿಮಾ ಮರ್ಡರ್‌ ಅಟ್‌ ಮಂಕಿ ಹಿಲ್‌ (Murder at Monkey Hill) ಸಿನಿಮಾವನ್ನು ಅಮಿತಾಭ್‌ ಅವರಿಗೆ ತೋರಸಿಬೇಕಿತ್ತು. ಸಂಜೆ 4ರ ಸುಮಾರಿಗೆ ನನ್ನ ಸಿನಿಮಾ ಅಮಿತಾಭ್‌ಗೆ ನೋಡಲು ಸಮಯ ಇಲ್ಲ ಎಂದು ಅರಿತುಕೊಂಡೆ. ಸ್ವಲ್ಪ ಸಮಯದ ನಂತರ, ನಾನು ಅಲ್ಲಿಂದ ಹೊರಟೆ. ನಾನು ಹೊರಗೆ ಕುಳಿತಿದ್ದೆ. ಆಗ ನನ್ನ ಭುಜದ ಮೇಲೆ ಒಂದು ಕೈ ಬಂತು. ಅದು ಯಾರದ್ದು ಅಲ್ಲ ಅಮಿತಾಭ್‌ ಅವರದ್ದು. ಅಮಿತಾಭ್ ನನ್ನ ಬಳಿ ಕೇಳಿದರು. ಥಿಯೇಟರ್‌ 5ರವರೆಗೆ ಬುಕ್ಕಿಂಗ್‌ ಆಗಿದೆಯಾ? ಇದ್ದರೆ ಹೋಗೋಣ ಎಂದು. ಮಾತ್ರವಲ್ಲ ನನ್ನ ಜೊತೆಯಲ್ಲಿ ಒಬ್ಬ ಸ್ನೇಹಿತನನ್ನು ಕರೆದುಕೊಂಡು ಬರಬಹುದೇ ಎಂದು ಕೇಳಿದರು. ಅದು ಯಾರು ಅಲ್ಲ. ರೇಖಾ ಆಗಿದ್ದರು. ಬಳಿಕ ನಾವೆಲ್ಲ ಸಿನಿಮಾ ನೋಡಲು ತಯಾರಾದೆವುʼʼಎಂದರು.

ಮಾತು ಮುಂದುವರಿಸಿ ʻʻಹೀಗೆ ನಾನು ಅಮಿತಾಭ್‌ ಅವರ ಬಳಿ ನಿಮ್ಮ ವ್ಯಾನಿಟಿ ವ್ಯಾನ್‌ ಶೌಚಾಲಯವನ್ನು ಬಳಸಬಹುದೇ?’ ಎಂದು ಕೇಳಿದೆ, ಅಮಿತಾಭ್‌ ಬಚ್ಚನ್ ಅವರ ವ್ಯಾನ್‌ನಲ್ಲಿ ಮೂತ್ರ ಮಾಡುವುದು ನನ್ನ ಜೀವನದ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತು. ಚಿತ್ರವು ವರ್ಕ್ ಔಟ್ ಆಗುತ್ತದೋ ಇಲ್ಲವೋ ಯಾರಿಗೆ ಗೊತ್ತು, ಆದರೆ ಕನಿಷ್ಠ ಅವರ ವ್ಯಾಬಿಟಿ ವ್ಯಾನ್‌ನ ಶೌಚಾಲಯದಲ್ಲಿ ನಾನು ಮೂತ್ರ ವಿಸರ್ಜಿಸಿದ್ದೇನೆ ಅಂತಾದರೂ ಖುಷಿ ಇರತ್ತದಲ್ಲ ಎಂದು ಕೇಳಿದೆ. ಇದಾದ ಬಳಿಕ ಬಚ್ಚನ್ ಅಂತಿಮವಾಗಿ ನನ್ನ ಸಿನಿಮಾ ನೋಡಿದರು. ಒಟ್ಟಿಗೆ ಕೆಲಸ ಮಾಡಬೇಕೆಂದು ಹೇಳಿದರು. ಕೊನೆಗೆ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ ಮಾಡಿದೆವು. ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಯಿತುʼʼಎಂದರು. ಸಿನಿಮಾ ಹಿಟ್‌ ಆದ ಬಳಿಕ ಬಚ್ಚನ್‌ ಅವರು ಚೋಪ್ರಾ ಅವರಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Exit mobile version