Site icon Vistara News

Anant Ambani: ಡ್ಯಾನ್ಸ್‌ ಮಾಡುವ ಭರದಲ್ಲಿ ಪ್ರಿಯಾಂಕಾ ಪತಿಯನ್ನು ತಳ್ಳಿದ ಅನನ್ಯಾ ಪಾಂಡೆ; ʻಮ್ಯಾನರ್ಸ್‌ʼ ಬೇಡ್ವಾ? ಎಂದ ನೆಟ್ಟಿಗರು!

ಬೆಂಗಳೂರು: ಬಾಲಿವುಡ್ ನಟಿ ಅನನ್ಯಾ ಪಾಂಡೆ (Anant Ambani) ಅವರು ಅನಂತ್ ಅಂಬಾನಿ ಅವರ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ ಮತ್ತು ರಣವೀರ್ ಸಿಂಗ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ನೃತ್ಯ ಮಾಡುವ ವಿಡಿಯೊವೊಂದು ವೈರಲ್‌ ಆಗಿದೆ. ಇದೀಗ ವೈರಲ್‌ ಆಗ ವಿಡಿಯೊವೊಂದರಲ್ಲಿ ಅನನ್ಯಾ ಪಾಂಡೆ ಅವರು ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಾಸ್‌ ಅವರನ್ನು ತಳ್ಳುತ್ತಿರುವುದು ಕಂಡು ಬಂದಿದೆ.

ಮೊದಲಿಗೆ ಪ್ರಿಯಾಂಕಾ ಅವರು ಪತಿ ನಿಕ್‌ ಜತೆ ಡ್ಯಾನ್ಸ್‌ ಮಾಡುವಾಗ, ಏಕಾಏಕಿ ಅನನ್ಯಾ ಪಾಂಡೆ ಅವರು ಬಂದು ನಿಕ್‌ ಅವರನ್ನು ತಳ್ಳಿ ಪ್ರಿತಾಂಕ ಜತೆ ಡ್ಯಾನ್ಸ್‌ ಮಾಡುತ್ತಾರೆ. ಇದೀಗ ಅನನ್ಯಾ ಪಾಂಡೆ ಅವರ ನಡವಳಿಕೆಗೆ ನೆಟ್ಟಿಗರು ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಒಬ್ಬರು ʻ’ಶಿಷ್ಟಾಚಾರವಿಲ್ಲದ ಹುಡುಗಿʼಎಂದು ಕಮೆಂಟ್‌ ಮಾಡಿದರೆ, ಇನ್ನೊಬ್ಬರು ʻನಿಕ್‌ಗೆ ಮುಜುಗರ ಆಗಿರಬೇಕುʼಎಂದು ಕಮೆಂಟ್‌ ಮಾಡಿದ್ದಾರೆ. ನಿಕ್‌ ಅವರನ್ನು ತಳ್ಳಿದ ಕೂಡಲೇ ರಣವೀರ್‌ ಸಿಂಗ್‌ ಅವರು ನಿಕ್‌ ಅವರನ್ನು ಅಪ್ಪಿಕೊಂಡ ವಿಡಿಯೊ ಕೂಡ ವೈರಲ್‌ ಆಗಿದೆ. ಹೀಗಾಗಿ ಅನನ್ಯಾ ಅವರ ನಡವಳಿಕೆಗೆ ತೆಗಳಿ, ರಣವೀರ್‌ ಅವರನ್ನು ಅವರನ್ನು ಹೊಗಳುತ್ತಿದ್ದಾರೆ ನೆಟ್ಟಿಗರು.

ಜುಲೈ 12 ರಂದು ಶುಕ್ರವಾರ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಸೆಲೆಬ್ರಿಟಿಗಳು ಪರಸ್ಪರ ಶುಭಾಶಯ ಕೋರುವ, ನೃತ್ಯ ಮಾಡುವ ಹಾಗೂ ಪರಸ್ಪರ ಸಂಭಾಷಣೆ ನಡೆಸುವ ವಿಡಿಯೊಗಳು ವೈರಲ್‌ ಆಗಿವೆ.

ಇದನ್ನೂ ಓದಿ: Anant Ambani Wedding: ನೀತಾ ಅಂಬಾನಿ ಕೈಯಲ್ಲಿದ್ದ ರಮನ್‌ ದಿವೋ ದೀಪದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ

What the hell Ananya!? This is peak ambani wedding moment for me ✋😭
byu/ekdumsaras inBollyBlindsNGossip

ಜುಲೈ 13 ರಂದು ‘ಶುಭ್ ಆಶೀರ್ವಾದ’ ಮತ್ತು ಜುಲೈ 14 ರಂದು ‘ಮಂಗಲ್ ಉತ್ಸವ’ ಅಥವಾ ಆರತಕ್ಷತೆ ನಡೆಯಲಿದೆ. ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಪಾರ್ಟಿ ನಡೆಯಲಿದೆ.

ಗಣ್ಯರ ದಂಡೇ ಉಪಸ್ಥಿತಿ

ಅನಂತ್‌ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ, ಅಮಿತಾಭ್‌ ಬಚ್ಚನ್‌, ಆಲಿಯಾ ಭಟ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌, ಅನನ್ಯಾ ಪಾಂಡೆ, ರಜನಿಕಾಂತ್‌, ಮಹೇಶ್‌ ಬಾಬು, ಹಾರ್ದಿಕ್‌ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಬ್ರಿಟನ್‌ ಮಾಜಿ ಪ್ರಧಾನಿಗಳಾದ ಬೋರಿಸ್‌ ಜಾನ್ಸನ್‌, ಟೋನಿ ಬ್ಲೇರ್‌ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

5 ಸಾವಿರ ಕೋಟಿ ರೂ. ಖರ್ಚು

ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್‌-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ವಿವಾಹ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದವು. ಭಾರತದ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.



Exit mobile version