ಬೆಂಗಳೂರು: ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚಂಟ್ ಅವರು ಯುರೋಪ್‌ನಲ್ಲಿ ಕ್ರೂಸ್‌ನಲ್ಲಿ ಅದ್ಧೂರಿಯಾಗಿ ಎರಡನೇ ವಿವಾಹ ಪೂರ್ವ ಸಂಭ್ರಮಾಚರಣೆ ಮಾಡಿದರು. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಹೈಲೈಟ್ ಆಗಿದ್ದು ರಾಧಿಕಾ ಅವರ ವಿಭಿನ್ನವಾದ ಉಡುಪುಗಳು. 22ನೇ ವಯಸ್ಸಿನಲ್ಲಿದ್ದಾಗ ಗೆಳೆಯ ಅನಂತ್ ಅಂಬಾನಿ ಅವರು ಆಕೆಗಾಗಿ ಬರೆದ ಪ್ರೇಮಪತ್ರವನ್ನು ಈ ಗವನ್‌ನಲ್ಲಿ ಪ್ರಿಂಟ್ ಮಾಡಲಾಗಿದೆ. ಈ ಗೌನ್ ಧರಿಸಿ ಪೋಸ್ ಕೊಟ್ಟಿದ್ದಾರೆ ರಾಧಿಕಾ.
ರಾಧಿಕಾ ಈ ಕುರಿತು ಮಾತನಾಡಿ, “ಅನಂತ್ ನನ್ನ ಜನ್ಮದಿನದಂದು ಪ್ರೇಮ ಪತ್ರ ಬರೆದಿದ್ದರು. ಈ ಪ್ರೇಮ ಪತ್ರವನ್ನು ನಾನು ನನ್ನ ಮುಂದಿನ ಪೀಳಿಗೆಗೆ ತೋರಿಸಲು ಬಯಸುವೆ, ನಮ್ಮ ಪ್ರೀತಿ ಹೀಗಿತ್ತು ಎಂಬುದನ್ನು ನಾನು ನನ್ನ ಮಕ್ಕಳಿಗೆ ಮೊಮ್ಮಕ್ಕಳಿಗೆ ತೋರಿಸಲು ಬಯಸುವೆʼʼ ಎಂದು ರಾಧಿಕಾ ಮರ್ಚೆಂಟ್ ಹೇಳಿದ್ದಾರೆ. ಪತ್ರದ ಪ್ರಿಂಟೆಡ್ ಉಡುಪಿನಲ್ಲಿ ಅಂದವಾಗಿ ಕಾಣುತ್ತಿದ್ದರು ರಾಧಿಕಾ.
ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ರಾಧಿಕಾ ಮರ್ಚಂಟ್ ಅವರ ಡ್ರೆಸ್ ಕೂಡ ಹೈಲೈಟ್ ಆಗಿತ್ತು. ಆರ್ಕೈವಲ್ ಡಿಯೊರ್ ಸ್ಕರ್ಟ್ (archival Dior dress) ಧರಿಸಿದ್ದರು ರಾಧಿಕಾ. 1959ರ ಫ್ಯಾಷನ್ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್ ಬೆಲೆ 3,20,714ರೂ. ಆಗಿದೆ.
ಇದನ್ನೂ ಓದಿ: Kotee Movie: ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ
ರಾಧಿಕಾ ಮರ್ಚಂಟ್ ಇಟಲಿಯ ಪೋರ್ಟೋಫಿನೋದಲ್ಲಿ ನಡೆದ ಆಚರಣೆಗಳಿಗಾಗಿ ಬಾರ್ಬಿಕೋರ್ ಟ್ರೆಂಡ್ ಧರಿಸಿದ್ದರು. ಈ ಉಡುಪನ್ನು ಯೆವ್ಸ್ ಸೇಂಟ್ ಲಾರೆಂಟ್ ವಿನ್ಯಾಸಗೊಳಿಸಿದ್ದಾರೆ. ವರದಿಯ ಪ್ರಕಾರ ರಾಧಿಕಾ ಅವರ ಆರ್ಕೈವಲ್ ಡಿಯೊರ್ ಉಡುಪನ್ನು ಸ್ಯಾನ್ ಫ್ರಾನ್ಸಿಸ್ಕೋದ ಕಸ್ಸಂದ್ರ ಕಾರ್ಪೆಂಟರ್ ಅವರಿಂದ ಪಡೆಯಲಾಗಿದೆ ಎನ್ನಲಾಗಿದೆ . ಇದು ಮೂಲತಃ ಜೀನಿ ಮ್ಯಾಗ್ನಿನ್ ಅವರದ್ದು ಎನ್ನಲಾಗಿದೆ.
ವೈರಲ್ ಬಾರ್ಬಿಕೋರ್ ಮತ್ತು ಕೊಕ್ವೆಟ್ ಕೋರ್ ಫ್ಯಾಷನ್ ಒಳಗೊಂಡ ಈ ಡ್ರೆಸ್ ಪ್ರಕಾಶಮಾನವಾದ ರಾಸ್ಪ್ಬೆರಿ ಗುಲಾಬಿ ಬಣ್ಣಗಳ ಮಿಶ್ರಣದಲ್ಲಿದೆ. 1959ರ ಫ್ಯಾಷನ್ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್ ಬೆಲೆ 3,20,714ರೂ. ಆಗಿದೆ. ರಾಧಿಕಾ ಅವರು ಈ ಸ್ಕರ್ಟ್ ಜತೆಗೆ ವಜ್ರದ ಉಂಗುರ, ಗುಲಾಬಿ ಬಣ್ಣದ ಹರ್ಮೆಸ್ ಮಿನಿ ಕೆಲ್ಲಿ ಬ್ಯಾಗ್ ಧರಿಸಿದ್ದರು. ಪೋನಿಟೇಲ್‌ಗೆ ರೇಷ್ಮೆಯ ಸ್ಕಾರ್ಫ್ ಧರಿಸಿದ್ದರು.
ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಮದುವೆ ನಡೆಯಲಿದೆ.
ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.