Site icon Vistara News

Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

Ranbir Kapoor and Alia Bhatt flew to Italy

ಬೆಂಗಳೂರು: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಗಳು ರಾಹಾ ಕಪೂರ್ ಜತೆ ಭಾನುವಾರ ರಾತ್ರಿ (ಮೇ.26) ಮುಂಬೈನಿಂದ ಇಟಲಿಗೆ ಹಾರಿದ್ದಾರೆ. ಮುಂಬೈನ ಕಲಿನಾ ವಿಮಾನ ನಿಲ್ದಾಣದಿಂದ (Ranbir Kapoor and Alia Bhatt flew to Italy) ಕುಟುಂಬ ಹೊರಡುತ್ತಿರುವ ಹಲವು ಫೋಟೊ ಹಾಗೂ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ಗಾಗಿ (Anant Ambani Radhika) ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಮೇ 28ರಿಂದ 30ರವರೆಗೆ ಆಯೋಜಿಸಿದ್ದಾರೆ. ಹೀಗಾಗಿ ಆಲಿಯಾ ದಂಪತಿ ಇಟಲಿಗೆ ಹೊರಡಿದ್ದಾರೆ ಎಂದು ವರದಿಯಾಗಿದೆ.

800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಲಿದೆ ಎಂದು ವರದಿಯಾಗಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ರಣಬೀರ್‌ ಮಗಳನ್ನು ಎತ್ತಿಕೊಂಡಿದ್ದಾರೆ. ಪ್ರಯಾಣಕ್ಕಾಗಿ, ಆಲಿಯಾ ಬೂದು ಬಣ್ಣದ ಹೂಡಿ ಮತ್ತು ಪ್ಯಾಂಟ್ ಧರಿಸಿದ್ದರು. ರಣಬೀರ್ ಬಿಳಿ ಟೀ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಹಾ ಕಪೂರ್ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಅಂಬಾನಿ ಕುಟುಂಬ ಆಯೋಜಿಸಿದ್ದು, ಈ ವಿವಾಹಪೂರ್ವ ಆಚರಣೆಯಲ್ಲಿ ಕುಟುಂಬ ಭಾಗಿಯಾಗಲಿದೆ.

ಇದನ್ನೂ ಓದಿ: Anant Ambani Radhika: ಐಷಾರಾಮಿ ಹಡಗಿನಲ್ಲಿ ನಡೆಯಲಿದೆ ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಶೋ!

ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇರಲಿದ್ದಾರಂತೆ.ಕಳೆದ ವರ್ಷ ಜನವರಿಯಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಸಾಂಪ್ರದಾಯಿಕ ಗೋಲ್‌ ಧನಾ ಕಾರ್ಯಕ್ರಮವಾಗಿ ನಡೆದಿತ್ತು. ಮದುವೆ ಜುಲೈ 12ರಂದು ನಡೆಯಲಿದೆ.

ಈ ಮುಂಚೆ ನಡೆದ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಮುಕೇಶ್‌ ಅಂಬಾನಿ ಅವರು ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Exit mobile version