ಬೆಂಗಳೂರು: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ (Anant Ambani -Radhika) ಅವರ ಸಂಗೀತ ಕಾರ್ಯಕ್ರಮ ಶುಕ್ರವಾರ (ಜೂ.5)ಬಹಳ ಅದ್ಧೂರಿಯಾಗಿ ನೆರವೇರಿದೆ. ಈ ಸಮಾರಂಭದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅವರಲ್ಲಿ ಸಲ್ಮಾನ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕಿಯಾರಾ ಆಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಜಾನ್ವಿ ಕಪೂರ್, ವಿಕ್ಕಿ ಕೌಶಲ್, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇದ್ದರು. ಸಂಗೀತ ಸಮಾರಂಭದ ಹಲವಾರು ಫೋಟೊ ಹಾಗೂ ವಿಡಿಯೊಗಳು ವೈರಲ್ ಆಗಿವೆ. ಸಲ್ಮಾನ್ ವೇದಿಕೆಯಲ್ಲಿ ಅನಂತ್ ಅವರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೊ ಭಾರಿ ವೈರಲ್ ಆಗುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ವೀಡಿಯೊದಲ್ಲಿ, ಸಲ್ಮಾನ್ ವೇದಿಕೆಯಲ್ಲಿ ಅನಂತ್ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇವರಿಬ್ಬರು ಸಲ್ಮಾನ್ ಅವರ 2000ರ ಚಲನಚಿತ್ರ ʻಹರ್ ದಿಲ್ ಜೋ ಪ್ಯಾರ್ ಕರೇʼಗಾದ ʻಐಸಾ ಪೆಹ್ಲಿ ಬಾರ್ ಹುವಾ ಹೈʼ ಹಾಡಿಗೆ ಹೆಜ್ಜೆ ಹಾಕಿದರು. ಕ್ಲಿಪ್‌ನಲ್ಲಿ, ಈವೆಂಟ್‌ನಲ್ಲಿ ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಸಲ್ಮಾನ್ ಅವರನ್ನು ಅನಂತ್ ಸ್ವಾಗತಿಸುತ್ತಿರುವುದು ಕಂಡುಬಂದಿದೆ.
ಇನ್ನೊಂದು ವೀಡಿಯೊದಲ್ಲಿ, ರಣವೀರ್ ಸಿಂಗ್ ಅವರು ಸಲ್ಮಾನ್ ಅವರ ನೋ ಎಂಟ್ರಿ ಗೀತೆಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಪತ್ನಿ ದೀಪಿಕಾ ಪಡುಕೋಣೆ ಕೂಡ ಸಮಾರಂಭದಲ್ಲಿ ಇದ್ದರು. ಕಾರ್ಯಕ್ರಮಕ್ಕಾಗಿ ದೀಪಿಕಾ ನೇರಳೆ ಬಣ್ಣದ ಸೀರೆಯನ್ನು ಧರಿಸಿದ್ದರು. ದೀಪಿಕಾ ಪಡುಕೋಣೆ ಕೂಡ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, ಪ್ರೆಗ್ನೆಂಟ್ ಅನ್ನೋ ಕಾರಣಕ್ಕೆ ಅವರು ಡ್ಯಾನ್ಸ್ ಮಾಡಿಲ್ಲ.
ಇದನ್ನೂ ಓದಿ: Ananth Ambani: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಮದುವೆ ನಡೆಯಲಿದೆ.
ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.