ಬೆಂಗಳೂರು: ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚಂಟ್ ಫ್ರೆಂಚ್ ಕ್ರೂಸ್‌ನಲ್ಲಿ ತಮ್ಮ ವಿವಾಹ ಪೂರ್ವ ಎರಡಡನೇ ಪಾರ್ಟಿಯನ್ನು ಪ್ರಾರಂಭಿಸುತ್ತಿದ್ದಂತೆ ಎಲ್ಲರ ಕಣ್ಣುಗಳು ಅವರ ಮೇಲೆ ನೆಟ್ಟಿದ್ದವು. , ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಇದೀಗ ನಾಲ್ಕು ದಿನಗಳ ವಿವಾಹ ಪೂರ್ವ ಸಮಾರಂಭದಲ್ಲಿ ಐಷಾರಾಮಿ ಫ್ರೆಂಚ್ ಕ್ರೂಸ್‌ನಲ್ಲಿ ತನ್ನ ಪವರ್‌ಪ್ಯಾಕ್ಡ್ ಪ್ರದರ್ಶನದೊಂದಿಗೆ ಅತಿಥಿಗಳನ್ನು ಮನರಂಜಿಸಲಿದ್ದಾರಂತೆ ಶಕೀರಾ.
ʻವಾಕಾ ವಾಕಾʼ ಹಾಡಿನ ಖ್ಯಾತ ಗಾಯಕಿ ಶಕೀರಾ 10ರಿಂದ 15 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಮತ್ತು ರಾಧಿಕಾ ಅವರ ಮೊದಲ ಪೂರ್ವಭಾವಿ ಕಾರ್ಯಕ್ರಮಕ್ಕಾಗಿ ರಿಹಾನ್ನಾ ಅವರು ಪ್ರದರ್ಶನ ನೀಡಿದ್ದರು. 74 ಕೋಟಿ ರೂ. ಸಂಭಾವನೆ ಪಡೆದಿದ್ದರು. ಇದೀಗ ಶಕೀರಾ ಸರದಿ ಎನ್ನಲಾಗಿದೆ.
ಅಂಬಾನಿಯ ಕ್ರೂಸ್ ಪಾರ್ಟಿ ಮೇ 29ರಂದು ಪ್ರಾರಂಭವಾಗಿದ್ದು, ಮತ್ತು ಜೂನ್ 1ರವರೆಗೆ ನಡೆಯಲಿದೆ. ಸಲ್ಮಾನ್ ಖಾನ್, ಆಲಿಯಾ ಭಟ್, ರಣಬೀರ್ ಕಪೂರ್, ರಣವೀರ್ ಸಿಂಗ್, ಅನನ್ಯ ಪಾಂಡೆ, ಸಾರಾ ಅಲಿ ಖಾನ್, ಓರಿ ಮತ್ತು ಇತರರು ಇದ್ದಾರೆ.
ಇದನ್ನೂ ಓದಿ: Kannada New Movie: ಹಾಡಿನ ಮೂಲಕ ಸದ್ದು ಮಾಡ್ತಿದೆ ʻಬ್ಯಾಕ್ ಬೆಂಚರ್ಸ್ʼ ಸಿನಿಮಾ!
ಮದುವೆ ಯಾವಾಗ?
ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಮದುವೆ ನಡೆಯಲಿದೆ.
ಭಾರತೀಯ ಸಂಪ್ರದಾಯದ ಉಡುಪುಗಳು
ಜುಲೈ 12ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.