ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani Wedding) ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್ ಅವರ ಪುತ್ರಿ ರಾಧಿಕಾ ಮರ್ಚಂಟ್ (Radhika Merchant) ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೊ, ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅನಂತ್ ಅಂಬಾನಿ ಮದುವೆಯಲ್ಲಿ ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದಿರುವುದು ನೋಡುಗರ ಅಚ್ಚರಿಗೆ ಕಾರಣವಾಗಿದೆ.
ಸಾಮಾನ್ಯವಾಗಿ ಶೇರ್ವಾನಿಗೆ ಮ್ಯಾಚಿಂಗ್ ರಾಯಲ್ ಶೂ ಅಥವಾ ಕೋಲ್ಹಾಪುರಿ ಚಪ್ಪಲ್ ಸಹ ಧರಿಸಲಾಗುತ್ತದೆ. ಕೆಲವರು ಲೂಫರ್ ಮಾದರಿಯ ಶೂ ಧರಿಸೋದು ಕೆಲದಿನಗಳಿಂದ ಟ್ರೆಂಡ್ ಆಗುತ್ತಿದೆ. ಆದರೆ ಅನಂತ್ ಅಂಬಾನಿ ಮದುವೆಯಲ್ಲಿ ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದಿರುವುದು ನೋಡುಗರ ಅಚ್ಚರಿಗೆ ಕಾರಣವಾಗಿದೆ. ಅನಂತ್ ಅಂಬಾನಿ ಡಿಸೈನರ್ ಗಳಿಗೆ ಇದು ಯಾಕೆ ಗಮನಕ್ಕೆ ಬಂದಿಲ್ಲ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಮದುವೆಗೂ ಮುನ್ನ ಎಲ್ಲರೂ ನೀಲಿಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರು.
ಬನಾರಸಿ ರೇಷ್ಮೆ, ಕಾಂಚಿವರಂ ಸೇರಿದಂತೆ ದೇಸಿ ಹ್ಯಾಂಡ್‌ಲೂಮ್‌ನಿಂದ ಸಿದ್ಧಗೊಂಡ ಬಂಗಾರದ ದಾರದಿಂದಲೇ ನೇಯ್ದ ಸಿಲ್ಕ್ ಸೀರೆಗಳು ಸೀರೆಗಳು ನೀತಾ ಅಂಬಾನಿಯ ಸೌಂದರ್ಯವನ್ನು ಹೆಚ್ಚಿಸುತ್ತಿವೆ ಎಂದರೂ ಅತಿಶಯೋಕ್ತಿಯಾಗದು.
ಇದನ್ನೂ ಓದಿ: Anant Ambani Wedding: ಅಂಬಾನಿ ಪುತ್ರನ ಮದುವೆಯಲ್ಲಿ ಹಾರ್ದಿಕ್ ಪಾಂಡ್ಯ-ಅನನ್ಯಾ ಪಾಂಡೆ ಮಸ್ತ್ ಡಾನ್ಸ್! ವಿಡಿಯೋ ಇದೆ
ನೀತಾ ಅಂಬಾನಿಯ ಮಗಳು ಇಶಾ ಈ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಧರಿಸಿದ್ದ ಒಂದೊಂದು ಲೆಹೆಂಗಾ ಕೂಡ ಒಂದೊಂದು ಕಥೆಯನ್ನೇ ಹೇಳಿವೆ. ಅಡಿಯಿಂದ ಮುಡಿಯವರೆಗೂ ಧರಿಸಿದ ವಜ್ರ-ವೈಢೂರ್ಯದ ಆಕ್ಸೆಸರೀಸ್‌ಗಳು ಫ್ಯಾಷನ್ ಲೋಕ ಮಾತ್ರವಲ್ಲ, ಜ್ಯುವೆಲರಿ ಲೋಕದಲ್ಲೂ ಸಂಚಲ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಇನ್ನು, ಶ್ಲೋಕ ಅಂಬಾನಿ ಕೂಡ ಇದರಿಂದ ಹೊರತಾಗಿಲ್ಲ! ಇಲ್ಲಿ ಗಮನಿಸಬೇಕಾದ್ದು ಒಂದೇ ಒಬ್ಬರಿಗಿಂತ ಒಬ್ಬರದು ವಿಭಿನ್ನ ವಿನ್ಯಾಸ ಒಳಗೊಂಡಿದ್ದವು.
ಸದ್ಯ ಅಂಬಾನಿ ಫ್ಯಾಮಿಲಿಯ ಬಹುತೇಕ ಎಲ್ಲಾ ಪುರುಷರು ನಾನಾ ವೆರೈಟಿ ಬಂದ್ಗಾಲ ಇಲ್ಲವೇ ಗೋಲ್ಡನ್ ಶೇಡ್ ಮಿಕ್ಸ್ ಕುರ್ತಾ ಸ್ಟೈಲಿಂಗ್‌ಗೆ ಸೈ ಎಂದಿದ್ದು, ಪ್ರತಿ ಕಾರ್ಯಕ್ರಮಕ್ಕೆ ತಕ್ಕಂತೆ ಡಿಸೈನ್ ಬದಲಿಸುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್ ಔಟ್‌ಫಿಟ್‌ಗಳು ಎಲ್ಲರನ್ನು ಸಮ್ಮೋಹನಗೊಳಿಸುತ್ತಿವೆ ಎನ್ನುತ್ತಾರೆ ಪ್ಯಾಷನ್ ವಿಮಶರ್ಕರು.
ಗಣ್ಯರ ದಂಡೇ ಉಪಸ್ಥಿತಿ
ಅನಂತ್ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್ ಧೋನಿ, ಅಮಿತಾಭ್ ಬಚ್ಚನ್, ಆಲಿಯಾ ಭಟ್, ರಣವೀರ್ ಸಿಂಗ್, ರಣಬೀರ್ ಕಪೂರ್, ಅನನ್ಯಾ ಪಾಂಡೆ, ರಜನಿಕಾಂತ್, ಮಹೇಶ್ ಬಾಬು, ಹಾರ್ದಿಕ್ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಬ್ರಿಟನ್ ಮಾಜಿ ಪ್ರಧಾನಿಗಳಾದ ಬೋರಿಸ್ ಜಾನ್ಸನ್, ಟೋನಿ ಬ್ಲೇರ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.
5 ಸಾವಿರ ಕೋಟಿ ರೂ. ಖರ್ಚು
ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.
ವಿವಾಹ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದವು. ಭಾರತದ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.