ಬೆಂಗಳೂರು: ನಟಿ ತಮನ್ನಾ ಭಾಟಿಯಾ (Tamannaah Bhatia ) ಭಾನುವಾರ (ಜು.14) ಮುಂಬೈನಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಆಯೋಜಿಸಿದ್ದ ‘ಮಂಗಲ್ ಉತ್ಸವ’ದಲ್ಲಿ ಭಾಗವಹಿಸಿದ್ದರು. ನಟಿ ಕಪ್ಪು ಹಾಗೂ ಬಂಗಾರ ಮಿಶ್ರಿತ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ನಟಿಯ ಈ ಸುಂದರವಾದ ಲೆಹೆಂಗಾ ಬರೋಬ್ಬರಿ 3.85 ಲಕ್ಷ ರೂ. ಎಂದು ವರದಿಯಾಗಿದೆ. ‘ಟೋರಾಣಿ’ ಅವರ ಲೆಹೆಂಗಾ ಡಿಸೈನರ್.
‘ಭದ್ರ ನಲಿಕಾ ಲೆಹೆಂಗಾ’ ಎಂದು ಹೆಸರಿಸಲಾಗಿದೆ. ನಟಿಯ ಲೆಹೆಂಗಾವು ಮತ್ಸ್ಯಕನ್ಯೆಯಂತಹ ಶೈಲಿಯಲ್ಲಿ ರಚನೆಯಾಗಿದೆ. ಚಿಕ್ಕದಾದ ಕುಪ್ಪಸ, ಭಾರವಾದ ದುಪಟ್ಟಾ ಮತ್ತು ಮ್ಯಾಚಿಂಗ್ ಕಪ್ಪು ಪೊಟ್ಲಿಯೊಂದಿಗೆ ಧರಿಸಿದ್ದರು. ಜುಮ್ಕಿಗಳು ಮತ್ತು ಮಧ್ಯಮ ಗಾತ್ರದ ಮಾಂಗ್-ಟಿಕಾವನ್ನು ಹೊರತುಪಡಿಸಿ ಯಾವುದೇ ಆಭರಣವನ್ನು ಧರಿಸಿಲ್ಲ.
ತಮನ್ನಾ ಪ್ರಾಯೋಗಿಕ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಫಿಗರ್-ಹಗ್ಗಿಂಗ್ ಸಿಲೂಯೆಟ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ, ಈ ಬಾರಿ ಅವರು ಸಂಪೂರ್ಣ ಫಿಲ್ಮಿ ಲುಕ್‌ಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕೆಂಪು ಗುಲಾಬಿಗಳಿಂದ ಅಲೋಕೃತವಾದ ಉದ್ದನೆಯ ಜಡೆಯಲ್ಲಿ ಸ್ಟೈಲಿಂಗ್ ಮಾಡಿದ್ದರು. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ರಿಸೆಪ್ಷನ್ ನಡೆಯುತ್ತಿದ್ದು, ಹಲವಾರು ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರಿಗೂ ಈ ಸಮಾರಂಭಕ್ಕೆ ಆಹ್ವಾನ ಬಂದಿದೆ. ಆಕರ್ಷಕವಾದ ಉಡುಗೆ ಧರಿಸಿ ಬಂದಿರುವ ತಮನ್ನಾ ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಇದನ್ನೂ ಓದಿ: Anant Ambani Wedding: ಪಾದ ಸ್ಪರ್ಶಿಸಲು ಬಂದ ರಜನಿಯನ್ನು ಬಿಗಿದಪ್ಪಿಕೊಂಡ ಅಮಿತಾಭ್ ಬಚ್ಚನ್!
ಅನಂತ್ ಮತ್ತು ರಾಧಿಕಾ ಅವರ ಮದುವೆಯ ಆರತಕ್ಷತೆಯಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದ್ದರು. ಗೋವಿಂದ, ಸನ್ನಿ ಡಿಯೋಲ್, ಬಾಬಿ ಡಿಯೋಲ್, ಮಧುರ್ ಭಂಡಾರ್ಕರ್, ಸುಭಾಷ್ ಘಾಯ್, ರಾಜ್‌ಕುಮಾರ್ ರಾವ್-ಪತ್ರಲೇಖಾ, ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್, ಅರ್ಜುನ್ ಕಪೂರ್, ಡಯಾನಾ ಪೆಂಟಿ, ಅಟ್ಲೀ, ಜಾಕಿ ಭಗ್ನಾನಿ-ರಾಕುಲ್ ಪ್ರೀತ್ ಸಿಂಗ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಇತರರು ಭಾಗವಹಿಸಿದ್ದರು.
ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರು ಸಾವಿರಾರು ಗಣ್ಯರು (Anant Ambani Wedding), ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.