ಬೆಂಗಳೂರು: ಅನನ್ಯಾ ಪಾಂಡೆ (Ananya Panday) ಮತ್ತು ಆದಿತ್ಯ ರಾಯ್ ಕಪೂರ್ (Aditya Roy Kapur ) ನಡುವೆ ಡೇಟಿಂಗ್ ವದಂತಿಗಳು ಹೊಸದೇನಲ್ಲ. ಆದರೆ ಹೊಸ ವರದಿಗಳ ಪ್ರಕಾರ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಆದಿತ್ಯ ರಾಯ್ ಕಪೂರ್ ಅವರು ಸಾರಾ ಅಲಿ ಖಾನ್ ಅವರೊಂದಿಗೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡರು. ಈ ಪಾರ್ಟಿಯ ಹಲವು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವರದಿಯಾಗಿದೆ.
ವೈರಲ್ ಆದ ಫೋಟೊದಲ್ಲಿ ಆದಿತ್ಯ ಮತ್ತು ಸಾರಾ ಚಿತ್ರನಿರ್ಮಾಪಕ ಅನುರಾಗ್ ಬಸು ಅವರೊಂದಿಗೆ ಸಮಯವನ್ನು ಕಳೆಯುತ್ತಿರುವುದು ಕಾಣಬಹುದು. ಮೆಟ್ರೋ ಇನ್ ಡಿನೋ ಸಿನಿಮಾ ಸೆಟ್ನಲ್ಲಿ ಆಯೋಜಿಸಲಾದ ನಿರ್ದೇಶಕರ ಹುಟ್ಟುಹಬ್ಬದ ಸಂದರ್ಭದ ಫೋಟೊಗಳಿವು ಎನ್ನಲಾಗುತ್ತಿದೆ. ಆದಿತ್ಯ ಮತ್ತು ಸಾರಾ ಚಿತ್ರಗಳಲ್ಲಿ ಪರಸ್ಪರ ಹತ್ತಿರವಾಗಿ ನಿಂತಿದ್ದಾರೆ.
ಅನನ್ಯಾ ಮತ್ತು ಆದಿತ್ಯ ಪ್ರೇಮ ಸಂಬಂಧದಲ್ಲಿದ್ದಾರೆ ಎಂಬ ವದಂತಿ 2022ರಲ್ಲಿ ಶುರುವಾಗಿತ್ತು. 2022ರಲ್ಲಿ ಕೃತಿ ಸನೂನ್ ಅವರ ದೀಪಾವಳಿ ಪಾರ್ಟಿಯಲ್ಲಿ ಜೋಡಿ ಕಾಣಿಸಿಕೊಂಡಾಗ ವದಂತಿ ಸುದ್ದಿಗಳು ಮತ್ತಷ್ಟು ಹೆಚ್ಚಾಯ್ತು. ಕರಣ್ ಜೋಹರ್ ಅವರು ತಮ್ಮ ಟಾಕ್ ಶೋ ಸಂದರ್ಭದಲ್ಲಿಯೂ ಅನನ್ಯಾ ಈ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ: Ananya Panday: ‘ಹಾವು’ ಜತೆಗಿದ್ದ ಫೋಟೊ ಡಿಲಿಟ್ ಮಾಡಿದ ನಟಿ ಅನನ್ಯಾ ಪಾಂಡೆ
ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ (Ananya Panday) ‘ಕಾಫಿ ವಿತ್ ಕರಣ್’ ಸೀಸನ್ 8ರಲ್ಲಿ ಅತಿಥಿಗಳಾಗಿ ಆಗಮಿಸಿದ್ದರು. ಸಾರಾ ಅವರು ಶುಭಮನ್ ಗಿಲ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ನಿರಾಕರಿಸಿದರೆ, ಅನನ್ಯಾ ಅವರು ಆದಿತ್ಯ ರಾಯ್ ಕಪೂರ್ ಜತೆಗಿನ ಸಂಬಂಧವನ್ನು ಬಹುತೇಕ ದೃಢಪಡಿಸಿದ್ದರು. ನಿರ್ಮಾಪಕ ಮತ್ತು ನಿರೂಪಕ ಕರಣ್ ಜೋಹರ್ ಅನನ್ಯಾ ಅವರನ್ನು ʻಆದಿತ್ಯ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರ? ಎಂದು ಪ್ರಶ್ನೆ ಕೇಳಿದ್ದರು. ಇದರಿಂದ ಬಚಾವ್ ಆಗಲು ಅನನ್ಯಾ ಹಲವಾರು ಪ್ರಯತ್ನಗಳನ್ನು ಮಾಡಿದದ್ದರು. ಆದರೆ ಕೊನೆಗೂ ಆಗಿರಲಿಲ್ಲ. ಆದಿತ್ಯ ಜತೆ ಇರುವುದು ನಿಮ್ಮ ಸ್ನೇಹಾನಾ ಅಥವಾ ಸ್ನೇಹಕ್ಕಿಂತ ಮುಂದುವರಿದ ಸಂಬಂಧನಾ?ಎಂದು ಪ್ರಶ್ನೆ ಇಟ್ಟರು ಕರಣ್. “ಸ್ನೇಹಿತರಲ್ಲ, ನಾವು ಸ್ನೇಹಿತರು” ಎಂದು ಅನನ್ಯಾ ಹೇಳಿದರು, ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಕರಣ್ ವ್ಯಂಗ್ಯವಾಡಿದರು,”ಬೆಸ್ಟ್ ಫ್ರೆಂಡ್ಸ್, ನಾವು ನಿಜವಾಗಿಯೂ ಒಳ್ಳೆಯ ಸ್ನೇಹಿತರು” ಎಂದಿದ್ದರು ಅನನ್ಯಾ.