Site icon Vistara News

Ankita Lokhande: ಮೂರನೇ ಬಾರಿಗೆ ಮದುವೆಯಾದ್ರಾ ಸುಶಾಂತ್ ಸಿಂಗ್‌ ಮಾಜಿ ಪ್ರೇಮಿ?

Ankita Lokhande

ಬೆಂಗಳೂರು: ಬಾಲಿವುಡ್‌ ಹಾಗೂ ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ವಿಕ್ಕಿ ಜೈನ್‌ ಅವರೊಂದಿಗೆ ಇದೀಗ ಮತ್ತೆ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ವಿಕ್ಕಿ ಜೈನ್ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರೂ ಇಬ್ಬರೂ ಪ್ರೀತಿಗೆ ಪ್ರಾಮುಖ್ಯತೆ ನೀಡಿ 2021ರಲ್ಲಿಯೇ ಮ ದುವೆಯಾದರು. ಇದೀಗ ಮೂರನೇ ಬಾರಿಗೆ ಮತ್ತೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರ ಮದುವೆಯ ಸೆಟಪ್‌ ಫೋಟೊ ವೈರಲ್ ಆಗಿದೆ. ದಂಪತಿ ಇದಕ್ಕೂ ಮುಂಚೆ ವಿದೇಶದಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆ ಆಗಿದ್ದರು.

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ‘ಬಿಗ್ ಬಾಸ್ 17’ ನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಮಾರ್ಚ್ 19 ರಂದು, ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಸಾಂಪ್ರದಾಯಿಕವಾಗಿ ಮದುವೆಯಾದರು. ರೇಷ್ಮೆ ಸೀರೆಯಲ್ಲಿ ಅಂಕಿತಾ ಲೋಖಂಡೆ ಮಿಂಚಿದ್ದಾರೆ. ಬೂದು ಬಣ್ಣದ ಶರ್ಟ್‌ನಲ್ಲಿ ವಿಕ್ಕಿ ಕಂಡರು.

ಅಂಕಿತಾ ಮತ್ತು ವಿಕ್ಕಿ ಜೈನ್‌ ಅವರು 2021ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದ ನಟಿ ಆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. “ಪ್ರೀತಿಗೆ ತಾಳ್ಮೆಯಿದೆ ಆದರೆ ನಮಗಿಲ್ಲ. ಸರ್‌ಪ್ರೈಸ್! ನಾವೀಗ ಅಧಿಕೃತವಾಗಿ ಮಿಸ್ಟರ್‌ ಆ್ಯಂಡ್ ಮಿಸಸ್‌” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Ankita Lokhande : ʻಧಕ್​ ಧಕ್​ ಕರನೇ ಲಗಾʼ ಹಾಡಿಗೆ ಮೈ ಚಳಿ ಬಿಟ್ಟು ಸ್ಟೆಪ್‌ ಹಾಕಿದ  `ಬಿಗ್​ಬಾಸ್’​ ಖ್ಯಾತಿಯ ಅಂಕಿತಾ ಲೋಖಂಡೆ!

ಇದಾದ ಬಳಿಕ 2023ರ 9ನೇ ಅಗಸ್ಟ್‌ನಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾದರು. ಅಂಕಿತಾ ಅವರು ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ಅರ್ಚನಾ ಪಾತ್ರದಲ್ಲಿ ನಟಿಸಿ ಮನೆ ಮಾತಾದವರು. ಅದಾದ ನಂತರ ಅವರು ಏಕ್‌ ಥೀ ನಾಯ್ಕಾ ಮತ್ತು ಶಕ್ತಿ- ಅಸ್ತಿತ್ವ ಕೆ ಎಹ್ಸಾಸ್‌ ಕಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಂಕಿತಾ ಅವರು 2019ರಲ್ಲಿ ಕಂಗನಾ ರಣಾವತ್‌ ಅವರ ಮಣಿಕರ್ಣಿಕ: ದಿ ಕ್ವೀನ್‌ ಆಫ್‌ ಜಾನ್ಸಿ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಅದಾದ ನಂತರ ಅವರು ಟೈಗರ್‌ ಶಾರ್ಫ್‌ ನಟನೆಯ ಬಾಘಿ 3 ಸಿನಿಮಾದಲ್ಲಿ ಕಾಣಿಸಿಕೊಂಡರು. ಅದಲ್ಲದೆ ಅವರು ಜಲಕ್‌ ದಿಖ್ಲಾ ಜಾ ಮತ್ತು ಕಾಮಿಡಿ ಸರ್ಕಸ್‌ ಶೋಗಳಲ್ಲೂ ಕಾಣಿಸಿಕೊಂಡಿದ್ದರು.

ಸುಶಾಂತ್ ಸಿಂಗ್ ರಜಪೂತ್ (Bigg Boss 17) ಮಾಜಿ ಲವರ್, ನಟಿ ಅಂಕಿತಾ ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಗಮನ ಸೆಳೆದಿದ್ದರು. ಮಾತ್ರವಲ್ಲ ಆಗಾಗ ಈ ಜೋಡಿ ಗಲಾಟೆ ಕೂಡ ಮಾಡಿಕೊಳ್ಳುತ್ತಲೇ ಫೇಮಸ್‌ ಆಗಿತ್ತು.

Exit mobile version