Site icon Vistara News

Viral Photo: ವೈರಲ್ ಆಗಿರುವ ಈ ಚಿತ್ರದಲ್ಲಿನ ನಟಿಯನ್ನು ಗುರುತಿಸಬಲ್ಲಿರಾ?

Anushka Sharma

ಬಾಲಿವುಡ್ (Bollywood) ನಟ, ನಟಿಯರ ಬಾಲ್ಯದ ಫೋಟೋ, ವಿಡಿಯೋಗಳನ್ನು ಅವರ ಅಭಿಮಾನಿಗಗಳು ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ (social media) ಹಾಕುತ್ತಾರೆ. ಇದು ಸಾಕಷ್ಟು ಅಭಿಮಾನಿಗಳನ್ನೂ ಸೆಳೆಯುವಂತೆ ಮಾಡುತ್ತದೆ. ಅಂತಹ ಫೋಟೋವೊಂದು ಈಗ ವೈರಲ್ (viral photo) ಆಗಿದ್ದು, ಈಗ ಇವರು ಬಾಲಿವುಡ್ ನ ಸೂಪರ್ ಸ್ಟಾರ್ ನಟಿಯೂ (super star actress) ಆಗಿದ್ದಾರೆ.

ಬಾಲಿವುಡ್ ನಟಿಯೊಬ್ಬರು ತಮ್ಮ ಬಾಲ್ಯದ ಫೋಟೋದಲ್ಲಿ ನಗುತ್ತಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ. ಇವರು ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ ( Shah Rukh Khan), ರಣವೀರ್ ಸಿಂಗ್ (Ranveer Singh) ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಸೇರಿದಂತೆ ಹಲವಾರು ಸೂಪರ್‌ಸ್ಟಾರ್‌ಗಳೊಂದಿಗೆ ಹಲವು ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದೀಗ ವೈರಲ್ ಆಗಿರುವ ಬಾಲ್ಯದ ಫೋಟೋ ವೈರಲ್ 2008 ರಲ್ಲಿ ಶಾರುಖ್ ಖಾನ್ ಜೊತೆಗಿನ ‘ರಬ್ ನೆ ಬನಾ ದಿ ಜೋಡಿ’ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅನುಷ್ಕಾ ಶರ್ಮಾ ಅವರದ್ದು. ರಬ್ ನೆ ಬನಾ ದಿ ಜೋಡಿ ಚಿತ್ರ ಸೂಪರ್ ಹಿಟ್ ಆಗಿದ್ದು ಬಳಿಕ ಅನುಷ್ಕಾ ಶರ್ಮಾ ಎಲ್ಲರ ಮನೆಮಾತಾಗುವಂತೆ ಮಾಡಿತ್ತು.

ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತೇ?

ಸೇನಾ ಅಧಿಕಾರಿ ಕರ್ನಲ್ ಅಜಯ್ ಕುಮಾರ್ ಶರ್ಮಾ ಅವರ ಮಗಳಾಗಿರುವ ಅನುಷ್ಕಾ ಶರ್ಮಾ ಅವರ ಸಹೋದರ ಚಲನಚಿತ್ರ ನಿರ್ಮಾಪಕ ಕರ್ಣೇಶ್ ಶರ್ಮಾ. ಇವರು ಮೊದಲು ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದರು.

ಬಾಲಿವುಡ್ ಅಂಗಳಕ್ಕೆ ಬರುವ ಮುನ್ನ ಅನುಷ್ಕಾ ಶರ್ಮಾ ಅವರು ಮಾಡೆಲಿಂಗ್ ಅಥವಾ ಪತ್ರಿಕೋದ್ಯಮದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸಿದ್ದರು. ನಟಿಯಾಗುವ ಆಸೆಯೇ ಅವರಿಗೆ ಇರಲಿಲ್ಲ.

ಮಾಡೆಲಿಂಗ್ ಮಾಡುತ್ತಿದ್ದಾಗ ಅನುಷ್ಕಾ ಶರ್ಮಾ ಸಹ ನಟನಾ ಶಾಲೆಗೆ ಸೇರಿಕೊಂದು ಚಲನಚಿತ್ರ ಪಾತ್ರಗಳಿಗಾಗಿ ಆಡಿಷನ್ ಮಾಡಲು ಪ್ರಾರಂಭಿಸಿದರು.

ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ

ಅನುಷ್ಕಾ ಶರ್ಮಾ ಅವರ ಬಾಲಿವುಡ್ ಗೆ ಪ್ರವೇಶ ಪಡೆದು 16 ವರ್ಷಗಳು ಕಳೆದಿವೆ. ಈಗ ಅವರು ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.


ಹಲವು ಚಿತ್ರ ಸೂಪರ್ ಹಿಟ್

ಅನುಷ್ಕಾ ಶರ್ಮಾ ಅವರ ನಿವ್ವಳ ಆಸ್ತಿ ಮೌಲ್ಯ 289 ಕೋಟಿ ರೂ. ವೃತ್ತಿಜೀವನದಲ್ಲಿ ಸಲ್ಮಾನ್ ಖಾನ್ ಜೊತೆ ‘ಸುಲ್ತಾನ್’, ರಣವೀರ್ ಸಿಂಗ್ ಜೊತೆ ‘ಬ್ಯಾಂಡ್ ಬಾಜಾ ಬಾರಾತ್’, ಅಕ್ಷಯ್ ಕುಮಾರ್ ಜೊತೆ ‘ಪಟಿಯಾಲಾ ಹೌಸ್’, ಶಾರುಖ್ ಖಾನ್ ಜೊತೆ ‘ಜಬ್ ತಕ್ ಹೈ ಜಾನ್’ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕತ್ರಿನಾ ಕೈಫ್, ರಣವೀರ್ ಸಿಂಗ್ ಜೊತೆ ‘ದಿಲ್ ಧಡಕ್ನೆ ದೋ’, ಅಮೀರ್ ಖಾನ್ ಜೊತೆಗೆ ಪಿಕೆ, ರಣಬೀರ್ ಕಪೂರ್ ಮತ್ತು ಐಶ್ವರ್ಯಾ ರೈ ಬಚ್ಚನ್ ಜೊತೆಗೆ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಅನುಷ್ಕಾ ಶರ್ಮಾ ಕೊನೆಯದಾಗಿ 2018 ರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆ ‘ಜೀರೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಫ್ಲಾಪ್ ಆಗಿತ್ತು.

ಆರು ವರ್ಷಗಳ ಬಳಿಕ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯನ್ನು ಒಳಗೊಂಡಿರುವ ‘ಚಕ್ಡಾ ಎಕ್ಸ್‌ಪ್ರೆಸ್’ ಚಿತ್ರದ ಮೂಲಕ ನಟನೆಗೆ ಮರಳಿರುವ ಅನುಷ್ಕಾ ಶರ್ಮಾ ಅವರ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಸ್ಟಾರ್ ಜೋಡಿ

2017ರಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮದುವೆಯಾಗಿರುವ ಅನುಷ್ಕಾ ಶರ್ಮಾ ಅವರಿಗೆ ವಾಮಿಕಾ ಮತ್ತು ಅಕಾಯ್ ಎಂಬ ಇಬ್ಬರು ಮಕ್ಕಳಿದ್ದಾರೆ.

Exit mobile version