Site icon Vistara News

AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

AR Rahman says his mother thought his Oscar statuettes were made of gold

ಬೆಂಗಳೂರು: ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ (AR Rahman) ಅವರಿಗೆ 2ಆಸ್ಕರ್, 2 ಗ್ರ್ಯಾಮಿ, 1 BAFTA, 1 ಗೋಲ್ಡನ್ ಗ್ಲೋಬ್, 6 ರಾಷ್ಟ್ರ ಪ್ರಶಸ್ತಿ, 32 ಫಿಲ್ಮ್​ಫೇರ್ ಅವಾರ್ಡ್​ಗಳು ಬಂದಿವೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಈ ಪ್ರಶಸ್ತಿಗಳನ್ನೆಲ್ಲ ಎಲ್ಲಿ ಇಟ್ಟಿದ್ದಾರೆ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ಆಗ ರೆಹಮಾನ್ ಅವರು ಉತ್ತರ ನೀಡಿ ʻʻನನ್ನ ತಾಯಿ ಕರೀಮಾ ಬೇಗಂ (Kareema Begum) ದುಬೈ ಮನೆಯಲ್ಲಿ ಸಂಗ್ರಹಿಟ್ಟಿದರು. ಪ್ರಶಸ್ತಿಗಳು ಚಿನ್ನದಿಂದ ಮಾಡಲ್ಪಟ್ಟಿವೆ ಎಂದು ಅವರು ಭಾವಿಸಿ ಟವೆಲ್‌ನಲ್ಲಿ ಸುತ್ತಿ ಇಟ್ಟಿದ್ದರುʼಎಂದು ಹೇಳಿದ್ದಾರೆ.

ಈ ಬಗ್ಗೆ ರೆಹಮಾನ್ ಮಾತನಾಡಿ ʻʻನಾನು ದುಬೈನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಇಟ್ಟುಕೊಂಡಿದ್ದೇನೆ. ಏಕೆಂದರೆ ಅವೆಲ್ಲವೂ ಟವೆಲ್‌ನಲ್ಲಿ ಸುತ್ತಿಡಲಾಗಿತ್ತು. ನನ್ನ ತಾಯಿ ಅದನ್ನು ಟವೆಲ್‌ನಲ್ಲಿ ಸುತ್ತಿಟ್ಟಿದ್ದರು. ಪ್ರಶಸ್ತಿಗಳನ್ನು ಚಿನ್ನದಿಂದ ಮಾಡಿದ್ದಾರೆ ಅಂದುಕೊಂಡಿದ್ದರು. ಅವರು ತೀರಿ ಹೋದ ನಂತರ ಆ ಅವಾರ್ಡ್​ಗಳನ್ನು ನಾನು ದುಬೈ ಫಿರ್ದೌಸ್ ಸ್ಟುಡಿಯೋಗೆ ನೀಡಿದ್ದೇನೆ. ಇದೊಂದು ಒಳ್ಳೆಯ ಶೋಕೇಸ್’ ಎಂದಿದ್ದಾರೆ ರೆಹಮಾನ್. 2008ರ ಚಲನಚಿತ್ರ ಸ್ಲಮ್‌ಡಾಗ್ ಮಿಲಿಯನೇರ್‌ಗಾಗಿ ʻಗೋಲ್ಡನ್ ಗ್ಲೋಬ್ʼ ಅನ್ನು ಗೆದಿದ್ದರು.

ರೆಹಮಾನ್ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 32 ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅದೇ ಭಾರತೀಯ ಪ್ರಶಸ್ತಿಗಳನ್ನು ತಮ್ಮ ತವರು ಚೆನ್ನೈನಲ್ಲಿರುವ ವಿಶೇಷ ಕೋಣೆಯಲ್ಲಿ ಇಟ್ಟಿರುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿ ʻʻಕೆಲವು ಪ್ರಶಸ್ತಿಗಳು ನನ್ನ ಬಳಿ ಇದುವೆರೆಗೆ ಬಂದಿಲ್ಲ. ಕೆಲವು ನಿರ್ದೇಶಕರು ಅವುಗಳನ್ನು ಸ್ಮರಣಿಕೆಗಳಂತೆ ಇಟ್ಟುಕೊಂಡಿದ್ದಾರೆʼʼಎಂದರು.

ಇದನ್ನೂ ಓದಿ: AR Rahman: ಪುಟಾಣಿ ಹುಡುಗಿಯ ಮಾತು ಕೇಳಿ ಎಆರ್ ರೆಹಮಾನ್ ಫಿದಾ; ಕೀಬೋರ್ಡ್ ಕೊಡುತ್ತೇನೆ ಎಂದ ಗಾಯಕ!

ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದು ಭಾವುಕರಾದರು. ʻನಾನು ಸ್ಟುಡಿಯೊವನ್ನು ನಿರ್ಮಿಸಿದಾಗ, ಆಂಪ್ಲಿಫೈಯರ್ ಅಥವಾ ಈಕ್ವಲೈಸರ್ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ಶೆಲ್ಫ್ ಮತ್ತು ಕಾರ್ಪೆಟ್ನೊಂದಿಗೆ ಕೇವಲ ಎಸಿ ಇತ್ತು. ಏನನ್ನೂ ಖರೀದಿಸಲು ಹಣವಿಲ್ಲದೆ ಕುಳಿತಿದ್ದೆ. ಆಗ ನನ್ನ ತಾಯಿ ಆಭರಣಗಳನ್ನು ಒತ್ತೆ ಇಡಲು ನೀಡಿದಳು. ಬಳಿಕ ಮೊದಲ ರೆಕಾರ್ಡರ್ ತಂದೆʼʼ ಎಂದು ಅವರು ಹೇಳಿದರು. ಕರೀಮಾ ಬೇಗಂ 2020ರಲ್ಲಿ ನಿಧನರಾಗಿದ್ದಾರೆ.

Exit mobile version