ಬೆಂಗಳೂರು: ಉರಿ: ಸರ್ಜಿಕಲ್ ಸ್ಟ್ರೈಕ್ (Uri: The Surgical Strike) ಸಿನಿಮಾ ಬಾಲಿವುಡ್‌ಗೆ ಯುವ ಸೂಪರ್‌ಸ್ಟಾರ್ ಅನ್ನು ನೀಡಿದ್ದು ಮಾತ್ರವಲ್ಲದೆ ಸಮಕಾಲೀನ ಚಲನಚಿತ್ರಗಳಿಗೆ ಕಾಂಪೀಟ್ ಕೂಡ ಮಾಡಿತ್ತು. ಹಿಂದೆಂದೂ ನೋಡಿರದ ಸ್ಟ್ರೈಕ್ ಸೀಕ್ವೆನ್ಸ್‌ಗಳು, ಕ್ಯಾಮೆರಾ ವರ್ಕ್, ಅದ್ಭುತ ನಿರ್ದೇಶನ, ಸಂಕಲನ ಪ್ರೇಕ್ಷಕರನ್ನು ಮನಮುಟ್ಟುವಂತೆ ಮಾಡಿತ್ತು. ಐದು ವರ್ಷಗಳ ನಂತರ, ಆದಿತ್ಯ ಧರ್ ಅವರು ‘ಆರ್ಟಿಕಲ್ 370’ ಸಿನಿಮಾ ರಿಲೀಸ್ ಮಾಡಿದ್ದಾರೆ. ಆರ್ಟಿಕಲ್ 370 ಇಂದು ಬಿಡುಗಡೆಯಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯ ಏಜೆಂಟ್ ಆಗಿ ಯಾಮಿ ಗೌತಮ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. , ಅರುಣ್ ಗೋವಿಲ್, ವೈಭವ್ ತತ್ವವಾಡಿ, ಸ್ಕಂದ್ ಠಾಕೂರ್, ಅಶ್ವಿನಿ ಕೌಲ್, ಮತ್ತು ಕಿರಣ್ ಕರ್ಮಾಕರ್, ಇತರರು ನಟಿಸಿದ್ದಾರೆ.
ಏನಿದು ಆರ್ಟಿಕಲ್ 370?
ಆರ್ಟಿಕಲ್ 370 ಭಾರತೀಯ ಸಂವಿಧಾನದಲ್ಲಿ ಅವಿಭಜಿತ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಪ್ರಮುಖ ನಿಬಂಧನೆಯಾಗಿದೆ. 1949 ಜುಲೈ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮಧ್ಯಂತರ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಅವರು ಭಾರತೀಯ ಸಂವಿಧಾನ ಸಭೆಯೊಂದಿಗೆ ಮಾತುಕತೆಗಳನ್ನು ನಡೆಸಿ, ಅಂತಿಮವಾಗಿ 370 ನೇ ವಿಧಿಯನ್ನು ಅಳವಡಿಸಲಾಯಿತು. ಆ ವಿಧಿಯ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಕೆಲವು ಸ್ವಾಯತ್ತತೆಯನ್ನು ನೀಡಲಾಯಿತು. ಉದಾಹರಣೆಗೆ ರಾಜ್ಯವು ತನ್ನದೇ ಆದ ಸಂವಿಧಾನವನ್ನು ಹೊಂದಲು ಅವಕಾಶ ನೀಡಿತು, ಪ್ರತ್ಯೇಕ ಧ್ವಜ ಮತ್ತು ಭಾರತ ಸರ್ಕಾರದ ಸೀಮಿತ ನ್ಯಾಯವ್ಯಾಪ್ತಿಯನ್ನು ಕಲ್ಪಿಸಿತು.
ಇದನ್ನೂ ಓದಿ: Yami Gautam: ʻಯಾಮಿ ಗೌತಮ್ʼ ಪ್ರೆಗ್ನೆಂಟ್; ಪ್ರೆಸ್‌ಮೀಟ್‌ನಲ್ಲಿ ದಿಂಬು ಕೊಟ್ಟ ಪತಿ, ಹಾಡಿ ಹೊಗಳಿದ ಫ್ಯಾನ್ಸ್!
ಭಾರತೀಯ ಸಂವಿಧಾನ ಆರ್ಟಿಕಲ್ 1, ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ರ ಮೂಲಕ ಜಾರಿ ಮಾಡಲು ಅವಕಾಶ ಕಲ್ಪಿಸುತ್ತಿದೆ ಎಂದು ಆರ್ಟಿಕಲ್ 370(1)(ಸಿ)ನಲ್ಲಿ ತಿಳಿಸಲಾಗಿದೆ. ಆರ್ಟಿಕಲ್ 1 ಒಕ್ಕೂಟ ಎಂದು ಹೇಳುತ್ತದೆ. ಅದರರ್ಥ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಬಂಧಿಸುವ ವಿಧಿ 370 ಆಗಿದೆ. ರಾಷ್ಟ್ರಪತಿಗಳ ಆದೇಶದ ಮೂಲಕ 370 ನೇ ವಿಧಿಯನ್ನು ತೆಗೆದುಹಾಕಬಹುದಾದರೂ, ಹೊಸ ಕಾನೂನುಗಳನ್ನು ಮಾಡದ ಹೊರತು ಅದು ರಾಜ್ಯವನ್ನು ಭಾರತದಿಂದ ಸ್ವತಂತ್ರವಾಗಿರುವಂತೆ ನೋಡಿಕೊಳ್ಳುತ್ತದೆ.
370ನೇ ವಿಧಿ ರದ್ದು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ರಾಷ್ಟ್ರಪತಿ ಆದೇಶದ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ 370 ನೇ ವಿಧಿಯನ್ನು 2019 ಆಗಸ್ಟ್ 5ರಂದು ರದ್ದು ಮಾಡಿತು. ಅಲ್ಲದೇ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳನ್ನು ಮಾಡಲಾಯಿತು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ರಾಜ್ಯವು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಶಾಸಕಾಂಗವನ್ನು ಹೊಂದಿದ್ದರೆ, ಲಡಾಖ್ ಶಾಸಕಾಂಗವನ್ನು ಹೊಂದಿರುವುದಿಲ್ಲ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಆರ್ಟಿಕಲ್ 370 ಅನ್ನು ಕೆಲವು ನೈಜ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಯಾಗ್ರಾಹಕ ಸಿದ್ಧಾರ್ಥ್ ವಸಾನಿ ಅವರು ಕಾಶ್ಮೀರದ ಸಾರವನ್ನು ಸೆರೆಹಿಡಿದಿದ್ದಾರೆ. ಪ್ರತಿಯೊಂದು ಫ್ರೇಮ್ ಕಣಿವೆ ಚಿತ್ರಣ ಇದೆ. 2 ಗಂಟೆ 40 ನಿಮಿಷಗಳಲ್ಲಿ, ಆರ್ಟಿಕಲ್ 370 ಸಿನಿಮಾವನ್ನು ಕಟ್ಟುಕೊಟ್ಟಿದ್ದಾರೆ ನಿರ್ದೇಶಕರು.
ಝೂನಿ ಹಕ್ಸರ್ ಪಾತ್ರದಲ್ಲಿ ಯಾಮಿ ಗೌತಮ್ ಅದ್ಭುತ ಅಭಿನಯ ನೀಡಿದ್ದಾರೆ. ಮತ್ತೊಂದೆಡೆ, ಪ್ರಿಯಾ ಮಣಿ, ರಾಜೇಶ್ವರಿ ಸ್ವಾಮಿನಾಥನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಝೂನಿ ಮತ್ತು ರಾಜೇಶ್ವರಿ ಅವರ ಪಾತ್ರಗಳು ಹೈಲೈಟ್ ಆಗಿವೆ. ಉಳಿದ ಪಾತ್ರವರ್ಗದವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ನಿರ್ದೇಶಕ ಆದಿತ್ಯ ಸುಹಾಸ್ ಜಂಭಾಳೆ ಮತ್ತು ಅವರ ತಂಡವು ಅವರ ಪ್ರಯತ್ನಕ್ಕೆ ಚಪ್ಪಾಳೆ ಸಿಗಲೇ ಬೇಕು. ಆದರೆ ದ್ವಿತಿಯಾರ್ಧ ಸಿನಿಮಾ ಲ್ಯಾಗ್ ಆಗಿದೆ ಎನ್ನಲಾಗಿದೆ.