Site icon Vistara News

Bharti Singh: ಬಾಲಿವುಡ್‌ ಖ್ಯಾತ ನಿರೂಪಕಿ ಆಸ್ಪತ್ರೆಗೆ ದಾಖಲು

Bharti Singh admitted to hospital

ಬೆಂಗಳೂರು: ಬಾಲಿವುಡ್‌ನ ಖ್ಯಾತ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್‌ (Bharti Singh) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ದೈನಂದಿನ ವ್ಲಾಗ್‌ಗಳ ಮೂಲಕ ಯೂಟ್ಯೂಬ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಹೊಂಸಿರುವ ಭಾರತಿ ಸಿಂಗ್‌ ಆಗಾಗ ಅಪ್‌ಡೇಟ್‌ (Bharti Singh admitted) ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ತಮ್ಮ ವ್ಲಾಗ್‌ನಲ್ಲಿ ತೀವ್ರವಾದ ಹೊಟ್ಟೆ ನೋವಿನ ಬಳಿಕ ಆಸ್ಪತ್ರೆಗೆ ದಾಖಲಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಇದೀಗ ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅವರ ಫ್ಯಾನ್ಸ್‌ ಚಿಂತೆಗೀಡಾಗಿದ್ದಾರೆ.

ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಟಿ ದಾಖಲಾಗಿದ್ದು ಡ್ರಿಪ್‌ಗಳನ್ನು ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗಲಿಲ್ಲವಂತೆ. ಆದರೆ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ. ಭಾರತಿ ಸಿಂಗ್ ಅವರು ಪಿತ್ತಕೋಶದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವ್ಲಾಗ್‌ನಲ್ಲಿ ಭಾರತಿ ಭಾವುಕರಾಗಿರುವುದನ್ನು ಕಾಣಬಹುದು.

ವ್ಲಾಗ್‌ನಲ್ಲಿ ಭಾರತಿ ಮಾತನಾಡಿ ʻʻನನಗೆ ನೋವು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಪಿತ್ತಕೋಶದಲ್ಲಿ ಕಲ್ಲು ಇದೆ ಎಂದು ಆನಂತರ ಗೊತ್ತಾಯಿತು. ಪರಿಣಾಮವಾಗಿ, ನಾನು ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ವಾಂತಿ ಕೂಡ ಆಗಿತ್ತುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Kareena Kapoor:‌ ರಾಕಿಂಗ್‌ ಸ್ಟಾರ್ ಯಶ್‌ ಸಿನಿಮಾದಿಂದ ಕರೀನಾ ಕಪೂರ್‌ ಔಟ್?

ಭಾರತಿ ಸಿಂಗ್‌ ಅಭಿಮಾನಿಗಳು ಇದೀಗ ಕಮೆಂಟ್‌ ಮೂಲಕ ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ. ಒಬ್ಬರು ʻʻಈ ವಿಡಿಯೊ ನೋಡಿ ನನಗೆ ಅಳು ಬಂತು. ಬೇಗ ಗುಣಮುಖರಾಗಿ. ದುರ್ಗಾ ಮಾತೆ ಆಶೀರ್ವದಿಸುತ್ತಾಳೆ.”ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʻʻನೀವು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಅತ್ತಿದ್ದು ನೋಡಿದೆ. ನನಗೂ ಅಳು ಬಂತುʼʼಎಂದು ಕಮೆಂಟ್‌ ಮಾಡಿದ್ದಾರೆ.

ಭಾರತಿ ಸಿಂಗ್ ಅವರಿದ್ದ ಎತ್ತರಕ್ಕೆ ಹೋಲಿಸಿ ನೋಡಿದರೆ ಅತಿಯಾದ ತೂಕ ಹೊಂದಿದ್ದರು. ಹೀಗಾಗಿ ಅವರ 15 ಕೆಜಿ ತೂಕ ಇಳಿಸಿಕೊಂಡ ನಂತರದಲ್ಲಿ ಗರ್ಭಿಣಿಯಾಗಿದ್ದರು. ಈಗಾಗಲೇ ಸಾಕಷ್ಟು ರಿಯಾಲಿಟಿ ಶೋ, ಪ್ರಶಸ್ತಿ ಸಮಾರಂಭಗಳನ್ನು ಭಾರತಿ ನಿರೂಪಣೆ ಮಾಡಿದ್ದಾರೆ.

Exit mobile version