ಬೆಂಗಳೂರು: ಫ್ಯಾಶನ್ ಪ್ರಭಾವಿ ನ್ಯಾನ್ಸಿ ತ್ಯಾಗಿ ( Nancy Tyagi) ಕಾನ್ ಫಿಲ್ಮ್ ಫೆಸ್ಟಿವಲ್ (Cannes 2024) ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. 1,000 ಮೀಟರ್‌ಗಿಂತಲೂ ಹೆಚ್ಚು ಫ್ಯಾಬ್ರಿಕ್ ಬಟ್ಟೆಯನ್ನು ಬಳಸಿ ತಯಾರಿಸಿದ ಸುಂದರವಾದ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಈ ಡ್ರೆಸ್ ಡಿಸೈನರ್ ಮಾಡಿದ್ದಲ್ಲ.. ಸ್ವತಃ ನಾನೇ ತಯಾರಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಈ ಗೌನ್ ತಯಾರಿಸಲು ನ್ಯಾನ್ಸಿ ತ್ಯಾಗಿ ಅವರಿಗೆ ಬರೋಬ್ಬರಿ ಒಂದು ತಿಂಗಳು ಬೇಕಾಯ್ತಂತೆ.
“77ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು ಖುಷಿಯಾಯ್ತು. 30 ದಿನಗಳು, 1000 ಮೀಟರ್ ಬಟ್ಟೆ ಮತ್ತು 20 ಕೆಜಿಗಿಂತ ಹೆಚ್ಚು ತೂಕವಿರುವ ಈ ಗುಲಾಬಿ ಗೌನ್ ಅನ್ನು ರಚಿಸಲು ನಾನು ನನ್ನ ಹೃದಯ ಮತ್ತು ಆತ್ಮವನ್ನೇ ಅರ್ಪಿಸಿದ್ದೇನೆ. ನನ್ನ ಕನಸು ಈಗ ನನಸಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ. ನಿಮ್ಮ ಬೆಂಬಲವು ನನಗೆ ಸ್ಫೂರ್ತಿ ನೀಡಿದೆʼʼಎಂದು ಹೇಳಿಕೊಂಡಿದ್ದಾರೆ ನ್ಯಾನ್ಸಿ ತ್ಯಾಗಿ.
ಇದನ್ನೂ ಓದಿ: Cannes 2024: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶ್ವೇತ ವರ್ಣದ ಗೌನ್ ಧರಿಸಿ ಮಿಂಚಿದ ಕಿಯಾರ! ಇಲ್ಲಿದೆ ವಿಡಿಯೊ
ನ್ಯಾನ್ಸಿ ತ್ಯಾಗಿ ಶೇರ್ ಮಾಡಿಕೊಂಡ ಬಳಿಕ ಕೇವಲ ಒಂದು ಗಂಟೆಯಲ್ಲಿ 1.8 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ನ್ಯಾನ್ಸಿ ಫ್ಯಾನ್ಸ್ ಈಗ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ,ಮಾತ್ರವಲ್ಲ ಕಮೆಂಟ್ ಮೂಲಕ ʻʻನ್ಯಾನ್ಸಿ, ಇದು ವೈಯಕ್ತಿಕ ಗೆಲುವಿನಂತೆ ಭಾಸವಾಗುತ್ತಿದೆ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಕಠಿಣ ಪರಿಶ್ರಮ ಮತ್ತು ಪ್ರತಿಭೆ ಇದೆ ನಿಮ್ಮಲ್ಲಿʼʼ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ʻʻನನಗೆ ನ್ಯಾನ್ಸಿ ತ್ಯಾಗಿ ಬಗ್ಗೆ ವೈಯಕ್ತಿಕವಾಗಿ ತಿಳಿದಿಲ್ಲ, ಆದರೆ ನಾನು ಅವರನ್ನು ರೆಡ್ ಕಾರ್ಪೆಟ್ ಮೇಲೆ ನೋಡಿ ಸಂತೋಷವಾಯ್ತು. ದೇವರು ನಿಮ್ಮನ್ನು ಆಶೀರ್ವದಿಸಲಿ. ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳುತ್ತೇನೆ. ನೀವು ಬಾಲಿವುಡ್ ಸೆಲೆಬ್ರಿಟಿಗಳಿಗಿಂತ ಉತ್ತಮವಾಗಿ ಕಾಣುತ್ತೀರಿʼʼಎಂದು ಕಮೆಂಟ್ ಮಾಡಿದ್ದಾರೆ.
ದೆಹಲಿ ಮೂಲದ ಫ್ಯಾಷನ್ ಬ್ಲಾಗರ್ ನ್ಯಾನ್ಸಿ ತ್ಯಾಗಿ ಮೊದಲಿನಿಂದಲೂ ತಾನು ರಚಿಸುವ ಬಟ್ಟೆಗಳ ವಿನ್ಯಾಸದ ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.