ಬೆಂಗಳೂರು: ಟಬು, ಕರೀನಾ ಕಪೂರ್ ಮತ್ತು ಕೃತಿ ಸನೂನ್ ನಟನೆಯ ‘ಕ್ರ್ಯೂ’ ಸಿನಿಮಾ (Crew Movie) ಮಾರ್ಚ್ 29ರಂದು ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಸಿನಿಮಾ 100 ಕೋಟಿ ರೂ. ಗಳಿಕೆಯತ್ತ ಮುಖ ಮಾಡುತ್ತಿದೆ. ʻಕ್ರ್ಯೂʻ ಸಿನಿಮಾ ಮೊದಲ ದಿನ ‘ಫೈಟರ್’ ಮತ್ತು ‘ಶೈತಾನ್’ ಸಿನಿಮಾಗಳ ಬಳಿಕ ಮೂರನೇ ಅತಿದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿ ಹೊರಹೊಮ್ಮಿತು. ಈ ಸಿನಿಮಾಗೂ ಮುನ್ನ ಬಿಡುಗಡೆಯಾದ ʻಆಡುಜೀವಿತಂʼ ಹಾಗೂ ʻಗಾಡ್ಜಿಲ್ಲಾ ಎಕ್ಸ್ ಕಾಂಗ್: ದಿ ನ್ಯೂ ಎಂಪೈರ್ ಕಿಂಗ್ʼ ಭರ್ಜರಿ ಪೈಪೋಟಿಯನ್ನು ನೀಡುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಕ್ರ್ಯೂಗೆ ಹೆಚ್ಚಿನ ಸವಾಲು ಬಂದಿತ್ತು.
ʻಕ್ರ್ಯೂʼ ಚಿತ್ರವು ಅತ್ಯಂತ ವಿಶೇಷ ಚಿತ್ರ ಎಂದೆನಿಸಿದ್ದು, ಈ ಚಿತ್ರದಲ್ಲಿ ಮಹಿಳೆಯರದ್ದೇ ಪ್ರಧಾನ ಭೂಮಿಕೆಯಾಗಿದೆ. ಯಾವುದೇ ಪುರುಷ ನಟರು ಪ್ರಧಾನ ಭೂಮಿಕೆಯನ್ನು ನಿರ್ವಹಿಸಿಲ್ಲ. ಚಿತ್ರದ ಐದನೇ ದಿನ ವಿಶ್ವಾದ್ಯಂತ 70.73 ಕೋಟಿ ರೂ. ಕಲೆಕ್ಷನ್ ಮಾಡಿದೆ. ಭಾರತದಲ್ಲೇಚಿತ್ರದ ಐದನೇ ದಿನ 37.20 ಕೋಟಿ ರೂ. ಆಗಿದೆ. ಏ. 2ರ ಮಂಗಳವಾರ ಚಿತ್ರವು 3.50 ಕೋಟಿ ರೂ. ಗಳಿಕೆ ಕಂಡಿದೆ. ಮಂಗಳವಾರ, ಏಪ್ರಿಲ್ 2ರಂದು ಒಟ್ಟಾರೆ ಶೇ. 12.99ರಷ್ಟು ಹಿಂದಿ ಆಕ್ಯುಪೆನ್ಸಿ ಇದೆ.
ಇದನ್ನೂ ಓದಿ: Aadujeevitham Movie: ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡ ‘ಆಡುಜೀವಿತಂ‘!
Ticket Sold on #BookMyShow In Last 24 Hours on 02-04-2024 Tuesday;
— heyopinions (@heyopinions) April 3, 2024
🔹#Aadujeevitham -102K🔥
🔹#TilluSquare -67K
🔹#GodzillaXKong -57K
🔹#Crew -50K
🔹#SwatantryaVeerSavarkar -12K
🔹#MadgaonExpress – 10K
🔹#Shaitaan -9K
🔹#Yuva -7K
🔹#ManjummelBoys -7K
🔹#TheFamilyStar -5K pic.twitter.com/1QX8kkSJZe
ಕಪಿಲ್ ಶರ್ಮಾ ಹಾಗೂ ದಿಲ್ಜಿತ್ ದೋಸಾಂಜ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್ ಮತ್ತು ದಿಗ್ವಿಜಯ್ ಪುರೋಹಿತ್ ಅವರು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಅನಿಲ್ ಕಪೂರ್ ಫಿಲ್ಮ್ಸ್ ಮತ್ತು ಕಮ್ಯುನಿಕೇಷನ್ ನೆಟ್‌ವರ್ಕ್ ಅಡಿಯಲ್ಲಿ ಜಂಟಿಯಾಗಿ ಕ್ರ್ಯೂ ಚಿತ್ರವನ್ನು ನಿರ್ಮಿಸಲಾಗಿದೆ. ಮೊದಲ ಬಾರಿಗೆ ಕರೀನಾ ಕಪೂರ್ ಖಾನ್, ಟಬು ಮತ್ತು ಕೃತಿ ಸನೂನ್ ಪರದೆಯನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಗಗನಸಖಿಯರ ಪಾತ್ರವನ್ನು ನಿರ್ವಹಿಸಿದ್ದಾರೆ.
ಕರೀನಾ ಕೈಯಲ್ಲಿದೆ ಸೌತ್ ಸಿನಿಮಾ ಬಿಗ್ ಪ್ರಾಜೆಕ್ಟ್!
ಯಶ್ ಸಿನಿಮಾ ʼಟಾಕ್ಸಿಕ್ʼನಲ್ಲಿ ಕಥೆಗೆ ಬಹು ಮುಖ್ಯ ತಿರುವು ನೀಡುವ ಪಾತ್ರದಲ್ಲಿ ಕರೀನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಯಶ್ ಬಾಲಿವುಡ್ ಕಲಾವಿದರ ಜತೆ ತೆರೆ ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ʼಕೆಜಿಎಫ್ 2ʼ ಚಿತ್ರದಲ್ಲಿ ಬಾಲಿವುಡ್ ತಾರೆಯರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಕಾಣಿಸಿಕೊಂಡಿದ್ದರು. ಯಶ್ ಜತೆ ಇವರ ಪಾತ್ರಗಳೂ ಮೆಚ್ಚುಗೆ ಪಡೆದಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ʼಟಾಕ್ಸಿಕ್ʼ ಚಿತ್ರವನ್ನು ನಿರ್ಮಿಸಲಿದ್ದಾರೆ.