Site icon Vistara News

Crew Box Office Day 2: ಕಲೆಕ್ಷನ್‌ನಲ್ಲಿ ಮುನ್ನುಗ್ಗುತ್ತಿದೆ ಕರೀನಾ, ಕೃತಿ, ಟಬು ಅಭಿನಯದ ʻಕ್ರ್ಯೂʼ ಸಿನಿಮಾ!

Crew Box Office Day 2 Kareena Kapoor, Tabu, Kriti Sanon in Movie

ಬೆಂಗಳೂರು: ಕರೀನಾ ಕಪೂರ್ ಖಾನ್ (Kareena Kapoor), ಟಬು (Tabu) ಮತ್ತು ಕೃತಿ ಸನೂನ್ (Kriti Sanon) ಅಭಿನಯದ ಬಹುನಿರೀಕ್ಷಿತ ಚಿತ್ರ ʻಕ್ರ್ಯೂʼ (Crew Box Office Day 2) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ರಾಜೇಶ್ ಎ ಕೃಷ್ಣನ್ ಈ ಸಿನಿಮಾ ನಿರ್ದೇಶಕರು. ಈ ಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ದೇಶೀಯ ಮತ್ತು ಜಾಗತಿಕವಾಗಿ ಚಿತ್ರ ಎರಡು ದಿನಗಳಲ್ಲಿ ಸುಮಾರು 19 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.

ಮೊದಲ ದಿನವೇ ಚಿತ್ರ 9.25 ಕೋಟಿ ರೂ. ಗಳಿಕೆ ಕಂಡಿತ್ತು. ಆರಂಭಿಕ ಅಂದಾಜಿನ ಪ್ರಕಾರ ಭಾರತದಲ್ಲಿ 9.6 ಕೋಟಿ ನಿವ್ವಳ ಗಳಿಸಿದೆ. ಇದುವರೆಗೆ ಭಾರತದಲ್ಲಿ ಈ ಚಿತ್ರ 18.85 ಕೋಟಿ ರೂ. ಗಳಿಸಿದೆ. ಎಂದು ವರದಿಯಾಗಿದೆ. ವಿಶ್ವಾದ್ಯಂತ ಚಿತ್ರ 20.07 ಕೋಟಿ ರೂ. ಗಳಿಸಿದೆ. ಈ ಸಿನಿಮಾಗೂ ಮುನ್ನ ಬಿಡುಗಡೆಯಾದ ʻಆಡುಜೀವಿತಂʼ ಹಾಗೂ ʻಗಾಡ್ಜಿಲ್ಲಾ ಎಕ್ಸ್ ಕಾಂಗ್: ದಿ ನ್ಯೂ ಎಂಪೈರ್ ಕಿಂಗ್ʼ ಭರ್ಜರಿ ಪೈಪೋಟಿಯನ್ನು ನೀಡುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಕ್ರ್ಯೂಗೆ ಹೆಚ್ಚಿನ ಸವಾಲು ಬಂದಿದೆ.

ಇದನ್ನೂ ಓದಿ: Aranmanai 4 Trailer: ʻಅರಣ್ಮನೈ 4’ ಟ್ರೈಲರ್‌ ಔಟ್‌: ಹಾರರ್‌ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ!

ʻಕ್ರ್ಯೂʼ ಚಿತ್ರವು ಅತ್ಯಂತ ವಿಶೇಷ ಚಿತ್ರ ಎಂದೆನಿಸಿದ್ದು, ಈ ಚಿತ್ರದಲ್ಲಿ ಮಹಿಳೆಯರದ್ದೇ ಪ್ರಧಾನ ಭೂಮಿಕೆಯಾಗಿದೆ. ಯಾವುದೇ ಪುರುಷ ನಟರು ಪ್ರಧಾನ ಭೂಮಿಕೆಯನ್ನು ನಿರ್ವಹಿಸಿಲ್ಲ. ಕಪಿಲ್ ಶರ್ಮಾ ಹಾಗೂ ದಿಲ್ಜಿತ್ ದೋಸಾಂಜ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್ ಮತ್ತು ದಿಗ್ವಿಜಯ್ ಪುರೋಹಿತ್ ಅವರು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಅನಿಲ್ ಕಪೂರ್ ಫಿಲ್ಮ್ಸ್ ಮತ್ತು ಕಮ್ಯುನಿಕೇಷನ್ ನೆಟ್‌ವರ್ಕ್ ಅಡಿಯಲ್ಲಿ ಜಂಟಿಯಾಗಿ ಕ್ರ್ಯೂಚಿತ್ರವನ್ನು ನಿರ್ಮಿಸಿದ್ದಾರೆ.

ಮೊದಲ ಬಾರಿಗೆ ಕರೀನಾ ಕಪೂರ್ ಖಾನ್, ಟಬು ಮತ್ತು ಕೃತಿ ಸನೂನ್ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರು ಗಗನಸಖಿಯರ ಪಾತ್ರವನ್ನು ನಿರ್ವಹಿಸಿದ್ದಾರೆ.

Exit mobile version