Site icon Vistara News

Crew Vs Aadujeevitham: ‘ಆಡುಜೀವಿತಂ’,ʻಕ್ರ್ಯೂʻ ಸಿನಿಮಾ ನಡುವೆ ಭಾರಿ ಪೈಪೋಟಿ! ಗಳಿಸಿದ್ದೆಷ್ಟು?

Crew Vs Aadujeevitham A huge competition

ಬೆಂಗಳೂರು: ಪೃಥ್ವಿರಾಜ್ ಸುಕುಮಾರನ್ ಅಭಿನಯದ ಆಡುಜೀವಿತಂ‘ (Aadujeevitham Movie) ಚಿತ್ರ ಕಳೆದ ವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ನಾಲ್ಕು ದಿನಗಳಲ್ಲಿ ಭಾರತದಲ್ಲಿ ಒಟ್ಟು 30 ಕೋಟಿ ರೂ. ಗಳಿಕೆ ಕಂಡಿದೆ. ಇದರ (Crew Vs Aadujeevitham) ಜತೆಗೆ ಟಬು, ಕರೀನಾ ಕಪೂರ್ ಮತ್ತು ಕೃತಿ ಸನೂನ್‌ ನಟನೆಯ ‘ಕ್ರ್ಯೂ’ ಸಿನಿಮಾ (Crew Movie) ಕೂಡ ಭಾರಿ ಪೈಪೋಟಿ ನೀಡುತ್ತಿದೆ. ಕೇವಲ ಮೂರು ದಿನಗಳಲ್ಲಿ ‘ಕ್ರ್ಯೂ’ ಚಿತ್ರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 30 ಕೋಟಿ ರೂ. ಗಳಿಕೆ ಕಂಡಿದೆ. ಹೀಗಾಗಿ ‘ಕ್ರ್ಯೂ’ ಹಾಗೂ ‘ಆಡುಜೀವಿತಂ’ ಎರಡೂ ಸಿನಿಮಾಗಳು ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

‘ಆಡುಜೀವಿತಂ’

‘ಆಡುಜೀವಿತಂ’ ನಿನ್ನೆ (ಮಾ.31) ಭಾನುವಾರ ಆದ ಕಾರಣ ಒಳ್ಳೆಯ ಕಲೆಕ್ಷನ್‌ ಮಾಡಿದೆ. ಮಾರ್ಚ್ 31 ರಂದು, ಭಾರತದಲ್ಲಿ 8.50 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಮಲಯಾಳಂ (ಮೂಲ) ಆವೃತ್ತಿಯು ಮಾರ್ಚ್ 31 ರಂದು ಶೇಕಡಾ 79.92ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ.

ವಿಶ್ವಾದ್ಯಂತ ‘ಆಡುಜೀವಿತಂ’ 1,724 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿತ್ತು. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.ಆಡು ಜೀವಿತಂ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್‌ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.

ಇದನ್ನೂ ಓದಿ: Prithviraj Sukumaran: 50 ಕೋಟಿ ರೂ. ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿರುವ ʻಆಡುಜೀವಿತಂʼ!

ʻಕ್ರ್ಯೂʻ ಸಿನಿಮಾ

ʻಕ್ರ್ಯೂʻ ಸಿನಿಮಾ ಮೊದಲ ದಿನ ‘ಫೈಟರ್’ ಮತ್ತು ‘ಶೈತಾನ್’ ಸಿನಿಮಾಗಳ ಬಳಿಕ ಮೂರನೇ ಅತಿದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿ ಹೊರಹೊಮ್ಮಿತು. ಮಾರ್ಚ್ 31ರಂದು, ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 10.25 ಕೋಟಿ ನಿವ್ವಳ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದಲ್ಲಿ ಇದುವರೆಗಿನ ‘ಕ್ರ್ಯೂ’ ಅತ್ಯಧಿಕ ಸಂಗ್ರಹವಾಗಿದೆ.

ಅಭಿಮಾನಿಗಳ ಭಾರೀ ನಿರೀಕ್ಷೆಯ ನಡುವೆ ಮಾರ್ಚ್ 29 ರಂದು ಚಿತ್ರಮಂದಿರಗಳಲ್ಲಿ ‘ಕ್ರ್ಯೂ’ ಬಿಡುಗಡೆಯಾಗಿತ್ತು. ಮೂರು ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಈಗ ಭಾರತದಲ್ಲಿ ಒಟ್ಟು 29.25 ಕೋಟಿ ರೂ. ಆಗಿದೆ. ಭಾರತದಲ್ಲಿ ಮಾರ್ಚ್ 31ರಂದು ‘ಕ್ರ್ಯೂ’ ಸಿನಿಮಾ ಶೇಕಡಾ 29.93ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ.

ಈ ಸಿನಿಮಾಗೂ ಮುನ್ನ ಬಿಡುಗಡೆಯಾದ ʻಆಡುಜೀವಿತಂʼ ಹಾಗೂ ʻಗಾಡ್ಜಿಲ್ಲಾ ಎಕ್ಸ್ ಕಾಂಗ್: ದಿ ನ್ಯೂ ಎಂಪೈರ್ ಕಿಂಗ್ʼ ಭರ್ಜರಿ ಪೈಪೋಟಿಯನ್ನು ನೀಡುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಕ್ರ್ಯೂಗೆ ಹೆಚ್ಚಿನ ಸವಾಲು ಬಂದಿದೆ. ʻಕ್ರ್ಯೂʼ ಚಿತ್ರವು ಅತ್ಯಂತ ವಿಶೇಷ ಚಿತ್ರ ಎಂದೆನಿಸಿದ್ದು, ಈ ಚಿತ್ರದಲ್ಲಿ ಮಹಿಳೆಯರದ್ದೇ ಪ್ರಧಾನ ಭೂಮಿಕೆಯಾಗಿದೆ. ಯಾವುದೇ ಪುರುಷ ನಟರು ಪ್ರಧಾನ ಭೂಮಿಕೆಯನ್ನು ನಿರ್ವಹಿಸಿಲ್ಲ.

ಇದನ್ನೂ ಓದಿ: Anil Kapoor: ಅನಿಲ್‌ ಕಪೂರ್‌ರನ್ನು ಭೇಟಿಯಾದ ಖ್ಯಾತ ನಿರ್ದೇಶಕ, ಹೊಸ ಸಿನಿಮಾ ಘೋಷಣೆ?

ಕಪಿಲ್ ಶರ್ಮಾ ಹಾಗೂ ದಿಲ್ಜಿತ್ ದೋಸಾಂಜ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್ ಮತ್ತು ದಿಗ್ವಿಜಯ್ ಪುರೋಹಿತ್ ಅವರು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಅನಿಲ್ ಕಪೂರ್ ಫಿಲ್ಮ್ಸ್ ಮತ್ತು ಕಮ್ಯುನಿಕೇಷನ್ ನೆಟ್‌ವರ್ಕ್ ಅಡಿಯಲ್ಲಿ ಜಂಟಿಯಾಗಿ ಕ್ರ್ಯೂಚಿತ್ರವನ್ನು ನಿರ್ಮಿಸಿದ್ದಾರೆ. ಮೊದಲ ಬಾರಿಗೆ ಕರೀನಾ ಕಪೂರ್ ಖಾನ್, ಟಬು ಮತ್ತು ಕೃತಿ ಸನೂನ್ ಪರದೆಯನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಗಗನಸಖಿಯರ ಪಾತ್ರವನ್ನು ನಿರ್ವಹಿಸಿದ್ದಾರೆ.

Exit mobile version