ಬೆಂಗಳೂರು: ಫೆಬ್ರವರಿ 19ರಂದು ನಡೆಯಲಿರುವ BAFTA (ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಮತ್ತು ಟೆಲಿವಿಷನ್ ಆರ್ಟ್ಸ್) ಪ್ರಶಸ್ತಿ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ (Deepika Padukone) ನಿರೂಪಣೆ ಮಾಡಲಿದ್ದಾರೆ. ಫುಟ್ಬಾಲ್ ಆಟಗಾರ ಡೇವಿಡ್ ಬೇಕಮ್ (David Beckham), ನಟ ಕೇಟ್ ಬ್ಲಾಂಚೆಟ್ (Cate Blanchett) ಮತ್ತು ಗಾಯಕ ದುವಾ ಲಿಪಾ (Dua Lipa) ಜತೆ ದೀಪಿಕಾ ಪಡುಕೋಣೆ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.
ವರದಿಗಳ ಪ್ರಕಾರ ಈ ತಾರೆಗಳು ತಲಾ ಒಂದು ಪ್ರಶಸ್ತಿಯನ್ನು ಸಹ ವಿಜೇತರಿಗೆ ನೀಡಲಿದ್ದಾರೆ. ಆದರೆ, ಯಾವ ಕೆಟಗರಿ ಪ್ರಶಸ್ತಿಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈ ಸಮಾರಂಭದಲ್ಲಿ ಹನ್ನಾ ವಾಡಿಂಗ್ಹ್ಯಾಮ್ ಅವರ ವಿಶೇಷ ಕವರ್ ಸಾಂಗ್ ಮತ್ತು ಸೋಫಿ ಬೆಕ್ಸ್ಟರ್ ಅವರ ಪ್ರದರ್ಶನ ಕೂಡ ಒಳಗೊಂಡಿರುತ್ತದೆ. ಹನ್ನಾ ವಾಡಿಂಗ್ಹ್ಯಾಮ್ (Hannah Waddingham) ಅವರು “ಮರ್ಡರ್ ಆನ್ ದಿ ಡ್ಯಾನ್ಸ್‌ಫ್ಲೋರ್” (Murder on The Dancefloor) ಹಾಡಲಿದ್ದಾರೆ. ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ಮಾಜಿ ವಿಜೇತರಾದ ಎಮ್ಮಾ ಮ್ಯಾಕಿ ಮತ್ತು ಜ್ಯಾಕ್ ಓ’ಕಾನ್ನೆಲ್ ಅವರು ನೀಡಲಿದ್ದಾರೆ. ದೀಪಿಕಾ ಈ ಹಿಂದೆ 2023ರ ಆಸ್ಕರ್ ಪ್ರಶಸ್ತಿಯನ್ನು ನೀಡಿದ್ದರು. ಜತೆಗೆ ನಿರೂಪಣೆಯನ್ನು ಮಾಡಿದ್ದರು. BAFTA ಫಿಲ್ಮ್ ಅವಾರ್ಡ್ಸ್ ಫೆಬ್ರವರಿ 19ರಂದು ಲಂಡನ್‌ನ ರಾಯಲ್ ಫೆಸ್ಟಿವ್ ಹಾಲ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ: Deepika Padukone: ತಿರುಮಲ ವೆಂಕಟೇಶ್ವರನ ದರ್ಶನ ಪಡೆದ ದೀಪಿಕಾ ಪಡುಕೋಣೆ
ಬಾಲಿವುಡ್‌ನ ಟಾಪ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಈ ವರ್ಷ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ವರ್ಷಾರಂಭದಲ್ಲಿ ತೆರೆಕಂಡ ಪಠಾಣ್ (Pathaan) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಶಾರುಖ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಈ ಸಿನಿಮಾ 1 ಸಾವಿರ ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಬಳಿಕ ತೆರೆಕಂಡ ಜವಾನ್ (Jawan) ಚಿತ್ರದಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲೂ ಶಾರುಖ್ ಜತೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರವೂ ಸೂಪರ್ ಹಿಟ್ ಆಗಿದೆ. ಸಣ್ಣ ಪಾತ್ರವಾದರೂ ದೀಪಿಕಾ ಗಮನ ಸೆಳೆದಿದ್ದರು. ಇದೀಗ ‘ಫೈಟರ್’(Fighter) ಸಿನಿಮಾ ಕೂಡ ರಿಲೀಸ್ ಆಗಿದೆ. ಈ ಸಿನಿಮಾ ಕೂಡ ಭಾರಿ ಗಳಿಕೆ ಕಂಡಿದೆ.
ನಟ ಹೃತಿಕ್ ರೋಷನ್ ಅವರ ‘ಫೈಟರ್’ ನಲ್ಲಿ ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ ಎಕೆಎ ಮಿನ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ್ ರೋಷನ್, ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ತಲತ್ ಅಜೀಜ್ ಮತ್ತು ಸಂಜೀದಾ ಶೇಖ್ ತಾರಾಗಣದ ಭಾಗವಾಗಿದೆ.