ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನ ಆಗುತ್ತಿದೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಮತ ಚಲಾಯಿಸಿದ್ದಾರೆ. ಇದೀಗ ದೀಪಿಕಾ ಅವರ ಬೇಬಿ ಬಂಪ್ ಫೋಟೊ ಹಾಗೂ ವಿಡಿಯೊಗಳು ವೈರಲ್ ಆಗುತ್ತಿವೆ. ಈ ಮೂಲಕ ಜೋಡಿ ಬಾಡಿಗೆ ತಾಯ್ತನ ಆಶ್ರಯಿಸಿದ್ದಾರೆ ಎಂಬ ವದಂತಿಗೂ ತೆರೆ ಬಿದ್ದಿದೆ. ಲೂಸ್ ಶರ್ಟ್ ಧರಿಸಿದ್ದರೂ ಐದು ತಿಂಗಳ ಗರ್ಭಿಣಿಯಾಗಿರುವ ದೀಪಿಕಾಳ ಬೇಬಿ ಬಂಪ್ ಎದ್ದು ಕಾಣಿಸುತ್ತಿತ್ತು. ನೆಟ್ಟಿಗರು ದೀಪಿಕಾ ಹೊಟ್ಟೆಯಲ್ಲಿ ಗಂಡು ಮಗುವೇ ಇದೆ, ಈ ಜೋಡಿಗೆ ಗಂಡು ಮಗುವೇ ಆಗುವುದು ಎಂದು ಭವಿಷ್ಯ ನುಡಿಯುತ್ತಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ದೀಪಿಕಾ ʻʻಬಿಳಿ ಶರ್ಟ್ ಮತ್ತು ಡೆನಿಮ್‌ನಲ್ಲಿ ಕಾಣಿಸಿಕೊಂಡರು. ರಣವೀರ್ ಹೆಂಡತಿಗೆ ಕಾರಿನಲ್ಲಿ ಕುಳಿತುಕೊಳ್ಳಲು ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ದೀಪಿಕಾ ಮತ್ತು ರಣವೀರ್ ಮತಗಟ್ಟೆಗೆ ತೆರಳುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದರು. ರಣವೀರ್ ಅವರು ದೀಪಿಕಾ ಅವರನ್ನು ಬೂತ್‌ಗೆ ಕರೆದೊಯ್ಯುವಾಗ ಕೈ ಹಿಡಿದು ಕರೆದುಕೊಂಡು ಹೋದರು. ದೀಪಿಕಾ ಇದೇ ಮೊದಲ ಬಾರಿಗೆ ತನ್ನ ಬೇಬಿ ಬಂಪ್ ತೋರಿಸಿದ್ದಾರೆ.
ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼ ಎನ್ನಲಾಗಿತ್ತು.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.
ಇದನ್ನೂ ಓದಿ: Deepika Padukone: ಕ್ಯಾಮೆರಾ ತಳ್ಳಿ ಮುಂದೆ ನಡೆದ ದೀಪಿಕಾ! ನಾಚಿಕೆಗೇಡಿನ ವರ್ತನೆ ಅಂದ್ರು ನೆಟ್ಟಿಗರು!
ಮಗುವಿನ ನಿರೀಕ್ಷೆ ಹೊಸ್ತಿಲಲ್ಲೇ ಮದುವೆ ಫೋಟೊಗಳು ಡಿಲಿಟ್!
ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಸಂದರ್ಭದಲ್ಲೇ ತಮ್ಮ ಮದುವೆ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲಿಟ್ ಮಾಡಿದ್ದರು. ಎಲ್ಲವೂ ಸರಿಯಿರುವಾಗಲೇ ರಣ್‌ವೀರ್ ಸಿಂಗ್ ಯಾಕೆ ಈ ನಿರ್ಧಾರ ತೆಗೆದುಕೊಂಡರು? ದಿಢೀರನೇ ಫೋಟೊಗಳನ್ನು ತೆಗೆದು ಹಾಕಿದ್ದು ಯಾಕೆ? ಈ ಎಲ್ಲಾ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿತ್ತು. ಕಳೆದ ವರ್ಷ ಕರಣ್ ಜೋಹರ್ ಶೋನಲ್ಲಿ ಮದುವೆ ವಿಡಿಯೋ ರಿಲೀಸ್ ಮಾಡಿದ್ದರು. ಇದರಿಂದ ರಣವೀರ್ ಸಿಂಗ್ ಹಾಗೂ ದೀಪಿಕಾ ಮಧ್ಯೆ ಏನಾದರೂ ಗಂಭೀರ ಜಗಳ ಆಯಿತೇ ಎನ್ನುವ ಅನುಮಾನ ಮೂಡಿತ್ತು.