ಬೆಂಗಳೂರು: ತಾಯಿಯಾಗಲಿರುವ ದೀಪಿಕಾ ಪಡುಕೋಣೆ ( Deepika Padukone) ಸದ್ಯ `ಸಿಂಗಂ ಅಗೇನ್’ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಸೆಟ್‌ನಲ್ಲಿದ್ದಾಗ, ದೀಪಿಕಾ ತನ್ನೊಂದಿಗೆ ಕೆಲಸ ಮಾಡುವ ಜ್ಯೂನಿಯರ್ ಕಲಾವಿದರೊಂದಿಗೆ ಪೋಸ್ ನೀಡಿದ್ದಾರೆ. ಫೋಟೊದಲ್ಲಿ ದೀಪಿಕಾ ಪಡುಕೋಣೆ ಅವರ ಮುಖ ಗ್ಲೋ ಆಗಿ ಕಂಡಿದೆ. ಇದೀಗ ದೀಪಿಕಾ ಫ್ಯಾನ್ಸ್ ಮೆಚ್ಚಿನ ನಟಿಯನ್ನು ಕಂಡು ಸಂತಸ ಹೊರಹಾಕುತ್ತಿದ್ದಾರೆ.
ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜ್ಯೂನಿಯರ್ ಕಲಾವಿದರು ನಟಿಗಾಗಿ ಮಾಡಿದ ಸ್ಕೆಚ್ ಮತ್ತು ಹೂಗುಚ್ಛವನ್ನು ನೀಡಿದ್ದಾರೆ. ಫೋಟೊ ಶೇರ್ ಮಾಡಿ ʻʻನಮ್ಮ ನಾಯಕಿ ಲೇಡಿ ಸಿಂಗಮ್”ಗೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಜ್ಯೂನಿಯರ್ ಆರ್ಟಿಸ್ಟ್‌ಗಳು ಪೋಟೊ ಶೇರ್ ಮಾಡಿ ʻದೀಪಿಕಾ ಪಡುಕೋಣೆ ದಿ ಓನ್ಲಿ ಲೇಡಿ ಸಿಂಗಮ್ . ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಗಿದೆ ಮೇಡಮ್. ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದು. ನಿಮ್ಮೊಂದಿಗೆ ಕೆಲಸ ಮಾಡಿದ್ದು ನಮ್ಮ ಅದೃಷ್ಟ. ಭವಿಷ್ಯದಲ್ಲಿ ನಾವು ಇನ್ನೂ ಹಲವು ಬಾರಿ ನಿಮ್ಮನ್ನು ಭೇಟಿಯಾಗಬೇಕೆಂದು ಪ್ರಾರ್ಥಿಸುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Deepika Padukone: ತಾಯ್ತತನದ ಜೊತೆಗೆ ವೃತ್ತಿ ಜೀವನ ನಿಭಾಯಿಸುತ್ತಿರುವ ದೀಪಿಕಾ ಪಡುಕೋಣೆ
ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.