ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ನಟಿ ದೀಪಿಕಾ ಪಡುಕೋಣೆ (Deepika Padukone) ಕಲ್ಕಿ ಸಿನಿಮಾ ಪ್ರಮೋಷನ್ ವೇಳೆ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಂಡಿದ್ದರು. ಇದೀಗ ಗರ್ಭಿಣಿ ದೀಪಿಕಾ ಸೀರೆಯಲ್ಲಿ ಅತ್ಯಂತ ಕ್ಯೂಟ್ ಆಗಿ ಕಂಡಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮಂರ್ಚಂಟ್ ಸಂಗೀತ ಕಾರ್ಯಕ್ರಮದಲ್ಲಿ ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ನೇರಳೆ ಬಣ್ಣದ ಸೀರೆಯಲ್ಲಿ ತನ್ನ ಬೇಬಿ ಬಂಪ್ ಜತೆಗೆ ಪೋಸ್ ಕೂಡ ಕೊಟ್ಟಿದ್ದಾರೆ. ಚಿನ್ನದ ಆಭರಣಗಳನ್ನು ಧರಿಸಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಕೆಲವು ದಿನಗಳ ಹಿಂದೆ ಮೂರು ದಿನಗಳ ಅದ್ದೂರಿ ಮದುವೆ ಪೂರ್ವ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.
ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಮಾಧುರಿ ದೀಕ್ಷಿತ್, ಖುಷಿ ಕಪೂರ್, ಅನನ್ಯಾ ಪಾಂಡೆ, ಸಲ್ಮಾನ್ ಖಾನ್, ಎಂಎಸ್ ಧೋನಿ, ಆದಿತ್ಯ ರಾಯ್ ಕಪೂರ್, ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ಅನೇಕ ಖ್ಯಾತನಾಮರು ಭಾಗವಹಿಸಿದ್ದರು.
ಇದನ್ನೂ ಓದಿ: Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?
ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ. ದುವೆ ಆದ ಬಳಿಕವೂ ಅದೇ ಬೇಡಿಕೆ ಉಳಿಸಿಕೊಂಡಿರುವ ಅವರು ಗ್ಲಾಮರ್ ಪಾತ್ರದಲ್ಲಿಯೂ, ಡಿಗ್ಲಾಮರ್ ಆಗಿ ಸಹಜಾಭಿನದಲ್ಲಿಯೂ ಗಮನ ಸೆಳೆಯುತ್ತಾರೆ. ಇದೇ ಕಾರಣಕ್ಕೆ ಇಂದಿಗೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅವರು ತಾತ್ಕಾಲಿಕವಾಗಿ ಸಿನಿಮಾ ಚಟುವಟಿಕೆಯಿಂದ ದೂರ ಸರಿಯಲಿದ್ದಾರೆ ಎನ್ನಲಾಗಿದೆ.