ಬೆಂಗಳೂರು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ( Deepika Padukone) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೆಗ್ನೆನ್ಸಿ ಅನೌನ್ಸ್ ಆದ ಬಳಿಕ ನಟಿ ಆಗಾಗ ಸಾವರ್ಜನಿಕವಾಗಿ ಕಾಣಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ ತಮ್ಮ ಪ್ರೆಗ್ನೆನ್ಸಿ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ಎಂಬುದೇ ಅವರ ಫ್ಯಾನ್ಸ್‌ಗಿದ್ದ ಕುತೂಹಲ. ಇದೀಗ ನಟಿ ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ. ಕಸೂತಿ ಮಾಡುವ ಫೋಟೊ ಹಂಚಿಕೊಂಡು ಹೊಸ ಹವ್ಯಾಸದ ಬಗ್ಗೆ ಹೇಳಿಕೊಂಡಿದ್ದಾರೆ ದೀಪಿಕಾ.
ಕಸೂತಿ ಮಾಡಿರುವ ಫೋಟೊವನ್ನು ನಟಿ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. `ಇನ್ನಷ್ಟು ಪೂರ್ಣಗೊಳಿಸಬೇಕಿದೆ. ಪೂರ್ಣವಾಗಿ ಮುಗಿದ ಮೇಲೆ ಫೋಟೊವನ್ನು ಶೀಘ್ರದಲ್ಲೇ ಹಂಚಿಕೊಳ್ಳುವೆʼʼ ಎಂದು ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.
ನಟಿಯ ಈ ಕಸೂತಿ ಕೆಲಸದ ಬಗ್ಗೆ ನೆಟ್ಟಿಗರು ಹೊಗಳುತ್ತಿದ್ದಾರೆ. ಒಬ್ಬರು ʻʻಬಾಲ್ಯದ ನೆನಪುʼʼಎಂದು ಕಮೆಂಟ್ ಮಾಡಿದ್ದಾರೆ. “ಬೇಸಿಗೆ ರಜೆಯ ಸಮಯದಲ್ಲಿ ನಾವು ಸೆಲ್ ಫೋನ್‌ಗಳಿಗೆ ಅಡಿಕ್ಟ್ ಆಗದೇ ಇದ್ದಾಗ, ಆಗ ಇದು ನಮ್ಮ ನೆಚ್ಚಿನ ಚಟುವಟಿಕೆಯಾಗಿತ್ತು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಬಗ್ಗೆ ʻʻನಟಿಯ ಈ ಚಟುವಟಿಕೆ ತುಂಬ ಒಳ್ಳೆಯದು ಮತ್ತು ನಿಮ್ಮ ಮಗುವಿಗೆ ಒಳ್ಳೆಯದು.ಕಾಳಜಿ ವಹಿಸಿʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Deepika Padukone: ಹೆಚ್ಚೆಚ್ಚು ಕೆಲಸ ಮಾಡಿ, ಹೋಲಿಕೆ ಕಡಿಮೆ ಮಾಡಿರುವೆ ಅಂದಿದ್ದೇಕೆ ದೀಪಿಕಾ?
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.
ಈ ಮೊದಲೇ ವದಂತಿಗಳು ಹಬ್ಬಿದ್ದವು
ದಿ ವೈಟ್ ಲೋಟಸ್ ಸೀಸನ್ 3 ರಿಂದ ದೀಪಿಕಾ ಹೊರಗುಳಿದಿದ್ದಾರೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ದೀಪಿಕಾ ಗರ್ಭಿಣಿಯಾಗಿರುವ ಸುದ್ದಿ ಹೊರಬಂದಿತ್ತು. ಎಚ್‌ಒಬಿಯ ಅತ್ಯಂತ ಜನಪ್ರಿಯ ಶೋ ಆಗಿರುವ ದಿ ವೈಟ್ ಲೋಟಸ್ ಸೀಸನ್ 3ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ವಾರಾಂತ್ಯದಲ್ಲಿ ದೀಪಿಕಾ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿತ್ತು.
ದೀಪಿಕಾ ಗರ್ಭಿಣಿಯಾಗಿದ್ದಾರೆಂಬ ವದಂತಿಗಳಿಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ‘ಫೈಟರ್’ ಚಿತ್ರದ ಪ್ರಚಾರದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಾಗ, ಅಭಿಮಾನಿಗಳು ಹೊಟ್ಟೆ ಉಬ್ಬಿರುವುದನ್ನು ಅನ್ನು ಗಮನಿಸಿದ್ದರು. ಅಲ್ಲದೇ, ಕಮೆಂಟ್ ವಿಭಾಗದಲ್ಲಿ ಗರ್ಭಿಣಿಯೇ ಎಂಬ ಪ್ರಶ್ನೆಗಳು ತುಂಬಿದ್ದವು.
ಈ ವರ್ಷದ ಆರಂಭದಲ್ಲಿ ದೀಪಿಕಾ ರಣವೀರ್ ಜತೆ ಮಕ್ಕಳನ್ನು ಹೊಂದಲು ಬಯಸುವುದಾಗಿ ಹೇಳಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ್ದ ದೀಪಿಕಾ, “ಖಂಡಿತವಾಗಿಯೂ. ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದರು.