ಬೆಂಗಳೂರು: ಫೆಬ್ರವರಿ 29ರಂದು ದೀಪಿಕಾ (Deepika Padukone) ತಾವು ಪ್ರೆಗ್ನೆಂಟ್ ಎನ್ನುವ ವಿಚಾರ ರಿವೀಲ್ ಮಾಡಿದ್ದಾರೆ. ಇದಾದ ನಂತರ ಮೊದಲ ಬಾರಿಗೆ ಜೋಡಿ ವೇದಿಕೆ ಮೇಲೆ ಪ್ರದರ್ಶನ ನೀಡಿದೆ. ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ದಂಪತಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ʻಗಲ್ಲಾ ಗುಡಿಯನ್ʼ (Galla Goodiyan) ಸಾಂಗ್‌ಗೆ ನೃತ್ಯ ಮಾಡಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ರಣವೀರ್ ನೀಲಿ ಬಣ್ಣದ ಶೆರ್ವಾನಿಯನ್ನು ಧರಿಸಿದ್ದರೆ, ದೀಪಿಕಾ ಗೋಲ್ಡ್‌ನ್ ಮಿಶ್ರಿತ ಲೆಹೆಂಗಾವನ್ನು ಚಿನ್ನದ ಆಭರಣಗಳೊಂದಿಗೆ ಧರಿಸಿದ್ದರು. ಈ ಜೋಡಿ ಮಾತ್ರವಲ್ಲದೇ ಹಲವು ಬಾಲಿವುಡ್ ಸೆಲೆಬ್ರಿಟಗಳು ವೇದಿಕೆಯಲ್ಲಿ ರಂಜಿಸಿದರು. ಶಾರುಖ್ ಅವರು 2023ರ ಹಿಟ್ ಚಿತ್ರ ʻಪಠಾಣ್ʼ ಸಿನಿಮಾದ ʻಜೂಮ್ ಜೋ ಪಠಾಣ್ʼ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿತ್ತು. ಶಾರುಖ್ ಜತೆ ಅವರ ಪುತ್ರಿ ಸುಹಾನಾ ಖಾನ್, ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ, ಅನನ್ಯಾ ಪಾಂಡೆ ಮತ್ತು ಶನಯಾ ಕಪೂರ್ ಕೂಡ ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ: Deepika Padukone: ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ-ರಣವೀರ್: ಫ್ಯಾನ್ಸ್‌ಗೆ ಖುಷಿಯೋ ಖುಷಿ!
ದೀಪಿಕಾ ಪಡುಕೋಣೆ ಈಗ 2 ತಿಂಗಳ ಗರ್ಭಿಣಿ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಫೆ. 29ರ ಗುರುವಾರ ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜೋಡಿ ಪರಸ್ಪರ ಪ್ರೀತಿ ಮಾಡಿ ಮದುವೆಯಾಗಿತ್ತು. ಯಾವುದೇ ಕ್ಯಾಪ್ಷನ್ ಇಲ್ಲ. ಮಗುವಿಗೆ ಸಂಬಂಧಿಸಿದ ಬಟ್ಟೆ, ಶೂ, ಮುಂತಾದ ವಸ್ತುಗಳಿರುವ ಚಿತ್ರವನ್ನು ಅವರು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.