Site icon Vistara News

Dharmendra Changes Name: 64 ವರ್ಷಗಳ ಬಳಿಕ ಹೆಸರನ್ನು ಬದಲಿಸಿದ್ರಾ ನಟ ಧರ್ಮೇಂದ್ರ?

Dharmendra Changes Name 64 Years After His Bollywood

ಬೆಂಗಳೂರು: 1960ರಲ್ಲಿ `ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಧರ್ಮೇಂದ್ರ ಅವರು ಹೆಸರು ಬದಲಿಸಿಕೊಂಡಿದ್ದಾರೆ. 60ರ ದಶಕದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಅವರು ಈಗಲೂ ನಟನೆ ಮುಂದವರಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ಅವರು ಈಗ ಗಮನ ಸೆಳೆಯುತ್ತಿದ್ದಾರೆ. ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ನಟನೆಯ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ರಿಲೀಸ್ ಆಗಿದೆ. ತಾತನ ಪಾತ್ರದಲ್ಲಿ ನಟಿಸಿದ್ದಾರೆ ಧರ್ಮೇಂದ್ರ. ಆದರೀಗ ನಟನ ಹೆಸರು ಈಗ ಸಿನಿಮಾ ಪ್ರದರ್ಶನದ ವೇಳೆ ಧರ್ಮೇಂದ್ರ ಸಿಂಗ್ ಡಿಯೋಲ್ ( Dharmendra Singh Deol) ಎಂದು ಹೆಸರು ತೋರಿಸಲಾಗಿದೆ.

ಧರ್ಮೇಂದ್ರ ಅವರು ಪಂಜಾಬ್‌ನಲ್ಲಿ 1935ರ ಡಿಸೆಂಬರ್ 8ರಂದು ಜನಿಸಿದರು. ಧರ್ಮೇಂದ್ರ ಅವರ ತಂದೆ ಮುಖ್ಯೋಪಾಧ್ಯಾಯರಾಗಿದ್ದರು. ಅವರ ತಾಯಿ ಗೃಹಿಣಿಯಾಗಿದ್ದರು. ನಟನೆ ಮಾಡಬೇಕು ಎಂದು ಧರ್ಮೇಂದ್ರ ಅವರು ಮುಂಬೈಗೆ ಬಂದರು. ಅವರು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಮಧ್ಯದ ಹೆಸರು ಹಾಗೂ ಸರ್​ನೇಮ್​ನ ತೆಗೆದು ಹಾಕಿದರು. ಅವರ ಮಕ್ಕಳಾದ ಸನ್ನಿ ಹಾಗೂ ಬಾಬಿ ‘ಡಿಯೋಲ್​’ ಸರ್​ನೇಮ್​ನ ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡಿದ್ದಾರೆ.

ಕಳೆದ ವರ್ಷ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸಿದ್ದರು.ಧರ್ಮೇಂದ್ರ ಈಗ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರೊಂದಿಗೆ ಇಕ್ಕಿಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಸನ್ನಿ ಡಿಯೋಲ್ ಜತೆ ಮತ್ತೆ ಒಂದಾಗಲಿದ್ದಾರೆ.

ಇದನ್ನೂ ಓದಿ: Dharmendra Singh: ಮೊಮ್ಮಗನ ಸಂಗೀತ ಕಾರ್ಯಕ್ರಮದಲ್ಲಿ ಮಸ್ತ್‌ ಡ್ಯಾನ್ಸ್‌ ಮಾಡಿದ ಧರ್ಮೇಂದ್ರ ಸಿಂಗ್‌, ವಿಡಿಯೊ ವೈರಲ್

ರೊಮ್ಯಾನ್ಸ್‌ಗೆ ಯಾವುದೇ ವಯಸ್ಸಿಲ್ಲ!

ಇತ್ತೀಚಿನ ಸಂದರ್ಶನವೊಂದರಲ್ಲಿ, ಧರ್ಮೇಂದ್ರ ಅವರು ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾದಲ್ಲಿಯ ತಮ್ಮ ಲಿಪ್‌ಲಾಕ್‌ ದೃಶ್ಯದ ಕುರಿತು ಮಾತನಾಡಿದ್ದರು. “ಶಬಾನಾ ಮತ್ತು ನಾನು ಲಿಪ್‌ ಲಾಕ್‌ ದೃಶ್ಯದಿಂದ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದ್ದೇವೆ ಎಂದು ನಾನು ಕೇಳಲ್ಪಟ್ಟೆ. ಪ್ರೇಕ್ಷಕರು ಈ ಬಗ್ಗೆ ಹೊಗಳಿದ್ದಾರೆ. ಆದರೆ ನಾನು ಜನರಿಂದ ಇಷ್ಟರ ಮಟ್ಟಿಗೆ ಮೆಚ್ಚುಗೆಯನ್ನು ನಿರೀಕ್ಷಿಸಿರಲಿಲ್ಲ. ನಾನು ಕೊನೆಯ ಬಾರಿ ನಫೀಸಾ ಅಲಿಯೊಂದಿಗೆ ʻಲೈಫ್ ಇನ್ ಎ ಮೆಟ್ರೋʼದಲ್ಲಿ ಲಿಪ್‌ ಲಾಕ್‌ ದೃಶ್ಯವನ್ನು ಮಾಡಿದೆ. ಅದಕ್ಕೂ ಕೂಡ ಇದೇ ರೀತಿ ಜನರಿಂದ ಪ್ರಶಂಸೆಗೆ ಒಳಪಟ್ಟಿತ್ತುʼʼಎಂದು ಹೇಳಿದ್ದರು.

ನಟ ಮಾತು ಮುಂದುವರಿಸಿ “ಕರಣ್ ನಮಗೆ ದೃಶ್ಯವನ್ನು ವಿವರಿಸಿದಾಗ, ನಾನು ಉತ್ಸುಕನಾಗಲಿಲ್ಲ. ನಾವು ಆ ಘಟನೆಯನ್ನು ಅರ್ಥಮಾಡಿಕೊಂಡೆವು. ಸಿನಿಮಾಗೆ ಅಗತ್ಯವಿದೆಯೇ ಎಂಬುದು ನಾನು ಯೋಚಿಸಿದೆ. ಬಲವಂತವಾಗಿ ಈ ದೃಶ್ಯವನ್ನು ನಿರ್ದೇಶಕರು ಮಾಡಿಸಿಲ್ಲ. ಹೀಗಾಗಿ ಈ ದೃಶ್ಯವನ್ನು ಮಾಡಲು ಒಪ್ಪಿಕೊಂಡೆ. ಅಲ್ಲದೆ, ರೊಮ್ಯಾನ್ಸ್‌ಗೆ ಯಾವುದೇ ವಯಸ್ಸು ಇಲ್ಲ ಎಂದು ನಾನು ನಂಬುತ್ತೇನೆ. ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ವಯಸ್ಸಿನ ಹೊರತಾಗಿಯೂ ಇಬ್ಬರು ವ್ಯಕ್ತಿಗಳು ಚುಂಬಿಸುವ ಮೂಲಕ ಪರಸ್ಪರ ಪ್ರೀತಿಯನ್ನು ತೋರಿಸುತ್ತಾರೆ. ಶಬಾನಾ ಮತ್ತು ನಾನು ಅದನ್ನು ಮಾಡುವಾಗ ಯಾವುದೇ ರೀತಿಯ ಎಡವಟ್ಟನ್ನು ಅನುಭವಿಸಲಿಲ್ಲ ಏಕೆಂದರೆ ಅದು ತುಂಬಾ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆʼʼಎಂದಿದ್ದರು.

Exit mobile version