ಬೆಂಗಳೂರು: ಇಮ್ತಿಯಾಜ್ ಅಲಿ ನಿರ್ದೇಶನದ ʻಅಮರ್ ಸಿಂಗ್ ಚಮ್ಕಿಲಾʼ ( Amar Singh Chamkila) ನೆಟ್ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ನಟಿ ಪರಿಣಿತಿ ಚೋಪ್ರಾ (parineeti chopra) ಅವರು ಈ ಸಿನಿಮಾದಲ್ಲಿ ಅಮರ್ ಜೋತ್ ಪಾತ್ರ ಮಾಡಿದ್ದಾರೆ. ದಿಲ್ಜಿತ್ ದೋಸಾಂಜ್ (Diljit Dosanjh) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ತನ್ನ ಬಾಲ್ಯದ ಕಹಿ ಘಟನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. 1984ರಲ್ಲಿ ದೋಸಾಂಜ್ ಕಲಾನ್ (ಪಂಜಾಬ್) ಗ್ರಾಮದಲ್ಲಿ ಜನಿಸಿದರು. ಈಗ ಅವರಿಗೆ 40 ವರ್ಷ. ಇತ್ತೀಚೆಗೆ ದಿಲ್ಜಿತ್ ದೋಸಾಂಜ್ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ, ʻʻಕೇವಲ 11 ವರ್ಷ ಇದ್ದಾಗಲೇ ನನ್ನನ್ನು ಮನೆಯಿಂದ ಓಡಿಸಿಬಿಟ್ಟರು. ಪೋಷಕರು ನನ್ನ ಮಾಮಾಜಿ ಜತೆ ಕಳುಹಿಸಿ ಬಿಟ್ಟರುʼʼಎಂದು ಭಾವುಕರಾದರು.
ದಿಲ್ಜಿತ್ ದೋಸಾಂಜ್ ಗಾಯಕ ಹಾಗೂ ನಟನೂ ಹೌದು. ಇಮ್ತಿಯಾಜ್ ಅಲಿ ನಿರ್ದೇಶನದ ಅಮರ್ ಸಿಂಗ್ ಚಮ್ಕಿಲಾ ನೆಟ್ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.ಈ ಚಿತ್ರವು 80ರ ದಶಕದ ಜನಪ್ರಿಯ ಪಂಜಾಬಿ ಗಾಯಕ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನದ ಕುರಿತು ತಿಳಿಸುತ್ತದೆ. ಅವರು 1988ರಲ್ಲಿ ಅವರ ಗಾಯಕ-ಪತ್ನಿ ಅಮರಜೋತ್ ಅವರೊಂದಿಗೆ ಗುಂಡಿಕ್ಕಿ ಕೊಲ್ಲಲ್ಪಟ್ಟರು. ಏಪ್ರಿಲ್ 12 ರಿಂದ ನೆಟ್ ಫ್ಲಿಕ್ಸ್‌ನಲ್ಲಿ ಅಮರ್ ಸಿಂಗ್ ಚಮ್ಕಿಲಾ ಸ್ಟ್ರೀಮಿಂಗ್ ಶುರುವಾಗಲಿದೆ. ಇದೀಗ ದಿಲ್ಜಿತ್ ದೋಸಾಂಜ್ ತಮ್ಮ ಜೀವನದ ಕಹಿ ಘಟನೆಗಳನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡರು.
ಇದನ್ನೂ ಓದಿ: Parineeti Chopra: ಪರಿಣಿತಿ ಚೋಪ್ರಾ ಗರ್ಭಿಣಿ?; ಊಹಾಪೋಹಕ್ಕೆ ನಟಿಯ ಪ್ರತಿಕ್ರಿಯೆ ಇದು
ದಿಲ್ಜಿತ್ ದೋಸಾಂಜ್ ಮಾತನಾಡಿ ʻʻನಾನು ನನ್ನ ಮನೆಯನ್ನು ತೊರೆದು ನನ್ನ ಮಾಮಾಜಿ (ತಾಯಿಯ ಚಿಕ್ಕಪ್ಪ) ಜತೆ ವಾಸಿಸಲು ಪ್ರಾರಂಭಿಸಿದಾಗ ನನಗೆ ಆಗ ಕೇವಲ ಹನ್ನೊಂದು ವರ್ಷ. ನಾನು ನನ್ನ ಹಳ್ಳಿಯನ್ನು ಬಿಟ್ಟು ನಗರಕ್ಕೆ ಬಂದೆ. ಲೂಧಿಯಾನಕ್ಕೆ ಸ್ಥಳಾಂತರಗೊಂಡೆ. ನನ್ನ ಒಂದು ಮಾತನ್ನೂ ಕೇಳದೇ ನನ್ನ ಹೆತ್ತವರು ಮಾಮಾಜಿ ಜತೆ ಕಳುಹಿಸಿಯೇ ಬಿಟ್ಟರುʼʼಎಂದು ಹೇಳಿಕೊಂಡಿದ್ದಾರೆ.
Most Kindest Person In Bollywood.
— 🦅 ਹਤਿੰਦਰ ਸਿੰਘ 🦅 (@hatindersinghr1) April 5, 2024
No Attitude, No Star Feeling.@diljitdosanjh ❤️❤️ pic.twitter.com/k4pEpMciF2
ʻʻನಾನು ಚಿಕ್ಕ ಕೋಣೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದೆ. ಶಾಲೆಗೆ ಹೋಗಿ ಬರುತ್ತಿದ್ದೆ, ಟಿವಿ ಇರಲಿಲ್ಲ. ನನಗೆ ಸಾಕಷ್ಟು ಸಮಯವಿತ್ತು. ಅಲ್ಲದೆ, ಆಗ ನಮ್ಮ ಬಳಿ ಮೊಬೈಲ್ ಫೋನ್ ಇರಲಿಲ್ಲ, ಮನೆಗೆ ಕರೆ ಮಾಡಬೇಕಾಗಿದ್ದರೂ ಅಥವಾ ನನ್ನ ಹೆತ್ತವರಿಂದ ಕರೆಯನ್ನು ಸ್ವೀಕರಿಸಬೇಕಾಗಿದ್ದರೂ, ಕಷ್ಟವಾಗಿತ್ತು. ನನ್ನ ಬಳಿ ಆಗ ಹಣವೂ ಇರುತ್ತಿರಲಿಲ್ಲ. ಹಾಗಾಗಿ ನಾನು ನನ್ನ ಕುಟುಂಬದಿಂದ ದೂರವಾಗತೊಡಗಿದ್ದೆ” ಎಂದು ಹೇಳಿದರು.
ʻʻನನ್ನ ತಾಯಿಯನ್ನು ತುಂಬಾ ಗೌರವಿಸುತ್ತೇನೆ. ನನ್ನ ತಂದೆ ತುಂಬಾ ಒಳ್ಳೆಯ ವ್ಯಕ್ತಿ. ಅವರು ನನ್ನ ಬಳಿ ಏನನ್ನೂ ಕೇಳಲಿಲ್ಲ. ನಾನು ಯಾವ ಶಾಲೆಯಲ್ಲಿ ಓದಿದ್ದೇನೆ ಎಂದು ಅವರು ಕೇಳಲಿಲ್ಲ. ಹೀಗೆ ನನ್ನ ಕುಟುಂಬದೊಂದಿಗೆ ನನ್ನ ಬಾಂಡಿಂಗ್ ಇರಲಿಲ್ಲʼʼಎಂದರು.
ದಿಲ್ಜಿತ್ ದೋಸಾಂಜ್ ಈಗ ಖ್ಯಾತ ಗಾಯಕರು. ಅವರ ಹಾಡುಗಳು ಜಾಗತಿಕವಾಗಿ ಜನಪ್ರಿಯವಾಗಿವೆ. ಪ್ರಸ್ತುತ, ಗಾಯಕ ಹಾಗೂ ನಟ ʻಅಮರ್ ಸಿಂಗ್ ಚಮ್ಕಿಲಾʼ ಬಿಡುಗಡೆಗೆ ಸಜ್ಜಾಗಿದ್ದಾರೆ.