Site icon Vistara News

Disha Patani: ದಿಶಾ ಸೊಂಟದ ಮೇಲೆ ಇರುವ ಟ್ಯಾಟುಗಳ ಅರ್ಥವೇನು?

Disha patani shares glimpse of tattoo on her waist

ಬೆಂಗಳೂರು: `ಕಲ್ಕಿ 2898 AD’ ಚಿತ್ರದಲ್ಲಿ ಭೈರವ ಅಂದರೆ ನಾಯ ಪ್ರಭಾಸ್‌ ಪ್ರೇಯಸಿ ರಾಕ್ಸಿ ಆಗಿ ದಿಶಾ ಪಟಾನಿ (Disha Patani) ಮಿಂಚಿದ್ದಾರೆ. ಒಂದೆರಡು ದೃಶ್ಯ ಹಾಗೂ ಒಂದು ಹಾಡಿಗೆ ಮಾತ್ರ ಸೀಮಿತವಾಗಿಬಿಟ್ಟಿದ್ದರು. ಈ ಸಿನಿಮಾ 900 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಹೇಳಿದೆ. ಸಿನಿಮಾ ಬಿಡುಗಡೆ ಸಮಯದಲ್ಲಿ ದಿಶಾ ಪಟಾನಿ ‘PD’ ಎನ್ನುವ ಟ್ಯಾಟೂ ಹಾಕಿಸಿಕೊಂಡು ದರ್ಶನ ಕೊಟ್ಟಿದ್ದರು ಇದೀಗ ಸೊಂಟದ ಮೇಲೆ ವಿಚಿತ್ರ ಭಾಷೆಯ ಸಾಲುಗಳಿರುವ ಹೊಸ ಟ್ಯಾಟೂ ಹಾಕಿಸಿಕೊಂಡು ದಿಶಾ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದು ಪರ್ಮನೆಂಟ್ ಟ್ಯಾಟೂ ಅಲ್ಲ, ಚಿತ್ರೀಕರಣಕ್ಕಾಗಿ ಹಾಕಿಸಿಕೊಂಡಿರುವ ಟ್ಯಾಟೂ ಎನ್ನುವುದು ಗೊತ್ತಾಗುತ್ತಿದೆ. ದಿಶಾ ಸೊಂಟದ ಮೇಲೆ ಇರುವುದು ಹೀಬ್ರೂ ಭಾಷೆಯ ಸಾಲುಗಳು ಎನ್ನಲಾಗುತ್ತಿದೆ. ಇಜ್ರಾಯಲ್, ಏಷ್ಯಾ, ಆಫ್ರಿಕಾ ಮಧ್ಯದಲ್ಲಿ ಕೆಲವು ದೇಶಗಳಲ್ಲಿ ಈ ಭಾಷೆ ಮಾತನಾಡುತ್ತಾರೆ. ‘ಕಲ್ಕಿ 2898 AD’ ಬಳಿಕ ತಮಿಳಿನ ‘ಕಂಗುವ’ ಚಿತ್ರದಲ್ಲಿ ಆಕೆ ನಟಿಸಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

ಪ್ರಭಾಸ್ ಅಭಿನಯದ ಈ ಚಿತ್ರವು ಈಗ ಆಮೀರ್ ಖಾನ್ ಅವರ ‘ಪಿಕೆ’ ಮತ್ತು ಸನ್ನಿ ಡಿಯೋಲ್ ಅವರ ಬ್ಲಾಕ್ಬಸ್ಟರ್, ‘ಗದರ್ 2’ ಸಿನಿಮಾ ಕಲೆಕ್ಷನ್‌ನ್ನು ಮೀರಿಸಿದೆ. 10 ನೇ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾವಾಗಿ ಹೊರಹೊಮ್ಮಿದೆ. ಕಲ್ಕಿ 2898 AD ತನ್ನ ಮೊದಲ ವಾರದಲ್ಲಿ ಒಟ್ಟು ರೂ 414.85 ಕೋಟಿ ಗಳಿಸಿತು. ಕಲ್ಕಿ ವಿಶ್ವ ಬಾಕ್ಸ್ ಆಫೀಸ್​ನಲ್ಲೂ ಮಿಂಚುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ಕಡೆಗಳಲ್ಲಿ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರ ವಿಶ್ವಾದ್ಯಂತ 800 ಕೋಟಿ ರೂಪಾಯಿ ಗಳಿಸಿದೆ. ಶೀಘ್ರವೇ ಚಿತ್ರ 1000 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.

ಇದನ್ನೂ ಓದಿ: Kalki 2898 AD: ‘ಪಿಕೆ’, ʻಗದರ್‌ʼ ಸಿನಿಮಾಗಳ ದಾಖಲೆ ಮುರಿದ ʻಕಲ್ಕಿ 2898 ಎಡಿʼ!



ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

Exit mobile version