ಬೆಂಗಳೂರು: ಚಿತ್ರ ನಿರ್ಮಾಪಕ ಆನಂದ್ ಪಂಡಿತ್ ಮಗಳು ಐಶ್ವರ್ಯಾ ಮತ್ತು ಅಳಿಯ ಸಾಹೀಲ್ ಅವರಿಗಾಗಿ ಅದ್ಧೂರಿಯಾಗಿ ಆರತಕ್ಷತೆ ಪಾರ್ಟಿ (Anand Pandit daughter wedding reception ) ಆಯೋಜಿಸಿದ್ದರು. ಈ ವೇಳೆ ಬಿ ಟೌನ್ ನಟ-ನಟಿಯರು ಕಾರ್ಯಕ್ರಮಕ್ಕೆ ಹಾಜರಾಗಿ, ಜೋಡಿಗಳಿಗೆ ಶುಭಕೋರಿದ್ದಾರೆ. ಸಮಾರಂಭಕ್ಕೆ ಮುನ್ನ ರೆಡ್ ಕಾರ್ಪೆಟ್‌ನಲ್ಲಿ ನಟ ಶಾರುಖ್ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಂಡು ಬಂದರು. ವಿಶೇಷ ಅಂದರೆ ಈ ವೇಳೆ 20 ವರ್ಷಗಳ ಮುನಿಸಿನ ಬಳಿಕ ʻಮರ್ಡರ್ʼ ಸಿನಿಮಾ ತಾರೆಗಳಾದ ಇಮ್ರಾನ್ ಹಶ್ಮಿ (Emraan Hashmi) ಮತ್ತು ಮಲ್ಲಿಕಾ ಶೆರಾವತ್ (Mallika Sherawat) ಒಟ್ಟಿಗೆ ನಿಂತು ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ರೆಡ್ ಕಾರ್ಪೆಟ್‌ನಲ್ಲಿ “ಐಕಾನಿಕ್ ಆನ್‌ಸ್ಕ್ರೀನ್ ಜೋಡಿ” ಒಟ್ಟಿಗೆ ಕಂಡು ಅಭಿಮಾನಿಗಳು ಥ್ರಿಲ್ ಆದರು. ಮಲ್ಲಿಕಾ ಶೆರಾವತ್ ಗುಲಾಬಿ ಬಣ್ಣದ ಗೌನ್‌ನಲ್ಲಿ ಕಂಡರೆ, ಇಮ್ರಾನ್ ಕಪ್ಪು ಸೂಟ್ ಧರಿಸಿದ್ದರು. ಇದೀಗ ಈ ಜೋಡಿ ಕಂಡು ನೆಟ್ಟಿಗರು ʻʻಅತ್ಯುತ್ತಮ ಜೋಡಿʼʼಎಂದು ಕಮೆಂಟ್ ಮಾಡಿದ್ದಾರೆ.
ಇಮ್ರಾನ್ ಮತ್ತು ಮಲ್ಲಿಕಾ ಅಭಿನಯದ ‘ಮರ್ಡರ್’ ಸಿನಿಮಾ 20 ವರ್ಷಗಳ ಹಿಂದೆ ಬಿಡುಗಡೆಯಾದಾಗ ಭಾರಿ ಹಿಟ್ ಆಗಿತ್ತು. ಆದರೆ, ಇವರಿಬ್ಬರ ನಡುವೆ ಸೆಟ್‌ನಲ್ಲಿ ಜಗಳ ಮಾಡಿಕೊಂಡಿದ್ದರು. 2021 ರಲ್ಲಿ ಸಂದರ್ಶನವೊಂದರಲ್ಲಿ, ಮಲ್ಲಿಕಾ ಅವರು ‘ಮರ್ಡರ್’ ಸೆಟ್‌ನಲ್ಲಿ ಇಮ್ರಾನ್ ಜತೆಗಿನ ಜಗಳದ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಮನಸ್ತಾಪವಾಗಿ ಪರಸ್ಪರ ಮಾತನಾಡಿಕೊಳ್ಳುತ್ತಿರಲಿಲ್ಲ.
ಇದನ್ನೂ ಓದಿ: Emraan Hashmi: ‘ಗೂಢಚಾರಿ-2’ ಟೀಂ ಸೇರಿದ ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ!
`ದಿ ಲವ್ ಲಾಫ್ ಲೈವ್’ ಶೋನಲ್ಲಿ ಸಂದರ್ಶನವೊಂದರಲ್ಲಿ, ನಿರೂಪಕಿ ಮಂದಿರಾ ಬೇಡಿ ಅವರು ಈ ಬಗ್ಗೆ ಹಿಂದೆ ಮಲ್ಲಿಕಾ ಅವರ ಬಳಿ ಕೇಳಿದಾಗ, ನಟಿ ಉತ್ತರಿಸಿ ʻʻಮರ್ಡರ್ ಸಿನಿಮಾ ಇಮ್ರಾನ್ ಹಶ್ಮಿಯೊಂದಿಗೆ ನಾನು ಮಾತನಾಡುತ್ತ ಇರಲಿಲ್ಲ. ಆ ಬಳಿಕ ಘಟನೆ ನೆನೆಸಿಕೊಂಡು ತುಂಬ ತಮಾಷೆ ಎಂದು ಅನಿಸಿತು. ಚಿತ್ರದ ನಂತರ ನಾನು ಪ್ರಚಾರದ ಸಮಯದಲ್ಲಿ ಅದೇನೋ ತಪ್ಪು ತಿಳಿವಳಿಕೆಯಿಂದಾಗಿ ಮಾತು ಬಿಟ್ಟಿದ್ದೇವುʼʼಎಂದಿದ್ದರು.
2014ರಲ್ಲಿ, ಇಮ್ರಾನ್ ಹಶ್ಮಿ ಅವರು ‘ಕಾಫಿ ವಿತ್ ಕರಣ್’ ಚಾಟ್ ಶೋನಲ್ಲಿ ಮಲ್ಲಿಕಾ ವಿರುದ್ಧ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಕರಣ್ ಜೋಹರ್ ಅವರು ಇಮ್ರಾನ್ ಹಶ್ಮಿ ಅವರಿಗೆ ಆನ್‌ಸ್ಕ್ರೀನ್‌ನಲ್ಲಿ ಅತ್ಯಂತ ಕೆಟ್ಟ ಚುಂಬನ ಅನುಭವ ಯಾರದ್ದಾಗಿತ್ತು? ಎಂದು ಕೇಳಿದ್ದಾಗ, ಇಮ್ರಾನ್ ತನ್ನ “ಕೆಟ್ಟ ಆನ್-ಸ್ಕ್ರೀನ್ ಕಿಸ್” ಮರ್ಡರ್ ನಟಿ ಮಲ್ಲಿಕಾ ಅವರೊಂದಿಗೆ ಎಂದು ಹೇಳಿದ್ದರು. ಹಾಗೇ ‘ಮರ್ಡರ್ 2’ ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಉತ್ತಮ ಕಿಸ್ಸರ್ ಎಂದು ಹೇಳಿಕೊಂಡಿದ್ದರು.