Site icon Vistara News

Bobby Deol: ಬಾಬಿ ಡಿಯೋಲ್‌ಗೆ ಕಿಸ್‌ ಕೊಟ್ಟ ಮಹಿಳಾ ಅಭಿಮಾನಿ; ಇದು ʻಲೈಂಗಿಕ ದೌರ್ಜನ್ಯʼ ಅಂದ್ರು ನೆಟ್ಟಿಗರು!

Female fan kisses Bobby Deol while taking selfie

ಬೆಂಗಳೂರು: ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol) ಶನಿವಾರ (ಜ.27)ರಂದು 55ನೇ ಜನುಮದಿನವನ್ನು ಅಭಿಮಾನಿಗಳ ಜತೆಗೆ ಅದ್ಧೂರಿಯಾಗಿ ಆಚರಿಸಿಕೊಂಡರು. ಹುಟ್ಟುಹಬ್ಬಕ್ಕೆ ವಿಶ್‌ ಮಾಡಲು ಬಂದಿದ್ದ ತಮ್ಮ ಅಭಿಮಾನಿಗಳನ್ನು ಮುಂಬೈನಲ್ಲಿರುವ ತಮ್ಮ ನಿವಾಸದ ಹೊರಗೆ ಭೇಟಿ ಮಾಡಿದ್ದಾರೆ ಬಾಬಿ. ಅಷ್ಟೇ ಅಲ್ಲದೇ ಅವರ ಜತೆ ಅಭಿಮಾನಿಗಳು ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ನಟನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಬಾಬಿ ಡಿಯೋಲ್​ ಅವರಿಗೆ ಕಿಸ್​ ಮಾಡಿದ್ದಾರೆ. ಇದೀಗ ಮಹಿಳೆಯ ಈ ವರ್ತನೆಗೆ ನೆಟ್ಟಿಗರು ಗರಂ ಆಗಿ, ʻಲೈಂಗಿಕ ದೌರ್ಜನ್ಯ ಇದುʼ ಎಂದು ಕಮೆಂಟ್‌ ಮಾಡಿದ್ದಾರೆ.

ಈ ಕಿಸ್‌ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೊದಲ್ಲಿ, ಮಹಿಳಾ ಅಭಿಮಾನಿಗೆ ನಟ ಬಾಬಿ ಡಿಯೋಲ್ ಅವರಿಗೆ ಸೆಲ್ಫಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಚಿತ್ರಗಳನ್ನು ಕ್ಲಿಕ್ ಮಾಡುತ್ತಿದ್ದಂತೆ ಬಾಬಿ ಹತ್ತಿರ ಬಂದು ಮಹಿಳಾ ಅಭಿಮಾನಿ ಪೋಸ್ ನೀಡಿ ಇದ್ದಕ್ಕಿದ್ದಂತೆ ಬಾಬಿ ಅವರ ಕೆನ್ನೆಗೆ ಕಿಸ್‌ ಕೊಟ್ಟಿದ್ದಾರೆ. ನಟ ಬಾಬಿ ಡಿಯೋಲ್ ಕೂಡ ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಆದರೂ ನಟ ತಾಳ್ಮೆಯಿಂದ ವರ್ತಿಸಿ ಅಲ್ಲಿಂದ ಹೋಗಿದ್ದಾರೆ. ಆದರೀಗ ನೆಟ್ಟಿಗರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ʻʻಗಂಡಸರು ಕಿಸ್​ ಕೊಟ್ರೆ ಮಾತ್ರ ಲೈಂಗಿಕ ದೌರ್ಜನ್ಯನಾ? ಇದು ಅಲ್ಲವಾ? ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಗಂಡಾಗಲಿ, ಹೆಣ್ಣಾಗಲಿ ಅನುಮತಿ ಇಲ್ಲದೇ ಈ ರೀತಿ ಕಿಸ್‌ ಕೊಡುವುದು ಸರಿಯಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Bobby Deol: ಬಾಬಿ ಡಿಯೋಲ್ ಪಾತ್ರವನ್ನು ಮುಸಲ್ಮಾನನನ್ನಾಗಿ ಮಾಡಿದ್ದು ಏಕೆ?

ಬಾಬಿ ಡಿಯೋಲ್ ʻಕಂಗುವʼ​ ಫಸ್ಟ್ ಲುಕ್ ಪೋಸ್ಟರ್‌

ಬಾಬಿ ಡಿಯೋಲ್ ಅವರ ಜನುಮದಿನ ಪ್ರಯುಕ್ತ ʻಕಂಗುವʼ ಸಿನಿಮಾ ಫಸ್ಟ್ ಲುಕ್ ಪೋಸ್ಟರ್‌ ಅನಾವರಣಗೊಳಿಸಿತ್ತು. ಫಸ್ಟ್ ಲುಕ್‌ನಲ್ಲಿ ಬಾಬಿ ಡಿಯೋಲ್ ರಗಡ್‌ ಆಗಿ ಕಂಡಿದ್ದರು. ʻಉಧಿರನ್ʼ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸುತ್ತಿದ್ದಾರೆ.ಕೆ ಜ್ಞಾನವೇಲ್ ರಾಜಾ ನಿರ್ಮಿಸಿರುವ ಕಂಗುವ ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ತಾತ್ಕಾಲಿಕವಾಗಿ ʻಸೂರ್ಯ 42ʼ ಎಂದು ಹೆಸರಿಸಲಾದ ಸೂರ್ಯ ಅವರ ಮುಂಬರುವ ಬಹು ನಿರೀಕ್ಷಿತ ಈ ಚಿತ್ರವು ಇದೀಗ ʻಕಂಗುವʼ ಎಂಬ ಹೆಸರನ್ನು ಪಡೆದುಕೊಂಡಿದೆ.

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version