ಬೆಂಗಳೂರು: ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ʻಫೈಟರ್ʼ ಸಿನಿಮಾ ಉತ್ತಮ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರ ಬಾಕ್ಸ್ ಆಫೀಸ್‌ನಿಂದಲೂ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಫೈಟರ್ ತನ್ನ ಮೊದಲ 3 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಂಡಿದೆ ಮತ್ತು ಅಂದಾಜು 89.50 ಕೋಟಿ.ರೂ. ಭಾರತದಲ್ಲಿ ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ನಾಲ್ಕನೇ ದಿನ (ಜ.29) ಸುಮಾರು 28.50 ಕೋಟಿ ರೂ. ಭಾರತದಲ್ಲಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಇದುವೆರೆಗೆ 118 ಕೋಟಿ ರೂ.ಗೆ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಫೈಟರ್ ಸಿನಿಮಾದ ಮಾರ್ನಿಂಗ್ ಶೋಗಳು ಶೇ. 20.29 ಆಕ್ಯುಪೆನ್ಸಿಯನ್ನು ಹೊಂದಿದ್ದರೆ, ಸಂಜೆ ಶೇ.35.54ಆಕ್ಯುಪೆನ್ಸಿಯನ್ನು ಹೊಂದಿತ್ತು ಎಂದು ವರದಿಯಾಗಿದೆ.
ಈ ಇಡೀ ಸಿನಿಮಾದಲ್ಲಿ ಶೋಕೇಸ್ ಆಗಿರುವುದು ಭಾರತೀಯ ವಾಯುಸೇನೆಯ (Indian airforce) ಮೈ ನವಿರೇಳಿಸುವ ಸಾಹಸಗಳ ಕಥೆ. ಅಲ್ಲಿ ತೀವ್ರವಾದ ಭಾವುಕತೆ ಇದೆ. ಕರುಳು ಹಿಂಡುವ ದೃಶ್ಯಗಳು ಇವೆ. ಸೈನಿಕರ ಕುಟುಂಬಗಳ ನೋವಿನ ಕಥೆ ಇದೆ. ಅಂತರವಾಹಿನಿ ಆದ ಪ್ರೇಮಕತೆ ಇದೆ. ಪಾಕಿಸ್ತಾನದ ಭಯೋತ್ಪಾದಕ ಸಂಸ್ಥೆಗಳು ನಡೆಸುವ ಕ್ರೌರ್ಯಗಳು ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಜ್ಜೆ ಹೆಜ್ಜೆಗೂ ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳ ಹೂರಣ ಇದೆ.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಕೂಡ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಜತೆಗೆ, ಚಿತ್ರದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜೀಜ್, ಪ್ರದುಮ್ ಶುಕ್ಲಾ ಮತ್ತು ಪ್ರದುಮ್ ಜಯಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Fighter’ box office Day 1: ಮೊದಲ ದಿನವೇ ಭಾರಿ ಗಳಿಕೆ ಕಂಡ ಹೃತಿಕ್ ರೋಷನ್-ದೀಪಿಕಾ ಸಿನಿಮಾ ʻಫೈಟರ್ʼ!
Early Expected #Fighter 4th day gross collection
— Mana Box Office (@box_mana44450) January 28, 2024
India-30cr
Overseas-10cr
[=>Total-40cr( Excellent Hold 💥)
Day1-35cr
Day2-61cr
Day3-54.5cr
[=>Total Gross-150.5cr
Excellent Run 💥 @iHrithik classical jet Fight on BOX office 💥 pic.twitter.com/Pd3hRIqZpw
ʼಫೈಟರ್ʼ ಚಿತ್ರದಲ್ಲಿನ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ದೇಶಪ್ರೇಮ ಸಾರುವ ಈ ಸಿನಿಮಾದಲ್ಲಿ ಇಬ್ಬರೂ ಭರ್ಜರಿ ಸಾಹಸ ದೃಶ್ಯಗಳಲ್ಲಿ ಮಿಂಚಿದ್ದಾರೆ. ಜತೆಗೆ ರೊಮ್ಯಾಂಟಿಕ್, ಸೆಂಟಿಮೆಂಟ್ ಅಂಶಗಳೂ ಚಿತ್ರದಲ್ಲಿದೆ. ಕಳೆದ ವರ್ಷ ಜನವರಿ 25ರಂದು ತೆರೆಕಂಡ ಸಿದ್ಧಾರ್ಥ್ ಆನಂದ್ ನಿರ್ದೇಶನದ ʼಪಠಾಣ್ʼ ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಆ ಚಿತ್ರದಲ್ಲೂ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದರು. ಶಾರುಖ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದ ʼಪಠಾಣ್ʼ 1 ಸಾವಿರ ಕೋಟಿ ರೂ.ಗಿಂತ ಅಧಿಕ ಗಳಿಕೆ ಕಂಡಿತ್ತು. ಅದಾಗಿ ಸರಿಯಾಗಿ ಒಂದು ವರ್ಷದ ಬಳಿಕ ʼಫೈಟರ್ʼ ತೆರೆ ಕಂಡಿರುವುದು ವಿಶೇಷ.