ಬೆಂಗಳೂರು: ಹೃತಿಕ್ ರೋಷನ್ (Hrithik Roshan) ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ʻಫೈಟರ್ʼ ಸಿನಿಮಾ (Fighter’ box office Day 1) ವಿಶ್ವಾದ್ಯಂತ ಜ.25ರಂದು ತೆರೆ ಕಂಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಆರಂಭಿಕ ದಿನದಲ್ಲಿ ಅಭಿಮಾನಿಗಳಿಂದ ಉತ್ತಮ ವಿಮರ್ಶೆಗಳನ್ನು ಪಡೆದ ಚಿತ್ರ 22 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ.
ಇದೀಗ ಜ.26ರಿಂದ ಮೂರು ದಿನಗಳ ಕಾಲ ರಜವಿದ್ದ ಕಾರಣ ಸಿನಿಮಾ ಇನ್ನಷ್ಟು ಗಳಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮೊದಲ ದಿನವೇ ಅಭಿಮಾನಿಗಳು ಚಿತ್ರವನ್ನು ‘ಮೆಗಾ ಬ್ಲಾಕ್‌ಬಸ್ಟರ್’, ‘ಸೂಪರ್ ಆ್ಯಕ್ಷನ್ ಫಿಲ್ಮ್’, ‘ಅತ್ಯುತ್ತಮ ಛಾಯಾಗ್ರಹಣ, ʻಸಾಹಸ ಮತ್ತು ಅಭಿನಯʼ ʻಮಾಸ್ಟರ್ ಪೀಸ್’ ಎಂದು ಕರೆದಿದ್ದರು. ಒಬ್ಬರು ʻʻಇದು ಬ್ಲಾಕ್‌ಬಸ್ಟರ್ ಚಲನಚಿತ್ರವಲ್ಲ, ಇದು ʻಮೆಗಾ ಬ್ಲಾಕ್‌ಬಸ್ಟರ್ʼ ಚಲನಚಿತ್ರ, ಆ್ಯಕ್ಷನ್, ನಿರ್ದೇಶನ, ವಿಎಫ್‌ಏಕ್ಸ್, ಛಾಯಾಗ್ರಹಣ, ಹಿನ್ನೆಲೆ ಧ್ವನಿ ಎಲ್ಲವೂ ಅದ್ಭುತ. ನೋಡಲೇಬೇಕಾದ ಸಿನಿಮಾʼʼಎಂದು ಬರೆದುಕೊಂಡಿದ್ದರು.
ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಪಠಾಣ್ ಸಿನಿಮಾ ನಂತರ ಈ ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ.ಹೃತಿಕ್ ರೋಷನ್ ಜತೆ ಸಿದ್ಧಾರ್ಥ್ ಆನಂದ್ ಅವರು ಈ ಹಿಂದೆ ‘ವಾರ್’ ಮತ್ತು ‘ಬ್ಯಾಂಗ್ ಬ್ಯಾಂಗ್’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡವು.
ಇದನ್ನೂ ಓದಿ: Fitness: ಈ ವ್ಯಕ್ತಿಯ ವಯಸ್ಸು 93, ಆದರೆ ದೇಹ ಮಾತ್ರ 40ರ ಹರೆಯದ್ದು! ಇದು ಹೇಗೆ ಸಾಧ್ಯ?
#Fighter's Day 1 box office falls below expectations at under 21 cr . Despite a hefty budget and star-studded cast, audience acclaim hints at a potential uptick starting tomorrow! #Fighter pic.twitter.com/FUvKsk8fbl
— HarminderBOI (@HarminderBOI) January 25, 2024
ವರದಿಯ ಪ್ರಕಾರ ಸಿನಿಮಾ ಬಿಡುಗಡೆಗೂ ಮುನ್ನ 3.7 ಕೋಟಿ ರೂ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.