ನವದೆಹಲಿ: ‘ಗುಜರಾತ್ ಪ್ರವಾಸೋದ್ಯಮ ಇಲಾಖೆ’ (Gujarat Tourism) ಸಹಯೋಗದೊಂದಿಗೆ 69ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ (69th Filmfare Awards) ಕಾರ್ಯಕ್ರಮ ಗುಜರಾತ್ನ ಗಾಂಧಿನಗರದ ಮಹಾತ್ಮ ಮಂದಿರ್ ಕನ್ವೆನ್ಷನ್ ಮತ್ತು ಎಕ್ಸಿಬ್ಯುಷನ್ ಸೆಂಟರ್ನಲ್ಲಿ ಜ.27 ಹಾಹೂ ಜ.28ರಂದು ಅದ್ಧೂರಿಯಾಗಿ ನಡೆದಿದೆ. ಜನವರಿ 27ರಂದು ಬಾಲಿವುಡ್ (Bollywood) ಸಿನಿಮಾಗಳ ಹಲವು ತಾಂತ್ರಿಕ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿತ್ತು. ಜ.28ರಂದು ಉಳಿದ ವಿಭಾಗಗಳಿಗೆ ಪ್ರಶಸ್ತಿ ನೀಡಲಾಯಿತು.
1ʻ2th ಫೇಲ್ ಸಿನಿಮಾʼ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ʻಅನಿಮಲ್ʼ ಚಿತ್ರಕ್ಕಾಗಿ ರಣಬೀರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರೆ,ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾಗಾಗಿ ಆಲಿಯಾ ಭಟ್ ಅತ್ತುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ʻಥ್ರೀ ಆಫ್ ಅಸ್ʼ ಚಿತ್ರಕ್ಕಾಗಿ ಶೆಫಾಲಿ ಷಾ ಅತ್ಯುತ್ತಮ ವಿಮರ್ಶಕ ನಟಿ ಪ್ರಶಸ್ತಿಯನ್ನು ಪಡೆದರು, ವಿಕ್ರಾಂತ್ ಮಾಸ್ಸೆ ಅವರು ʻ12th ಫೇಲ್ʼ ಸಿನಿಮಾಗಾಗಿ ಅತ್ಯುತ್ತಮ ವಿಮರ್ಶಕ ನಟ ಪ್ರಶಸ್ತಿ ಪಡೆದರು. ʻಡಂಕಿʼ ಚಿತ್ರಕ್ಕಾಗಿ ವಿಕ್ಕಿ ಕೌಶಲ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
ಅತ್ಯುತ್ತಮ ಚಿತ್ರ
- 12th ಫೇಲ್ (ವಿನ್ನರ್)
- ಜವಾನ್
- OMG 2
- ಪಠಾಣ್
- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಬೆಸ್ಟ್ ಫಿಲ್ಮ್ ಕ್ರಿಟಿಕ್ ಅವಾರ್ಡ್
- ಜೋರಾಮ್ (ವಿನ್ನಿಂಗ್)
- ಫರಾಜ್
- ಸ್ಯಾಮ್ ಬಹದ್ದೂರ್
- ಜ್ವಿಗಾಟೊ
ಅತ್ಯುತ್ತಮ ನಿರ್ದೇಶಕ
- ವಿಧು ವಿನೋದ್ ಚೋಪ್ರಾ (ವಿನ್ನರ್)- 12th ಫೇಲ್ ಸಿನಿಮಾ
- ಅಮೀರ್ ರೈ (OMG 2)
- ಅಟ್ಲಿ (ಜವಾನ್)
- ಕರಣ್ ಜೋಹರ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಸಂದೀಪ್ ರೆಡ್ಡಿ ವಂಗಾ (ಪ್ರಾಣಿ)
- ಸಿದ್ಧಾರ್ಥ್ ಆನಂದ್ (ಪಠಾಣ್)
ಅತ್ಯುತ್ತಮ ನಟ
- ರಣಬೀರ್ ಕಪೂರ್ – ವಿನ್ನರ್ (ಅನಿಮಲ್ ಸಿನಿಮಾ)
- ರಣವೀರ್ ಸಿಂಗ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಶಾರುಖ್ ಖಾನ್ (ಡಂಕಿ)
- ಶಾರುಖ್ ಖಾನ್ (ಜವಾನ್)
- ಸನ್ನಿ ಡಿಯೋಲ್ (ಗದರ್ 2)
- ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ವಿಕ್ಕಿ ಕೌಶಲ್ ʻಡಂಕಿʼ ಸಿನಿಮಾಗಾಗಿ ಅತ್ತುತ್ತಮ ಪೋಷಕ ನಟ, ಶಬಾನಾ ಅಜ್ಮಿ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾಗಾಗಿ ಅತ್ತುತ್ತಮ ಪೋಷಕ ನಟಿ ಪ್ರಶಸ್ತಿ, ಅಮಿತಾಭ್ ಭಟ್ಟಾಚಾರ್ಯ (ತೇರೆ ವಾಸ್ತೆ- ಜರಾ ಹಟ್ಕೆ ಜರಾ ಬಚ್ಕೆ) ಉತ್ತಮ ಸಾಹಿತ್ಯ ಪ್ರಶಸ್ತಿ ಬಂದಿದೆ. ಅತ್ಯತ್ತಮ ಕಥೆ: ಅಮಿತ್ ರೈ (ಒಎಂಜಿ 2) ಅತ್ಯುತ್ತಮ ನಟಿ (ಕ್ರಿಟಿಕ್ಸ್): ರಾಣಿ ಮುಖರ್ಜಿ (ಮಿಸಸ್ ಚಟರ್ಜಿ Vs ನಾರ್ವೇ)
Thanking His Father and His Daughter.
— 🐰 (@rksbunny) January 28, 2024
SUPERSTAR #RanbirKapoor after Winning Best Actor Male Popular.#FilmfareAwards2024
pic.twitter.com/RHaY2btqFm
ಇದನ್ನೂ ಓದಿ: 69th Filmfare Awards: 69ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ; `ಸ್ಯಾಮ್ ಬಹದ್ದೂರ್’ ಸಿನಿಮಾಗೆ ಬಂಪರ್!
69ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜ.27ರಂದು ಅಪಾರಶಕ್ತಿ ಖುರಾನ ಮತ್ತು ಕರೀಷ್ಮಾ ತನ್ನಾ ಅವರು ನಿರೂಪಣೆ ಮಾಡಿದ್ದರು. ಈ ಸಂದರ್ಭದಲ್ಲಿ ಛಾಯಾಗ್ರಹಣ, ಚಿತ್ರಕಥೆ, ವಸ್ತ್ರವಿನ್ಯಾಸ ಮತ್ತು ಸಂಕಲನ ಸೇರಿದಂತೆ ತಾಂತ್ರಿಕ ವಿಭಾಗಗಳಿಗೆ ವಿಜೇತರನ್ನು ಘೋಷಿಸಲಾಗಿತ್ತು. ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾದ ವಾಟ್ ಜುಮ್ಕಾ? ಹಾಡಿಗೆ ಗಣೇಶ್ ಆಚಾರ್ಯ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿಯನ್ನು ಪಡೆದಿದ್ದರು. ಶಾರುಖ್ ಅವರ ಜವಾನ್ ಸಿನಿಮಾ ʻʻಬೆಸ್ಟ್ ವಿಷ್ಯುವಲ್ ಎಫೆಕ್ಟ್ʼʼ ಹಾಗೂ ʻಬೆಸ್ಟ್ ಆಕ್ಷನ್ʼಗಾಗಿ ಪ್ರಶಸ್ತಿ ಪಡೆದುಕೊಂಡಿತ್ತು.
It's a very good decision for not choosing over-acting than acting for giving an award at the recent filmfare awards 😂😂😂😂
— Salman Holic 🔥(BB Salaar 🔥) (@Bakra_Insaan) January 29, 2024
Some fans r badly disappointed 😂#FilmfareAwards2024#Jawan #Pathan #Dunki #Animal #RanbirKapoor𓃵 #VickyKaushal pic.twitter.com/Crsrj3tWOj
ರಣಬೀರ್ ರಪೂರ್ ಅಭಿನಯದ ʻಅನಿಮಲ್ʼ ಸಿನಿಮಾ ʻಅತ್ತುತ್ತಮ ಹಿನ್ನೆಲೆ ಸಂಗೀತʼಕ್ಕೆ ಅವಾರ್ಡ್ ಪಡೆದುಕೊಂಡರೆ, ʻಅತ್ಯುತ್ತಮ ಸೌಂಡ್ ಡಿಸೈನ್ʼನಲ್ಲಿ ಪ್ರಶಸ್ತಿಯನ್ನು ʻಸ್ಯಾಮ್ ಬಹದ್ದೂರ್ʼ ಹಾಗೂ ʻಅನಿಮಲ್ʼ ಪಡೆದುಕೊಂಡಿತ್ತು.