ಬೆಂಗಳೂರು: ಅಮಿತಾಭ್ ಬಚ್ಚನ್ (Jaya Bachchan) ಮತ್ತು ಜಯಾ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ಜಯಾ ಬಚ್ಚನ್ ಕೂದಲ ಆರೈಕೆಯ ಹಿಂದಿನ ಗುಟ್ಟನ್ನು (Hair Care secrets bachchan family) ಬಿಚ್ಚಿಟ್ಟಿದ್ದಾರೆ. ʻವಾಟ್ ದಿ ಹೆಲ್ ನವ್ಯಾ ಸೀಸನ್ 2ʼರ ಇತ್ತೀಚಿನ ಸಂಚಿಕೆಯಲ್ಲಿ, ಜಯಾ ಅವರು ತಮ್ಮ ಕೂದಲು ಆರೈಕೆಯ ದಿನಚರಿಯನ್ನು ಹಂಚಿಕೊಂಡಿದ್ದಾರೆ. ಈ ಪಾಡ್‌ಕ್ಯಾಸ್ಟ್‌ನಲ್ಲಿ ಜಯಾಬಚ್ಚನ್ ಮತ್ತು ಶ್ವೇತಾ ತಾವು ಕೂದಲಿಗೆ ಈರುಳ್ಳಿ ರಸವನ್ನು ಹಚ್ಚುತ್ತೇವೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಈ ಪಾಡ್‌ಕ್ಯಾಸ್ಟ್‌ನಲ್ಲಿ ಜಯಾಬಚ್ಚನ್ ಮತ್ತು ಶ್ವೇತಾ ಈರುಳ್ಳಿ ರಸ ಮಾತ್ರವಲ್ಲ ತೆಂಗಿನೆಣ್ಣೆ, ಕರಿಬೇವಿನ ಎಲೆಗಳು, ಮೆಂತ್ಯೆ ಕಾಳುಗಳ ಮಿಶ್ರಣದ ಎಣ್ಣೆಯನ್ನು ಸಹ ಬಳಸುತ್ತೇವೆ ಎಂದು ಹೇಳಿದ್ದಾರೆ. ತೆಂಗಿನ ಎಣ್ಣೆ ಬ್ಯಾಕ್ಟೀರಿಯಾದ ಸೋಂಕನ್ನು ತಡೆಗಟ್ಟುವ ಮೂಲಕ ನೆತ್ತಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮತ್ತು ಒಳಗಿನಿಂದ ಕೂದಲನ್ನು ಬಲಪಡಿಸುತ್ತದೆ. ಇನ್ನು ಕರಿಬೇವು ಕೂದಲು ತೆಳುವಾಗುವುದನ್ನು ಮತ್ತು ಒಡೆಯುವುದನ್ನು ತಡೆಯುತ್ತದೆ. ಮೆಂತ್ಯೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಕೂದಲು ಉದುರುವಿಕೆಯನ್ನು ತಡೆಯುತ್ತದೆ ಎಂದರು.
ಇದನ್ನೂ ಓದಿ: Amitabh Bachchan: ಆಸ್ಪತ್ರೆಗೆ ದಾಖಲಾದ ಅಮಿತಾಭ್ ಬಚ್ಚನ್: ಆಂಜಿಯೋಪ್ಲಾಸ್ಟಿ ಮಾಡಿದ ವೈದ್ಯರು
ಈರುಳ್ಳಿ ರಸ ಮತ್ತು ಈರುಳ್ಳಿ ಸಿಪ್ಪೆಯ ನೀರಿನಿಂದ ಕೂದಲನ್ನು ತೊಳೆಯುವುದನ್ನು ಅನೇಕ ಸಲೂನ್‌ಗಳಲ್ಲಿ ಕೂಡಾ ಶಿಫಾರಸು ಮಾಡುತ್ತಾರೆ. ಈರುಳ್ಳಿ ಕೂದಲಿಗೆ ಅನೇಕ ರೀತಿಯ ಪ್ರಯೋಜನಗಳನ್ನೂ ತಂದುಕೊಡುತ್ತದೆ. ಕೂದಲು ಉದುರುವುದು, ತಲೆಹೊಟ್ಟು, ಕೂದಲ ತುದಿ ಒಡೆಯುವುದು ಮುಂತಾದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಈರುಳ್ಳಿ ಕೆಲಸ ಮಾಡುತ್ತದೆ. ಕೂದಲು ಉದುರುವ ಸಂದರ್ಭದಲ್ಲಿ ಹಲವರು ಈರುಳ್ಳಿ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹಚ್ಚುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.
ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಅವರು ಮೊಮ್ಮಗಳ ʻನವ್ಯಾ ನವೇಲಿ ನಂದಾʼ ಪಾಡ್‌ಕಾಸ್ಟ್‌ನ ಸಂಚಿಕೆಯಲ್ಲಿ ನಟಿ ಜಯಾ ಬಚ್ಚನ್ ಈ ಮುಂಚೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಔಟ್ ಡೋರ್ ಶೂಟಿಂಗ್ ವೇಳೆ ಪೊದೆಗಳ ಹಿಂದೆ ಅಡಗಿ ಕುಳಿತು ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದರು.
ಜಯಾ ಬಚ್ಚನ್ ಮಾತನಾಡಿ ʻʻನಮ್ಮ ಕಾಲದಲ್ಲಿ ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಮಗಾಗಿ ವ್ಯಾನ್‌ಗಳಿರಲಿಲ್ಲ(ಕ್ಯಾರವಾನ್). ಸರಿಯಾದ ಶೌಚಾಲಯದ ವ್ಯವಸ್ಥೆಗಳು ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಪ್ಯಾಡ್‌ಗಳನ್ನು ಬದಲಿಸಲು ನಮಗೆ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಪ್ಯಾಡ್‌ಗಳನ್ನು ಎಸೆಯಲು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಆಗ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೆವುʼʼ ಎಂದಿದ್ದರು.