Site icon Vistara News

Heeramandi first song : ಮಿಸ್ ವರ್ಲ್ಡ್ ಫಿನಾಲೆಯಲ್ಲಿ ʻಹೀರಾಮಂಡಿʼ ಚಿತ್ರದ ಮೊದಲ ಸಾಂಗ್‌ ಔಟ್‌!

Heeramandi Miss World finalists to launch Sakal Ban

ಬೆಂಗಳೂರು: ಸಂಜಯ್ ಲೀಲಾ ಬನ್ಸಾಲಿಯವರ ಹದಿನಾಲ್ಕು ವರ್ಷಗಳ ಕನಸಿನ ಕೂಸಾಗಿರುವ ನೆಟ್‌ಫ್ಲಿಕ್ಸ್ ಸೀರೀಸ್ ಹೀರಾಮಂಡಿ ಚಿತ್ರ (Hiramandi: The Diamond Bazaar) ರಸಿಕರ ಮನಗೆಲ್ಲುವ ಸಿದ್ಧತೆಯನ್ನು (Heeramandi first song) ಮಾಡಿಕೊಂಡಿದೆ. ಬಹು ನಿರೀಕ್ಷಿತ ವೆಬ್ ಸರಣಿ, ‘ಹೀರಾಮಂಡಿ: ದಿ ಡೈಮಂಡ್ ಬಜಾರ್’, ಅದರ ಮೊದಲ ಹಾಡು ‘ಸಕಲ್ ಬನ್’ (Sakal Ban) ಮಿಸ್ ವರ್ಲ್ಡ್ 2024 ರ ಫಿನಾಲೆಯಲ್ಲಿ ಲಾಂಚ್‌ ಆಗಿದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಸೇರಿದಂತೆ ಅನೇಕರು ಈ ಹಾಡಿಗೆ ರ್‍ಯಾಂಪ್‌ ವಾಕ್‌ ಮಾಡಿದರು.

ಮಿಸ್ ವರ್ಲ್ಡ್ ಸ್ಪರ್ಧಿಗಳು ಮತ್ತು ‘ಹೀರಾಮಂಡಿ’ ಪಾತ್ರವರ್ಗದವರು ಹಾಡನ್ನು ಲಾಂಚ್ ಮಾಡುವಾಗ ರ್‍ಯಾಂಪ್‌ ವಾಕ್ ಮಾಡುತ್ತಿರುವ ಕ್ಲಿಪ್ ಅನ್ನು ಅದಿತಿ ಹೈದರಿ ಹಂಚಿಕೊಂಡಿದ್ದಾರೆ. ʻʻಹೀರಾಮಂಡಿ: ಡೈಮಂಡ್ ಬಜಾರ್ ಶೀಘ್ರದಲ್ಲೇ ಬರಲಿದೆ, ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರʼಎಂದು ಬರೆದುಕೊಂಡಿದ್ದಾರೆ ಅದಿತಿ ಹೈದರಿ.

ಇದನ್ನೂ ಓದಿ: Actor Dhanush: ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

ಅಮೀರ್ ಖುಸ್ರೋ ಬರೆದಿರುವ ಮತ್ತು ರಾಜಾ ಹಸನ್ ಹಾಡಿರುವ ಸಕಲ್ ಬನ್‌ವನ್ನು ಬನ್ಸಾಲಿಯವರ ಹೊಸ ಮ್ಯೂಸಿಕ್ ಲೇಬಲ್, ಬನ್ಸಾಲಿ ಮ್ಯೂಸಿಕ್ ಅಡಿಯಲ್ಲಿ ಪ್ರಾರಂಭಿಸಲಾಯಿತು.

ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳೆಂದರೆ ಅಲ್ಲೊಂದು ಅದ್ಭುತ ಮಾಯಾಲೋಕವನ್ನೇ ನಾವು ನಿರೀಕ್ಷಿಸಬಹುದು. ಅವರ ಖ್ಯಾತ ಚಿತ್ರಗಳಾದ ದೇವದಾಸ್, ಬಾಜಿರಾವ್ ಮಸ್ತಾನಿ ಮೊದಲಾದ ಚಿತ್ರಗಳಿಂದಲೇ ಸಂಜಯ್ ಬಾಲಿವುಡ್‌ನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಚಿತ್ರ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದಾರೆ. “ಹೀರಾಮಂಡಿ” ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೇಶ್ಯೆಯರ ಜೀವನದಲ್ಲಿ ಪ್ರೀತಿ ಮತ್ತು ದ್ರೋಹದ ವಿಷಯಗಳನ್ನು ಅನ್ವೇಷಿಸುತ್ತದೆ. ‘ಹೀರಾಮಂಡಿ: ದಿ ಡೈಮಂಡ್ ಬಜಾರ್’, ಈ ವರ್ಷದ ಕೊನೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

Exit mobile version