Site icon Vistara News

Juhi Chawla: ಮದುವೆಗೆ 2000 ಜನಕ್ಕೆ ನೀಡಲಾಗಿತ್ತು ಆಮಂತ್ರಣ; ಆದರೆ ಅತ್ತೆ ಹಿಂಪಡೆದರು ಎಂದ ಜೂಹಿ ಚಾವ್ಲಾ!

Juhi Chawla mother-in-law uninvited nearly 2000 guests her wedding

ಬೆಂಗಳೂರು: ನಟಿ ಜೂಹಿ ಚಾವ್ಲಾ (Juhi Chawla) ಅವರು ಜಯ್ ಮೆಹ್ತಾ ಅವರೊಂದಿಗೆ ಈಗಾಗಲೇ 29 ವರ್ಷ ದಾಂಪತ್ಯ ಜೀವನ ಕಳೆದಿದ್ದಾರೆ. ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಜೂಹಿ ಭಾಗಿ ಆಗಿದ್ದಾರೆ. ಅವರು ತಮ್ಮ ಮದುವೆ ಬಗ್ಗೆ ನೆನಪಿಸಿಕೊಂಡಿದ್ದಾರೆ. ಈ ವೇಳೆ ನಟಿ ಮಾತನಾಡಿ ʻʻತನ್ನ ಮದುವೆಯ ಒಂದು ವರ್ಷ ಮೊದಲು ತನ್ನ ತಾಯಿ ನಿಧನರಾದರು. ಹಾಗಾಗಿ ಅಂದು ನನಗೆ ತುಂಬ ಸಂತೋಷ ದಿನ ಆಗಿರಲಿಲ್ಲ. ಎಂದು ಜೂಹಿ ನೆನಪಿಸಿಕೊಂಡರು.

“ನಾನು ನನ್ನ ವೃತ್ತಿಜೀವನದಲ್ಲಿ ಕೆಲವು ದೊಡ್ಡ ಸಿನಿಮಾಗಳನ್ನು ಮಾಡುತ್ತಿದ್ದೆ. ಆಗ ನಾನು ಮದುವೆಯಾಗಬೇಕಿತ್ತು. ಆದರೆ ಮದುವೆಯ ಒಂದು ವರ್ಷದ ಹಿಂದೆಯೇ ತಾಯಿ ತೀರಿಕೊಂಡಿದ್ದರು. ಮದುವೆಯ ದಿನಾಂಕ ಹತ್ತಿರ ಬಂದಾಗ, ನಾನು ತುಂಬಾ ಪ್ರೀತಿಸುತ್ತಿದ್ದ ನನ್ನ ತಾಯಿ ಹೋದಳು ಎಂದು ದುಃಖಿತಳಾಗಿದ್ದೆ. ಜತೆಗೆ ವೃತ್ತಿ ಜೀವನವೂ ಕೊನೆಗೊಳ್ಳಲಿದೆ ಎಂಬ ಬೇಸರ ಕೂಡ ಇತ್ತು. ನನ್ನ ಭಯವನ್ನು ನನ್ನ ಭಾವಿ ಅತ್ತೆ ಬಳಿ ಹೇಳಿಕೊಂಡೆ. ಅವರು ಇರಲಿ ಬಿಡು ಎಂದರು’ ಎಂದಿದ್ದಾರೆ ಜೂಹಿ.

ʻʻಸುಮಾರು ಸುಮಾರು 2000 ಜನರಿಗೆ ಆಮಂತ್ರಣ ಹೋಗಿತ್ತು. ಎಲ್ಲಾ ಆಮಂತ್ರಣವನ್ನೂ ಅತ್ತೆ ಹಿಂಪಡೆದರು. ನನ್ನ ಅತ್ತೆಯೇ ಮುಂದೆ ನಿಂತು ಕುಟುಂಬದವರಿಗೆ ಈ ಬಗ್ಗೆ ಮನವರಿಕೆ ಮಾಡಿದರು. ದೊಡ್ಡ ಮಟ್ಟದಲ್ಲಿ ಮದುವೆ ಬೇಡ ಎಂದು ಹೇಳಿದರು. ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಬರುವಂತೆ ನೋಡಿಕೊಂಡರು. ಕೇವಲ 80-90-100 ಜನರ ಸಮ್ಮುಖದಲ್ಲಿ ಮದುವೆ ಆಯಿತುʼʼಎಂದು ಹೇಳಿಕೊಂಡಿದ್ದಾರೆ.

OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!ಇದನ್ನೂ ಓದಿ:

ಜೂಹಿ 1995 ರಲ್ಲಿ ಉದ್ಯಮಿ ಜಯ್ ಮೆಹ್ತಾ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ – ಮಗಳು ಜಾನ್ವಿ ಮೆಹ್ತಾ ಮತ್ತು ಮಗ ಅರ್ಜುನ್ ಮೆಹ್ತಾ. ಕಯಾಮತ್ ಸೆ ಕಯಾಮತ್ ತಕ್ (1988) ನಲ್ಲಿ ಅದ್ಭುತ ಪಾತ್ರ ನಿಭಾಯಿಸಿ ಜನಪ್ರಿಯತೆ ಪಡೆದುಕೊಂಡವರು ಜೂಹಿ. ಡರ್, ಹಮ್ ಹೇ ರಾಹಿ ಪ್ಯಾರ್ ಕೆ, ದೀವಾನಾ ಮಸ್ತಾನಾ, ಯೆಸ್ ಬಾಸ್, ಇಷ್ಕ್, ಝಂಕಾರ್ ಬೀಟ್ಸ್, ಮೈ ಬ್ರದರ್ ನಿಖಿಲ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಜೂಹಿ ವೆಬ್ ಸೀರೀಸ್ ಹುಶ್ ಹುಶ್ ಮತ್ತು ದಿ ರೈಲ್ವೇ ಮೆನ್‌ ಭಾಗವಾಗಿದ್ದರು.

Exit mobile version