ಬೆಂಗಳೂರು: ಹೃತಿಕ್ ರೋಷನ್ (Hrithik Roshan) ʻಫೈಟರ್ʼ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಸ್ನಾಯು ಸೆಳೆತದಿಂದ ಬಳಲುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. ಊರುಗೋಲುಗಳ ಸಹಾಯದ ಮೂಲಕ ನಿಂತಿರುವ ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಊರುಗೋಲು ಸಹಾಯದಿಂದ ಕನ್ನಡಿ ಮುಂದೆ ನಿಂತಿರುವ ಫೋಟೊ ಹಂಚಿಕೊಂಡು ನಿಜವಾದ ಶಕ್ತಿ ಎಂದರೇನು? ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ದೈಹಿಕ ಶಕ್ತಿಯ ಇತಿಮಿತಿಗಳ ನಡುವೆಯೂ ಪುರುಷರು ಗಟ್ಟಿತನ ಪ್ರದರ್ಶಿಸಬೇಕು ಎಂಬುದು ಸಮಾಜದ ನಿರೀಕ್ಷೆಯಾಗಿದೆ ಎಂದು ಪೋಸ್ಟ್ ಮುಖಾಂತರ ಹೇಳಿಕೊಂಡಿದ್ದಾರೆ.
ಹೃತಿಕ್ ರೋಷನ್ ಪೋಸ್ಟ್‌ನಲ್ಲಿ ʻʻನಿಮ್ಮಲ್ಲಿ ಎಷ್ಟು ಮಂದಿ ಗಾಲಿಕುರ್ಚಿ ಹಾಗೂ ಊರುಗೋಲು ಬಳಸಲಿದ್ದೀರಾ?ಅದು ನಿಮಗೆ ಹೇಗೆ ಅನ್ನಿಸಿತ್ತು?ಎಂದು ಮಾತು ಶುರು ಮಾಡಿದ್ದಾರೆ. ನಮ್ಮ ತಾತಾ ಸಹ ಗಾಯಗೊಂಡಿದ್ದರು. ಗಾಲಿಕುರ್ಚಿ ಹಾಗೂ ಊರುಗೋಲು ಅವರು ಬಳಸುವಾಗ ಅವರಿಗೆ ತಾನು ಬಲಶಾಲಿ ಅಲ್ಲ ಎಂದು ತೋರಿಸಿಕೊಡುತ್ತಿತ್ತು. ನಾನು ಅವರಿಗೆ ಅಂದು ಹೇಳಿದ್ದು ನೆನಪಿದೆ. ಇದು ಕೇವಲ ಗಾಯ. ನಿಮ್ಮ ವಯಸ್ಸಿಗೆ ಯಾವುದೇ ಸಂಬಂಧವಿಲ್ಲ! ಇದು ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು. ಗಾಯಕ್ಕಾಗಿ ಗಾಲಿಕಿರ್ಚಿ ಬಳಸಿದರೆ ವಯಸ್ಸಿನ ಅಂಶವು ಅನ್ವಯಿಸುವುದಿಲ್ಲ ಎಂದು ವಾದಿಸಿದೆ. ಆದರೆ ನನ್ನ ಅಜ್ಜ ಅಪರಿಚಿತರಿಗೆ ನಾನು ಬಲವಾಗಿದ್ದೇನೆ ಎಂದು ತೋರ್ಪಡಿಸಿಕೊಂಡರು. ಇದು ಅವರ ನೋವನ್ನು ಇನ್ನಷ್ಟು ಹದೆಗೆಡಿಸಿತು. ಗಣಪಡುವಿಕೆ ಇನ್ನಷ್ಟು ವಿಳಂಬವಾಯ್ತು. ಉರುಗೋಲು ಹಾಗೂ ಗಾಲಿಕುರ್ಚಿ ದುರ್ಬಲತೆ ಅಲ್ಲʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Hrithik Roshan: ಹೃತಿಕ್ ರೋಷನ್ ಗರ್ಲ್ ಫ್ರೆಂಡ್ ವಿಚಿತ್ರ ಡ್ಯಾನ್ಸ್! ಸಬಾ ಟ್ರೋಲ್, ತಿರುಗೇಟು ಕೊಟ್ಟ ನಟ!
ಹೃತಿಕ್ ರೋಷನ್ ಪೋಸ್ಟ್
ತಮ್ಮ ಭಯ ಮತ್ತು ದುರ್ಬಲತೆಯನ್ನು ಮರೆಮಾಚಲು ಅಂದು ಅಜ್ಜ ನಡೆಸಿದ್ದ ಹೋರಾಟವನ್ನು ನೋಡಿದ್ದ ಹೃತಿಕ್, ಅದನ್ನೇ ಅನುಸರಿಸಲು ಮುಂದಾಗಿದ್ದಾರೆ. ದೈಹಿಕ ಶಕ್ತಿಯ ಇತಿಮಿತಿಗಳ ನಡುವೆಯೂ ಪುರುಷರು ಗಟ್ಟಿತನ ಪ್ರದರ್ಶಿಸಬೇಕು ಎಂಬುದು ಸಮಾಜದ ನಿರೀಕ್ಷೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಹೃತಿಕ್ ಪೋಸ್ಟ್ ಸೆಲೆಬ್ರಿಟಿಗಳು ಶೀಘ್ರವಾಗಿ ಗುಣಮುಖರಾಗಿ ಎಂದು ಕಮೆಂಟ್ ಮಾಡಿದ್ದಾರೆ. ಹೃತಿಕ್ ರೋಷನ್ ಅವರು ʻಫೈಟರ್ʼ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಜತೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್ ಕೂಡ ನಟಿಸಿದ್ದಾರೆ.ಈಗಾಗಲೇ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೇ ಮೊದಲ ಬಾರಿಗೆ ಈ ಬಹುಬೇಡಿಕೆ ತಾರೆಯರು ತೆರೆ ಹಂಚಿಕೊಂಡಿದ್ದು, ಬಾಕ್ಸ್ ಆಫೀಸ್ನಲ್ಲಿಯೂ ಸಖತ್ ಸದ್ದು ಮಾಡಿದೆ. ಹೃತಿಕ್, ದೀಪಿಕಾ ಅಲ್ಲದೇ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಅವರಂತಹ ನಟರೂ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.